More

    ಬಲೆಗೆ ಬೀಳದ ಚಿರತೆ

    ಜಮಖಂಡಿ: ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಐದು ದಿನಗಳಿಂದ ಚಿರತೆ ಓಡಾಡಿಕೊಂಡಿದ್ದರೂ ಬಲೆಗೆ ಬೀಳದಿರುವುದು ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

    ಗ್ರಾಮದಲ್ಲಿ ಅಳವಡಿಸಿರುವ ಬೋನು ಹತ್ತಿರ ಸೋಮವಾರ ರಾತ್ರಿ ಸುಳಿದಾಡಿರುವ ಚಿರತೆ, ಬೋನಿನ ಬಳಿ ಕಟ್ಟಿ ಹಾಕಿರುವ ನಾಯಿ ಮತ್ತು ಮೇಕೆ ಸುತ್ತಲೂ ಹಾಗೂ ಪಕ್ಕದ ದ್ರಾಕ್ಷಿ ತೋಟದಲ್ಲಿಯೂ ಅದು ಅಲೆದಾಡಿದ ಹೆಜ್ಜೆ ಗುರುತುಗಳು ಕಂಡು ಬಂದಿವೆ. ನಾಯಿ ಮತ್ತು ಮೇಕೆಗೆ ಯಾವುದೇ ರೀತಿ ದಾಳಿ ಮಾಡದೆ ಹಾಗೆ ಬಿಟ್ಟು ಹೋಗಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

    ಚಿರತೆ ಚಲನವಲನಗಳ ಬಗ್ಗೆ ನಿಗಾವಹಿಸಲು ಸೋಮವಾರ 13 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಒಂದೇ ಸ್ಥಳದ ಸುತ್ತಮುತ್ತ ಸುತ್ತಾಡುತ್ತಿರುವ ಚಿರತೆ ಸೆರೆ ಹಿಡಿಯುವುದಕ್ಕೆ ಗೂಲಿಹಳ್ಳಿಯಿಂದ 2, ಧಾರವಾಡ 1, ಕಲಘಟಗಿ1, ಕಣಕುಂಬಿಯಿಂದ 1 ಸೇರಿ 5 ಬೋನುಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಬೀಳಗಿ ಹಾಗೂ ಭೀಮಗಢದ 2 ಬೋನುಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಲಾಗಿದೆ.

    ಬಿಳಿಗಿರಿ ರಂಗನಬೆಟ್ಟದಿಂದ ತಜ್ಞರ ಆಗಮನ
    ಚಿರತೆ ಕಾಣಿಸಿಕೊಂಡ ಸ್ಥಳಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಭೇಟಿ ನೀಡಿ ಮಾತನಾಡಿ, ಇಲ್ಲಿನ ಅರಣ್ಯಾಧಿಕಾರಿಗಳ ಬಳಿ ಯಾವುದೇ ರಕ್ಷಣಾ ಪರಿಕರಗಳು ಇಲ್ಲ. ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಸಂಜಯ ಮೋಹನ ಅವರಿಗೆ ಮೊಬೈಲ್ ಮೂಲಕ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಅಧಿಕಾರಿ ಸಂಜಯ ಮೋಹನ, ಚಿರತೆ ಸೆರೆಗೆ ಬಿಳಿಗಿರಿ ರಂಗನಬೆಟ್ಟದ ತಜ್ಞರನ್ನು ಕಳುಹಿಸಲಾಗುವುದು. ಡ್ರೋನ್ ಕ್ಯಾಮರಾ ಮೂಲಕ ಚಿರತೆ ಪತ್ತೆ ಹಚ್ಚಲಾಗುವುದು ಎಂದು ಕುಲಕರ್ಣಿ ಅವರಿಗೆ ತಿಳಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts