More

    ಜನಮತ | ಅಂಚೆಕಚೇರಿಗಳಲ್ಲಿ ಕನ್ನಡ ಬಲ್ಲವರನ್ನು ನೇಮಿಸಿ

    ರಾಜ್ಯದ ಬಹಳಷ್ಟು ಅಂಚೆಕಚೇರಿಗಳಲ್ಲಿ ಇತ್ತೀಚೆಗೆ ಕನ್ನಡ ಬಾರದವರೇ ಹೆಚ್ಚಿಗೆ ನೇಮಕಾತಿ ಆಗುತ್ತಿರುವುದು ಬೇಸರದ ಸಂಗತಿ. ಈ ಸಮಸ್ಯೆ ಅಂಚೆಕಚೇರಿಗಳಲ್ಲಷ್ಟೆ ಅಲ್ಲದೆ ಬ್ಯಾಂಕುಗಳು ಮತ್ತು ಜೀವ ವಿಮಾ ಸಂಸ್ಥೆಗಳಲ್ಲೂ ಇದೆ. ಕೆಲ ದಿನಗಳ ಹಿಂದೆ ಒಂದು ರಜಿಸ್ಟರ್ಡ್ ಪಾರ್ಸಲ್ ಕಳಿಸುವುದಿತ್ತು. ಅದು ತಲುಪಬೇಕಾದ ವಿಳಾಸ ಮತ್ತು ನನ್ನ ವಿಳಾಸ ಎರಡನ್ನೂ ಕನ್ನಡದಲ್ಲಿ ಬರೆದು ಸಂಬಂಧಪಟ್ಟ ಗುಮಾಸ್ತನಿಗೆ ನೀಡಿದೆ. ಅವನು ಅದನ್ನು ನೋಡಿ, ‘ಯೆ ಕ್ಯಾ ಲಿಖಾ ಹೈ ಪಢಿಯೇ’ ಅಂತ ಹೇಳಿದ. ಮುಜುಗರವಿಲ್ಲದೆ ಓದಿದೆ. ಆಮೇಲೆ ನನ್ನ ಪಾರ್ಸಲ್ ತೆಗೆದುಕೊಂಡು ರಸೀದಿ ನೀಡಿದ.

    ಇದು ಒಂದು ಅಂಚೆಕಚೇರಿಯ ಕಥೆಯಲ್ಲ. ತುಂಬ ಕಡೆ ಇದೇ ಸಮಸ್ಯೆ ಇದೆ. ಹಿಂದೊಮ್ಮೆ ಅಂಚೆಕಚೇರಿಗಳು ಕೇವಲ ಅಂಚೆಪತ್ರಗಳನ್ನು ರವಾನಿಸುವ ಮತ್ತು ಹಂಚುವ ಕೆಲಸಗಳನ್ನಷ್ಟೆ ನಿರ್ವಹಿಸುತ್ತಿದ್ದವು. ಹೆಚ್ಚೆಂದರೆ ಟೆಲಿಗ್ರಾಂ ಕಳಿಸುವುದು ಮತ್ತು ಮನಿಆರ್ಡರ್ ಹಂಚುವ ಕೆಲಸದಲ್ಲಿ ಮಗ್ನವಾಗಿರುತ್ತಿದ್ದವು. ಆದರೆ ಈಗ ಅವು ಒಂದು ರೀತಿಯಲ್ಲಿ ಬ್ಯಾಂಕ್​ಗಳಿಗಿಂತ ಹೆಚ್ಚಿನ ಕೆಲಸ ನಿರ್ವಹಿಸುತ್ತಿವೆ. ಉದಾಹರಣೆಗೆ, ಪೋಸ್ಟ್​ಪೇಮೆಂಟ್ ಬ್ಯಾಂಕ್, ಇಎಮ್, ಎಟಿಎಂ, ವಿವಿಧ ಬಗೆಯ ಠೇವಣಿಗಳು, ಪೋಸ್ಟಲ್ ವಿಮಾಸೌಲಭ್ಯ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮುಂತಾದವುಗಳು.

    ಹೀಗಾಗಿ ಇಂದು ಅಂಚೆಕಚೇರಿಗಳೆಂದರೆ ವಿವಿಧೋದ್ದೇಶದ ಸಹಕಾರಿ ಸಂಘಗಳಂತೆ. ಅಲ್ಲಿ ವ್ಯವಹರಿಸುವ ಗ್ರಾಹಕರ ಸಂಖ್ಯೆಯು ದಿನೇದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗ ಗ್ರಾಹಕರ ಸೇವೆಗೆ ಕನ್ನಡ ಬಲ್ಲ ಸಿಬ್ಬಂದಿಯನ್ನು ನೇಮಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು, ಜನಸಾಮಾನ್ಯರಿಗೆ ಆಗುತ್ತಿರುವ ಅನಾನಕೂಲವನ್ನು ತಪ್ಪಿಸಬೇಕು.

    | ಡಾ.ಎಸ್.ಡಿ.ನಾಯ್ಕ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts