More

    ನಾಳೆಯಿಂದ ಸಿರಿಧಾನ್ಯ ಸಾವಯವ, ಆಹಾರ ಮೇಳ

    ಜಮಖಂಡಿ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಾ.14 ಮತ್ತು 15 ರಂದು ಸಿರಿಧಾನ್ಯ ಸಾವಯವ, ಆಹಾರ ಮೇಳ ಮತ್ತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

    14 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ, ವಿಪ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಜಿಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು, ಗಣ್ಯರು ಭಾಗವಹಿಸುವವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    14 ರಂದು ಬೆಳಗ್ಗೆ 8 ಗಂಟೆಗೆ ಮಹಿಳೆಯರಿಗಾಗಿ ಸಿರಿಧಾನ್ಯ ರಂಗೋಲಿ ಸ್ಪರ್ಧೆೆ, ಬೆಳಗ್ಗೆ 9.30 ಗಂಟೆಗೆ ಹುಲ್ಯಾಳ ತಂಡದವರಿಂದ ಕೃಷಿ ಕಲಾ ಜಾಥಾ, ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗಾಗಿ ಸಿರಿಧಾನ್ಯ ಅಡುಗೆ ಸ್ಪರ್ಧೆ ಜರುಗುವುದು. 3 ಗಂಟೆಯಿಂದ ವಿವಿಧ ಗೋಷ್ಠಿಗಳು, ಸಂಜೆ 6 ಗಂಟೆಗೆ ಹಳ್ಳಿ ಸೊಗಡು ಕೃಷಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

    ಮಾ. 15 ರಂದು ಮಳೆ ನೀರು ಕೊಯ್ಲು ಮತ್ತು ಕೊಳವೆ ಬಾವಿಗಳ ಮರುಪೂರ್ಣ ತಾಂತ್ರಿಕತೆ ಬಗ್ಗೆ ಚಿತ್ರದುರ್ಗದ ಡಾ. ಎನ್.ಜೆ. ದೇವರಾಜರಡ್ಡಿ, ಸಿರಿಧಾನ್ಯಗಳ ಪೌಷ್ಟಿಕತೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗಳ ಕುರಿತು ಡಾ. ಕಾಶೀಬಾಯಿ ಕ್ಯಾದಗಿ, ಹವಾಮಾನ ಬದಲಾವಣೆ ಕುರಿತು ಡಾ.ರವಿ ಎಚ್.ಪಾಟೀಲ, ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗಳ ಮೂಲಕ ರೈತರ ಸಶಕ್ತಿಕರಣ ಕುರಿತು ಡಾ.ಸಂಗಪ್ಪ ಮಾತನಾಡುವರು. ಮಧ್ಯಾಹ್ನ 3 ಗಂಟೆಗೆ ರೈತರಿಂದ ಅನುಭವ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

    ಉಪ ಕೃಷಿ ನಿರ್ದೇಶಕ ಡಾ.ಆರ್.ಜಿ. ನಾಗನ್ನವರ, ಸಹಾಯಕ ನಿರ್ದೇಶಕ ಬಿ.ಜಿ. ಮಾಳೇದ, ಪ್ರೊಬೇಷನರಿ ಸಹಾಯಕ ನಿರ್ದೇಶಕಿ ಪ್ರೀತಿ ತೇಲಿ, ಸಹಾಯಕ ನಿರ್ದೇಶಕ ಎಂ.ಎಸ್. ಬುಜರುಕ್, ಕೃಷಿ ಇಲಾಖೆಯ ಆರ್.ಎನ್. ತುಳಸಿಗೇರಿ, ಎಸ್.ಎಂ. ಬಿರಾದಾರ, ಮೈನುದ್ದಿನ್ ಜಮಖಂಡಿ ಇತರರು ಇದ್ದರು.

    ಹೆಸರು ನೋಂದಾಯಿಸಿ
    ಸಿರಿಧಾನ್ಯ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕೃಷಿ ಅಧಿಕಾರಿ ಶೀಲಾ ಪಾಟೀಲ (82779 33571) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ನಿರ್ದೇಶಕಿ ಚೇತನಾ ಪಾಟೀಲತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts