More

    ನಿತ್ಯವೂ ಮಹಾತ್ಮ ಗಾಂಧೀಜಿ ಸ್ಮರಿಸಿ: ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಕರೆ

    ಮಂಡ್ಯ: ಬ್ರಿಟಿಷರ ದಾಸ್ಯ ಸಂಕೋಲೆಯಿಂದ ದೇಶವಾಸಿಗಳನ್ನು ಮುಕ್ತಗೊಳಿಸಲು ಅಹಿಂಸಾತ್ಮಕ ಹೋರಾಟ ನಡೆಸಿದ ಮಹಾತ್ಮ ಗಾಂಧೀಜಿ ಅವರ ಸ್ಮರಣೆ ನಮ್ಮೆಲ್ಲರಿಗೂ ನಿತ್ಯ ನಿರಂತರವಾಗಿರಬೇಕೆಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ತಿಳಿಸಿದರು.
    ನಗರದ ರೈತ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಸ್ಮತಿ, ಜನಜಾಗೃತಿ ಜಾಥಾ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಭಾರತದ ಸ್ವಾಯತ್ತತೆ ಹಾಗೂ ಅಭಿವೃದ್ಧಿ ಶಕೆಗೆ ಗಾಂಧೀಜಿ ಪ್ರೇರಣೆಯಾಗಿದ್ದರು. ದೇಶ ದೊಡ್ಡದು ಎಂಬ ಚಿಂತನೆಯಿಂದ ತ್ಯಾಗ ಮತ್ತು ಸೇವೆಗೆ ನಮ್ಮನ್ನು ಮೀಸಲಾಗಿಸಿಕೊಳ್ಳಬೇಕು. ಸತ್ಯ ಮತ್ತು ಶಾಂತಿ ಹಾಗೂ ಅಹಿಂಸಾ ಪಾಲನೆಗೆ ಮುಂದಾಗಬೇಕೆಂಬುದು ಗಾಂಧೀಜಿ ಅವರ ಪ್ರೇರಣೆಯಾಗಿತ್ತು. ಇದನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಗಾಂಧೀಜಿ, ಬುದ್ಧ, ಬಸವ ಅವರಂತಹ ಮಹಾತ್ಮರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.
    ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ನಿಸ್ವಾರ್ಥ ಸೇವೆಗೆ ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರು ಹೆಸರುವಾಸಿ. ಸಮಾಜದ ಪರಿವರ್ತನೆಗೆ ನಾಂದಿ ಹಾಡಿದ್ದಾರೆ. ಆರ್ಥಿಕ ಸಬಲೀಕರಣ, ಸಾಮಾಜಿಕ ಪರಿವರ್ತನೆ, ವ್ಯಸನಮುಕ್ತ ಸಮಾಜದ ಆಶಯಗಳು ನಮ್ಮೆಲ್ಲರಿಗೂ ಅನುಕರಣೀಯ ಎಂದು ತಿಳಿಸಿದರು.
    ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ನಮ್ಮ ಯೋಜನೆಗಳ ಸಾಕಾರಕ್ಕೆ ಜಿಲ್ಲೆಯ ಜನತೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದ 1.50 ಲಕ್ಷ ಮದ್ಯವ್ಯಸನಿಗಳನ್ನು ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.
    ಜಿಲ್ಲಾ ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷ ಕೆ.ಹನುಮಂತು ಮಾತನಾಡಿದರು. ವೇದಿಕೆ ಮಾಜಿ ಅಧ್ಯಕ್ಷ ಎಂ.ಪಿ.ಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಅಶ್ವತ್‌ಕುಮಾರ್‌ಗೌಡ, ಶ್ರೀಕಂಠಸ್ವಾಮಿ, ಕೆ.ಸಿ.ಮಂಜುನಾಥ, ಕಾರಸವಾಡಿ ಮಹದೇವು, ಚಂದ್ರು, ಬೋರೇಗೌಡ, ತಗ್ಗಹಳ್ಳಿ ವೆಂಕಟೇಶ್, ಮುರುಳಿ, ಚೇತನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts