More

    ಜಾನಪದ ಸಾಹಿತ್ಯದಲ್ಲಿ ಅಡಗಿದೆ ಜೀವನ ಮೌಲ್ಯಗಳು: ಪ್ರೊ. ಚಂದ್ರಶೇಖರ ವಸ್ತ್ರದ

    ಗದಗ:ಜಾನಪದ ಸಾಹಿತ್ಯ ಎಂಬುದು ಕೊನೆಯಿರದ ತೀರ, ಅದರಲ್ಲಿ ಮಾನವ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೆ ನಿಜ ಮಾನವನಾಗುತ್ತಾನೆ. ಜಾನಪದ ಗೀತೆಗಳಲ್ಲಿ ಜೀವನ ಮೌಲ್ಯ ಅಡಗಿದೆ ಮತ್ತು ಅದರಿಂದ ತಿಳಿಯುವುದು ಸಾಕಷ್ಟಿದೆ ಎಂದು ಪ್ರೊ. ಚಂದ್ರಶೇಖರ ವಸ್ತ್ರದ ತಿಳಿಸಿದರು.

    ಅವರು ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಜೀವನ ದರ್ಶನ 29ನೇ ಮಾಸಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಅಕ್ಷರ ಜ್ಞಾನವಿಲ್ಲದ ನಮ್ಮ ಜನಪದರು ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಜನಪದ ಸಾಹಿತ್ಯವು ಜನಾಂಗದಿಂದ ಜನಾಂಗಕ್ಕೆ ಭಿನ್ನತೆಯನ್ನು ಪಡೆಯುತ್ತಾ ಹೋಗುತ್ತದೆ. ನಮ್ಮ ದೇಶದ ಸಂಸ್ಕೃತಿಯನ್ನು ತಿಳಿಯಬೇಕಾದರೆ ಜನಪದ ಸಾಹಿತ್ಯದ ಅಧ್ಯಯನ ತುಂಬಾ ಸಹಾಯಕಾರಿಯಾಗಿದೆ. ಕನ್ನಡ ಸಾಹಿತ್ಯವು, ವಚನ ಸಾಹಿತ್ಯ,ದಾಸ ಸಾಹಿತ್ಯದಿಂದ ಶ್ರೀಮಂತ ಗೊಂಡಿದೆ ಎಂದು ಉಪನ್ಯಾಸ ನೀಡಿದರು.

         ನಂತರ ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ನಿವೃತ್ತ ಪ್ರಾಚಾರ್ಯರಾದ ಡಾ.ಎನ್.ಎಮ್.ಅಂಬಲಿಯವರ ಮಾತನಾಡಿ ಕನ್ನಡ ಭಾಷೆಯು ಜಗತ್ತಿನ ಎಲ್ಲ ಭಾಷೆಗಳಿಗಿಂತ ಶ್ರೇಷ್ಠವಾದದ್ದು ಹಾಗೂ ಭಾವನಾತ್ಮಕ ಭಾಷೆಯಾಗಿದೆ. ಕನ್ನಡ ಸಾಹಿತ್ಯ ಕನ್ನಡ ಭಾಷೆಯಷ್ಟೇ ಪ್ರಾಚೀನ. ಅಷ್ಟೇ ವೈಭವಯುತ. ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ. ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಆದಿಕವಿ ಪಂಪನಿಂದ ಆರಂಭವಾಗಿ ಕುವೆಂಪು, ಬೇಂದ್ರೆ ಮೊದಲಾದವರು ಕೊಂಡಿಯಾಗಿ ಇಂದಿನ ಯುವ ತಲೆಮಾರಿನ ಆಕರ್ಷಕ ಬರಹಗಾರರವರೆಗೂ ವಿಶಿಷ್ಟ ಪರಂಪರೆಯನ್ನೇ ನಿರ್ಮಿಸಿದೆ ಎಂದರು.

    ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಪ್ರೊ. ಎಂ ಎನ್ ಕಾಮನಹಳ್ಳಿ ಅವರು ಮಾತನಾಡಿ ಸಂಸ್ಕಾರದಿಂದ ಬದುಕು ಸಾರ್ಥಕವಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಇಂದಿನ ಪೀಳಿಗೆಯವರಿಗೆ ಸಂಸ್ಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ. ಜೀವನದ ನಿಜ ಸತ್ಯ, ಅಂಕು-ಡೊಂಕುಗಳನ್ನು ತಿದ್ದಿ ಹೇಳುವುದು ಹಿರಿಯರ ಕೆಲಸ. ಅದನ್ನು ಪಾಲಿಸುವುದು, ಆಚರಣೆಗೆ ತರುವುದು ಕಿರಿಯರ ಜವಾಬ್ದಾರಿ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಚಿಂತನೆ ಆಲೋಚನೆ ತಾರ್ಕಿಕತೆ, ಒಳ್ಳೆಯ ಕೆಟ್ಟದ್ದನ್ನು ವಿಮರ್ಶಿಸುವ, ನಿರ್ಧರಿಸುವ ಸ್ವಾತಂತ್ರ್ಯವಿರುತ್ತದೆ. ತನ್ನ ಜೀವನದ ಶಿಲ್ಪಿ ತಾನೇ ಎಂದು ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಪ್ರತಿಭಾ ಸಂಪನ್ನತೆಯನ್ನು ತಾನೇ ಎಂದೂ ಅರಿಯಲಾರರು ಎಂದರು.

    ಕಾರ್ಯಕ್ರಮದಲ್ಲಿ ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ಡಾ. ಎನ್. ಎಂ. ಅಂಬಲಿಯವರ, ಪ್ರೋ. ಮಂಜುನಾಥ ಆರ್ ಅಂದಪ್ಪನವರ, ಶ್ರೀ ಗೌವರ್ಧನ ಬಡಿಗೇರ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

     ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಪ್ರಾರಂಭಿಸಲಾಯಿತು. ಕುಮಾರಿ ಐಶ್ವರ್ಯ ವಸ್ತ್ರದ ಪ್ರಾರ್ಥನಾ ಗೀತೆ ಹಾಡಿದರು. ಸಮಿತಿಯ ಮಹಿಳಾ ನಿರ್ದೇಶಕಿ ಶ್ರೀಮತಿ ಮಹಾದೇವಿ ಗೊಗೇರಿ ಸ್ವಾಗತ ಹಾಗೂ ಪರಿಚಯ ಭಾಷಣ ಮಾಡಿದರು. ಕಾರ್ಯದರ್ಶಿ ಗಳಾದ ಶ್ರೀ ಕೆ.ಆಯ್. ಕುರುಗೊಡ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ವಿದ್ವಾನ್ ಮಣಕವಾಡ ಗುರುಗಳಿಂದ ಸಂಗೀತ ಸೇವೆ, ಹಾಗೂ ಕುಮಾರಿ ದೀಕ್ಷಾ ಹಾಗೂ ದ್ರುವಿ ಹುಡೇದ ಸಹೋದರಿಯರು ನೃತ್ಯ ಪ್ರದರ್ಶೀದರು. ಹಿರಿಯ ನಿರ್ದೇಶಕರಾದ ಶ್ರೀ ಬಿ.ಎನ. ಯರನಾಳ ವಂದನಾರ್ಪಣೆ ಮಾಡಿದರು.

    ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಬಸವರಾಜ ಸುಂಕದ,ಸಹ ಕಾರ್ಯದರ್ಶಿ ಎಂ. ಕೆ. ಲಕ್ಕುಂಡಿ, ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ್, ಸಹಕೋಶಾಧ್ಯಕ್ಷರಾದ ಆರ್.ಬಿ.ಒಡೆಯರ, ನಿರ್ದೇಶಕರಾದ ವಿ. ಆರ್. ಕುಲಕರ್ಣಿ, ಅಮರೇಶ್ ಹಾದಿ, ಕಾರ್ತಿಕ್ ಮಡಿವಾಳರ್ ಮಹಾದೇವಿ ಗೋಗೇರಿ, ರಾಧಿಕಾ ಬಂದಂ, ಬಸವರಾಜ ಹಿರೇಮಠ,ಪ್ರಭಯಸ್ವಾಮಿ ಹಿರೇಮಠ ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts