More

    ಬಾರ್ ತೆರೆಯಲು ಅನುಮತಿ ನೀಡಬೇಡಿ

    ಜಮಖಂಡಿ: ನಗರದ ಬಸವೇಶ್ವರ ವೃತ್ತ ಸಮೀಪ ವಿಜಯಪುರ ರಸ್ತೆ ಪಕ್ಕದ ರಿ.ಸ.ನಂ. 4734/ಬಿ/54 ರ ಕಟ್ಟಡದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸಾರ್ವಜನಿಕರು ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಮುಖಂಡರು ಮಾತನಾಡಿ, ಬಾರ್ ತೆರೆಯಲು ಉದ್ದೇಶಿಸಲಾಗಿರುವ ಕಟ್ಟಡದ ಎದುರಿಗೆ ಓಂಶಾಂತಿ ಸಂಸ್ಥೆಯ ಪವಿತ್ರವನ, ಪಕ್ಕದಲ್ಲಿ ಕೃಷ್ಣಾ ಕಣ್ಣಿನ ಆಸ್ಪತ್ರೆ, ಹಿಂದುಗಡೆ ಬಸವಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಗಳು ಇವೆ. ಅಲ್ಲದೆ, ಅದರ ಸುತ್ತಲೂ ಸಾರ್ವಜನಿಕರ ವಾಸದ ಮನೆಗಳು ಇವೆ. ಓಂಶಾಂತಿ ಸಂಸ್ಥೆಯ ಪವಿತ್ರವನದಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಆಧ್ಯಾತ್ಮಿಕ ಕೇಂದ್ರ ನಿರ್ವಹಿಸಲಾಗುತ್ತಿದೆ. ಆಧ್ಯಾತ್ಮಿಕ ಕೇಂದ್ರದ ಎದುರು ಬಾರ್ ತೆರೆಯುವುದರಿಂದ ಬ್ರಹ್ಮಕುಮಾರಿಯರಿಗೆ ಮತ್ತು ಪವಿತ್ರವನಕ್ಕೆ ಬರುವ ಸಾಧಕರಿಗೆ ತೊಂದರೆ ಉಂಟಾಗುತ್ತದೆ ಎಂದು ದೂರಿದರು.

    ನಗರಸಭೆ ಪೌರಾಯುಕ್ತ, ಅಬಕಾರಿ ಇಲಾಖೆ ನಿರೀಕ್ಷಕ ಹಾಗೂ ಸ್ಥಳೀಯ ಶಾಸಕರ ಕಚೇರಿಗೆ ಮನವಿ ಸಲ್ಲಿಸಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

    ಓಂಶಾಂತಿ ಸಂಸ್ಥೆ ಪರವಾಗಿ ನಿಲೇಶ ಹಜಾರೆ, ರಾಮಕೃಷ್ಣ ಪನಾಳಕರ, ಕೃಷ್ಣಾ ಕಣ್ಣಿನ ಆಸ್ಪತ್ರೆ ಪರವಾಗಿ ಅತ್ತೆಪ್ಪ ಜನವಾಡ, ಬಸವಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ, ಸಾರ್ವಜನಿಕರ ಪರವಾಗಿ ಮಹಾಂತೇಶ ಹುಲಮನಿ, ವಿನೋದ ಅಡಹಳ್ಳಿ, ಮುರಳೀಧರ ಸಾರಡಾ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts