More

    ಮೂಲೆಗುಂಪಾದ ಸಂಪರ್ಕ ಸೇತುವೆ ದೋಣಿ

    ಎಂ.ಎನ್. ನದಾಫ್
    ಜಮಖಂಡಿ:
    ಕಳೆದ ವರ್ಷ ಕೃಷ್ಣಾ ನದಿ ನೆರೆ ಹಾವಳಿಯಲ್ಲಿ ಸಿಲುಕಿದ್ದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದ ದೋಣಿ ಅಧಿಕಾರಿಗಳ ನಿರ್ಲಕ್ಷೃದಿಂದ ಈಗ ಕೃಷ್ಣಾ ನದಿಯಲ್ಲಿ ಮುಳುಗಿ ಹಾಳಾಗುವ ಸ್ಥಿತಿಯಲ್ಲಿದೆ.
    ತಾಲೂಕಿನ ಮುತ್ತೂರ ಗ್ರಾಮದಲ್ಲಿ ಕಳೆದ ವರ್ಷ ಕೃಷ್ಣಾ ನದಿ ಪ್ರವಾಹ ಸಂದರ್ಭದಲ್ಲಿ ನೂರಾರು ಜನರನ್ನು ಹೊತ್ತು ತಂದು ಜನರ ಪ್ರಾಣ ರಕ್ಷಿಸಿದ್ದ ದೋಣಿ ಸದ್ಯ ಮೂಲೆಗುಂಪಾಗಿದೆ. ಗ್ರಾಮಕ್ಕೆ ಹೊಸ ದೋಣಿ ತಂದಿದ್ದರಿಂದ ಗ್ರಾಮದ ಅಂಬಿಗರು ಹಳೆಯ ದೋಣಿಯನ್ನು ಬಳಸದೆ ಹಾಗೆಯೇ ನದಿ ನೀರಿನಲ್ಲಿ ಬಿಟ್ಟಿದ್ದರಿಂದ ಅದರಲ್ಲಿ ನೀರು ತುಂಬಿ ಕೊಳೆಯುತ್ತಿದೆ.

    ಲಕ್ಷಾಂತರ ರೂ. ಮೌಲ್ಯದ ದೋಣಿ ಕೃಷ್ಣಾರ್ಪಣವಾಗುತಿದ್ದರೂ ನೋಡಿಯೂ ನೋಡದಂತೆ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ದೋಣಿಯನ್ನು ಸಂರಕ್ಷಣೆ ಮಾಡುವ ಜತೆಗೆ ಬೇರೆ ಎಲ್ಲಾದರೂ ಬಳಸಲು ಅವಕಾಶವಿದ್ದರೆ ಅಲ್ಲಿಗೆ ಹಸ್ತಾಂತರ ಮಾಡಬಹುದಾಗಿದೆ.

    ಮುತ್ತೂರ ಗ್ರಾಮದಿಂದ ಅಥಣಿ ತಾಲೂಕಿನ ಝುಂಜರವಾಡ ಗ್ರಾಮಕ್ಕೆ ಹಾಗೂ ನೆರೆ ಉಂಟಾದ ಸಂದರ್ಭದಲ್ಲಿ ಹಲವಾರು ಕಿ.ಮೀ. ದೂರ ಇರುವ ಮುತ್ತೂರ ಗಡ್ಡೆಗೂ ತೆರಳಲು ಬಳಸುವ ಸಂಪರ್ಕ ಕೊಂಡಿಯಾಗಿರುವ ದೋಣಿಯನ್ನು ಹಾಳುಮಾಡದೆ ಸಂರಕ್ಷಿಸಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರ ಒತ್ತಾಸೆಯಾಗಿದೆ.

    ನಾನು ಹೊಸದಾಗಿ ಗ್ರಾಮಕ್ಕೆ ಬಂದಿದ್ದೇನೆ. ದೋಣಿ ಬಳಕೆಯಾಗದೆ ನೀರಲ್ಲಿ ಮುಳುಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ನಮ್ಮ ಸಿಬ್ಬಂದಿಯನ್ನು ದೋಣಿ ಇರುವ ನದಿ ಭಾಗಕ್ಕೆ ಕಳುಹಿಸಿ ಸರಿಪಡಿಸುತ್ತೇನೆ. ಮುಂದಿನ ದಿನಗಳಲ್ಲಿ ಬಳಕೆ ಬರುವಂತೆ ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳುತ್ತೇನೆ.
    ಆರ್.ಎಚ್. ಕೆಂಪನ್ನವರ, ಪಿಡಿಒ ಮುತ್ತೂರ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts