More

    ಅನ್ಯಗ್ರಹದಲ್ಲಿ ನೀರು ಪತ್ತೆಮಾಡಿದ ಜೇಮ್ಸ್​​ ವೆಬ್!; ಸುಳಿವು ನೀಡಿದ ನಾಸಾದ ಟೆಲಿಸ್ಕೋಪ್..

    ವಾಷಿಂಗ್ಟನ್: ಭೂಮಿಯಿಂದ ಸುಮಾರು ಒಂದು ಸಾವಿರ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹದಲ್ಲಿ ನೀರಿರುವ ಸುಳಿವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಜೇಮ್್ಸ ವೆಬ್ ಸ್ಪೇಸ್ ಟೆಲಿಸ್ಕೋಪ್ ನೀಡಿದೆ. WASP 96-b ಹೆಸರಿನ ಗ್ರಹವು ಭಾರಿ ಅನಿಲ, ಮೋಡಗಳು ಮತ್ತು ಮಬ್ಬು ವಾತಾವರಣ ಹೊಂದಿದ್ದು, ಅದರಲ್ಲಿ ನೀರಿನ ಚಿಹ್ನೆಗಳಿರುವುದನ್ನು ಜೇಮ್್ಸ ಟೆಲಿಸ್ಕೋಪ್ ಪತ್ತೆ ಹಚ್ಚಿದೆ ಎಂದು ನಾಸಾ ತಿಳಿಸಿದೆ. ಕ್ಷೀರಪಥದಲ್ಲಿರುವ 5 ಸಾವಿರಕ್ಕೂ ಹೆಚ್ಚು ಎಕ್ಸೋಪ್ಲಾನೆಟ್​ಗಳಲ್ಲಿ WASP 96-b ಕೂಡ ಒಂದಾಗಿದೆ. ಈ ಗ್ರಹ ಭೂಮಿಯಿಂದ 1,150 ಜ್ಯೋತಿರ್ವರ್ಷ ದೂರದಲ್ಲಿದೆ. ಒಂದು ಬೆಳಕು ಒಂದು ವರ್ಷದಲ್ಲಿ ಎಷ್ಟು ದೂರ ಕ್ರಮಿಸಬಹುದೋ ಅಷ್ಟು ದೂರವನ್ನು ಒಂದು ಜ್ಯೋತಿರ್ವರ್ಷ ಎಂದು ಕರೆಯಲಾಗುತ್ತದೆ. ಇದೇ ಮೊದಲ ಬಾರಿಗೆ ನಾವು ಅನ್ಯಗ್ರಹವೊಂದರಲ್ಲಿ ನೀರಿನ ಮೋಡದ ಸಾಕ್ಷ್ಯವನ್ನು ಪತ್ತೆ ಹಚ್ಚಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ. ಜೇಮ್್ಸ ವೆಬ್ ಟೆಲಿಸ್ಕೋಪ್ ಮಂಗಳವಾರ ಕಳುಹಿಸಿದ್ದ ನಕ್ಷತ್ರಪುಂಜ ಸಮೂಹದ ಮೊದಲ ಚಿತ್ರವನ್ನು ನಾಸಾ ಅನಾವರಣ ಮಾಡಿತ್ತು. ಅದರಲ್ಲಿ ಬ್ರಹ್ಮಾಂಡವು 13 ಶತಕೋಟಿ ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ತೋರಿಸಿತ್ತು.

    ಹೇಗಿದೆ WASP 96-b?: ದಕ್ಷಿಣ -ಆಕಾಶ ನಕ್ಷತ್ರಪುಂಜದ ಫೋನಿಕ್ಸ್​ನಿಂದ ಸರಿಸುಮಾರು 1,150 ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ರಹವು ಗುರುಗ್ರಹಕ್ಕಿಂತ ಅರ್ಧಕ್ಕಿಂತ ಕಡಿಮೆ ದ್ರವ್ಯರಾಶಿ ಮತ್ತು 1.2 ಪಟ್ಟು ಹೆಚ್ಚಿನ ವ್ಯಾಸ ಹೊಂದಿದ್ದು, ನಮ್ಮ ಸೂರ್ಯನನ್ನು ಸುತ್ತುವ ಇತರೆ ಗ್ರಹಗಳಿಗಿಂತ ಹೆಚ್ಚು ಉಬ್ಬಿದಂತೆ ಕಾಣುತ್ತದೆ. 538 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನದೊಂದಿಗೆ ಬಿಸಿಯಾಗಿರುತ್ತದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ. ಗಅಖಕ 96ಚಿ ತನ್ನ ಸೂರ್ಯನಂತಹ ನಕ್ಷತ್ರದ ಸಮೀಪದಲ್ಲಿ ಸುತ್ತುತ್ತದೆ. ಇದು ಒಂದು ಸುತ್ತನ್ನು ಪೂರ್ಣಗೊಳಿಸಲು ಮೂರೂವರೆ ಭೂ ದಿನಗಳನ್ನು ತೆಗೆದುಕೊಳ್ಳುತ್ತದೆ. ದೊಡ್ಡ ಗಾತ್ರ, ಕಡಿಮೆ ಕಕ್ಷೆಯ ಅವಧಿ , ಬಿರುಗಾಳಿಯ ವಾತಾವರಣ, ಆಕಾಶದಲ್ಲಿ ಹತ್ತಿರವಿರುವ ವಸ್ತುಗಳಿಂದಾಗಿ ಬೆಳಕಿನ ಕೊರತೆ ಈ ಗ್ರಹದಲ್ಲಿ ಕಾಣುತ್ತಿದೆ. ಇದರಿಂದಾಗಿ ಈ ಗ್ರಹವು ಜೀವಿಗಳು ವಾಸಿಸಲು ಅಷ್ಟು ಯೋಗ್ಯವಲ್ಲವೆಂದು ಕಾಣಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಆಕಾಶಕಾಯಗಳ ಚಿತ್ರ ಬಿಡುಗಡೆ: ಜೇಮ್್ಸ ವೆಬ್ ದೂರದರ್ಶಕವು ನಕ್ಷತ್ರಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಚಿತ್ರಗಳನ್ನು ಕಳುಹಿಸಿದ್ದು, ಅದನ್ನು ನಾಸಾ ಬಿಡುಗಡೆ ಮಾಡಿದೆ. ನಕ್ಷತ್ರಗಳಲ್ಲಿ ಪ್ರಪಾತಗಳಂತೆ ಕಾಣುವ ರಚನೆಗಳಿವೆ. ಲಯಬದ್ಧವಾಗಿ ನೃತ್ಯದಲ್ಲಿ ತೊಡಗಿರುವಂತೆ ಕಾಣುವ ನಕ್ಷತ್ರಗಳ ಸಮೂಹವಿದೆ. ಒಟ್ಟಿನಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿರುವ ಚಿತ್ರವನ್ನು ಜೇಮ್್ಸ ವೆಬ್ ಸೆರೆ ಹಿಡಿದಿದೆ. ಈ ಚಿತ್ರಗಳು ಖಗೋಳ ವಿಜ್ಞಾನ ಕ್ಷೇತ್ರದಲ್ಲಿನ ಅನ್ವೇಷಣೆ ಮತ್ತು ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ ಎಂದು ನಾಸಾ ಹೇಳಿದೆ.

    ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

    ಟ್ವಿಟರ್ ಟ್ರೆಂಡಿಂಗ್​ನಲ್ಲಿ ಪುನೀತ್ ರಾಜಕುಮಾರ್​; ವೈರಲ್ ಆಗುತ್ತಿದೆ ಲಕ್ಕಿಮ್ಯಾನ್ ಲುಕ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts