More

    ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಮಾಡಿ

    ಜಮಖಂಡಿ: ಉತ್ತರಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದು ಘಟನೆ ಖಂಡಿಸಿ ನಗರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಹಾಗೂ ದಲಿತ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂಜಯ ಇಂಗಳೆ ಅವರ ಮೂಲಕ ರಾಷ್ಟ್ರಪತಿ ಮನವಿ ಸಲ್ಲಿಸಲಾಯಿತು.

    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪರುಶರಾಮ ಕಾಂಬಳೆ ಮಾತನಾಡಿ, ಈ ಘೋರ ಅಪರಾಧ ಕೃತ್ಯಕ್ಕೆ ಕೋಟ್ಯಂತರ ಭಾರತೀಯರು ತಲೆತಗ್ಗಿಸುವಂತಾಗಿದೆ. ರಾಷ್ಟ್ರಪತಿಗಳು, ರಾಜ್ಯಪಾಲರು ಮಧ್ಯ ಪ್ರವೇಶಿಸಿ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಿ ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು.

    ಯಾಶೀನ್ ಲೋದಿ, ಅಪ್ಪಾಸಿ ಕಾಂಬಳೆ, ಸದಾಶಿವ ಐನಾಪುರ, ಶಾಮರಾವ ಮಾದರ, ಮಲ್ಲು ಕಾಂಬಳೆ, ರವಿ ಚಲವಾದಿ, ರವಿ ಜಂಬಗಿ, ಗಿರೀಶ ಬಾಗಿ, ಈಶ್ವರ ತುಂಗಳ, ಅನಿಲ ತಿಕೋಟಾ, ಅಮಿತ್ ಸೂರಗೊಂಡ, ಯಲ್ಲಪ್ಪ ಕಾಂಬಳೆ, ರಾಜು ಪೋಳ, ಸದಾಶಿವ ಕಾಂಬಳೆ, ಸುರೇಶ ತಳಗಡೆ, ಅಶೋಕ ಕಿತ್ತೂರ, ಗಫೂರ ಮುಲ್ಲಾ, ಮೋದಿನ ಮುಲ್ಲಾ, ಮಲ್ಲೇಶ ಗಾಡಿವಡ್ಡರ, ಹಣಮಂತ ಕಾಂಬಳೆ ಸಹಿತ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts