More

     ಜನಮತ | ತಮಿಳುನಾಡು ವಿಧಾನಸಭೆಯ ಮಾದರಿ ನಡೆ

     ಜನಮತ | ತಮಿಳುನಾಡು ವಿಧಾನಸಭೆಯ ಮಾದರಿ ನಡೆಸರ್ಕಾರಿ ಶಾಲೆಯಲ್ಲಿ ಕಲಿತು ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಶೇ.7.5ರಷ್ಟು ಮೀಸಲು ನೀಡುವ ತಮಿಳುನಾಡು ವಿಧಾನಸಭೆಯ ವಿಧೇಯಕಕ್ಕೆ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ ಅಂಕಿತ ಹಾಕಿರುವುದರಿಂದ 2020-21ರ ಶೈಕ್ಷಣಿಕ ವರ್ಷದಿಂದಲೇ ತಮಿಳುನಾಡಿನಲ್ಲಿ ಈ ಮಸೂದೆ ಜಾರಿಗೆ ಬರಲಿದೆ. ರಾಜ್ಯ ವಿಧಾನಸಭೆಯಲ್ಲಿ ಸೆಪ್ಟೆಂಬರ್ 15ರಂದೇ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಗಿದ್ದರೂ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ.

    ‘ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುವಲ್ಲಿ ವಿಫಲವಾಗಿದೆ’ ಎಂದು ಡಿಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಧರಣಿ ನಡೆಸಿತ್ತು. ಆಗ ಸರ್ಕಾರ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿತು. ಬಳಿಕ ಅಕ್ಟೋಬರ್ 29ರಂದು ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಇನ್ನು ಮುಂದೆ ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಓದಿ ನೀಟ್ ಪಾಸಾದ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ.

    ಇದನ್ನೂ ಓದಿ: 2.5 ಲಕ್ಷ ರೂ.ಮೌಲ್ಯದ ಚಿನ್ನ ಕಳ್ಳತನ, ಮೊಮ್ಮಗನ ಮೇಲೆ ಅಜ್ಜಿ ದೂರು

    ಬಡವರು ವೈದ್ಯಕೀಯ ಪದವಿ ಪಡೆಯುವುದು ಗಗನಕುಸುಮವಾಗಿರುವ ಇಂದಿನ ಸನ್ನಿವೇಶದಲ್ಲಿ ತಮಿಳುನಾಡು ಸರ್ಕಾರದ ಈ ನಡೆ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪಕ್ಷಬೇಧ, ಜಾತಿಬೇಧ ಬದಿಗಿಟ್ಟು ತಮಿಳುನಾಡು ವಿಧಾನಸಭೆಯ ಎಲ್ಲ ಶಾಸಕರು ಒಟ್ಟಾಗಿ ಮಸೂದೆ ಬೆಂಬಲಿಸಿರುವುದು ವಿಶೇಷವಾಗಿದೆ.
    | ಪಂಪಾಪತಿ ಹಿರೇಮಠ್, ನಿವೃತ್ತ ಬ್ಯಾಂಕ್ ಅಧಿಕಾರಿ ಧಾರವಾಡ

    ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸ್ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts