More

    ಮೂಲ ಸೌಕರ್ಯ ಒದಗಿಸಲು ಬದ್ಧ

    ಜಮಖಂಡಿ: ಜಮಖಂಡಿ ಶೈಕ್ಷಣಿಕ ನಗರವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳಿಗೆ ಮೂಲ ಸೌಕರ್ಯಗಳು ಹೆಚ್ಚಾಗಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

    ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಪಂ ಇಂಜಿನಿಯರಿಂಗ್ ವಿಭಾಗದ 2018-19 ನೇ ಸಾಲಿನ ಅನುದಾನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 6 ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳ ಬೇಡಿಕೆಯಂತೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ತರಲಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.

    ನಗರದ ಪಿಬಿ ಹೈಸ್ಕೂಲ್‌ನ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಗುರುದೇವ ರಾನಡೆ ಭವನಕ್ಕೆ ಈಗಾಗಲೇ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪ್ರಸ್ತುತ 25 ಲಕ್ಷ ರೂ. ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಆಗಿದೆ. ಕರೊನಾದಿಂದ ಕಾಮಗಾರಿ ವಿಳಂಬವಾಗಿದೆ. ಕೆಲವೇ ದಿನದಲ್ಲಿ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.

    ಎನ್.ಎಸ್.ದೇವರವರ, ನಜೀರ ಕಂಗನೊಳ್ಳಿ, ರಾಜು ಪಿಸಾಳ, ಪ್ರಕಾಶ ಕಣಬೂರ, ಪರಮಾನಂದ ಗವರೋಜಿ, ದಾನೇಶ ಘಾಟಗೆ, ಈಶ್ವರ ವಾಳೆನ್ನವರ, ಪ್ರವೀಣ ನಾವಂದರ, ದಿಲಾವರ ಶಿರೋಳ, ಪ್ರಲ್ಹಾದ ಕುಲಕರ್ಣಿ, ಪೀರಾ ಖಾದರಿ, ಸಿದ್ದು ಮೀಸಿ, ಬಸವರಾಜ ಗುಡ್ಲಮನಿ, ಎಇಇ ವಿ.ಎ.ಗೌಡರ, ಎಇ ರಾಮಪ್ಪ ರಾಠೋಡ, ಮಹೇಶ ಮಲ್ಲಣ್ಣವರ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts