More

    ವಿತರಣೆಗೆ 40 ಸಾವಿರ ರೈತಸ್ನೇಹಿ ಸಸಿಗಳು ಸಿದ್ಧ

    ಜಮಖಂಡಿ: ಪರಿಸರದಲ್ಲಿ ಗಿಡ-ಮರಗಳ ಸಂಖ್ಯೆ ಹೆಚ್ಚಾಗಲಿ ಎಂದು ನಗರದ ಸಾಮಾಜಿಕ ಅರಣ್ಯ ವಲಯ ಇಲಾಖೆಯಿಂದ 40 ಸಾವಿರಕ್ಕೂ ಅಧಿಕ ಸಸಿಗಳನ್ನು ಬೆಳೆಸಲಾಗಿದೆ.

    ರೈತರು ತಮ್ಮ ಜಮೀನುಗಳಲ್ಲಿ, ಮನೆಗಳ ಹತ್ತಿರ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ರೈತಸ್ನೇಹಿ ಗಿಡ-ಮರಗಳಾದ ನುಗ್ಗೆ, ಮಾವು, ಶ್ರೀಗಂಧ, ಹೆಬ್ಬೆವು, ಸಾಗವಾಣಿ, ಲಿಂಬು, ಸಿಲ್ವರ್ ಓಕ್, ಕರಿಬೇವು, ಬಸವನ ಪಾದ, ಪೇರು ಸೇರಿದಂತೆ ಆದಾಯ ಬರುವಂತಹ ಹಲವಾರು ಸಸಿಗಳನ್ನು ಬೆಳೆಸಿದ್ದಾರೆ.

    ಅರಣ್ಯ ಕಡಿಮೆಯಾಗುತ್ತಿರುವುದನ್ನು ಮನಗಂಡು ಸರ್ಕಾರ ಕೃಷಿ ಪ್ರೋತ್ಸಾಹ ಯೋಜನೆಯಡಿ ಗಿಡ-ಮರಗಳನ್ನು ಬೆಳೆಸುವ ರೈತರಿಗೆ ಪ್ರತಿ ಎಕರೆಗೆ 160 ಸಸಿಗಳನ್ನು ನೀಡುವುದರ ಜತೆಗೆ ಅವುಗಳ ಪೋಷಣೆಗೆ ಮೂರು ವರ್ಷಕ್ಕೆ ಪ್ರತಿ ಸಸಿಗೆ 100 ರೂ. ಅವರ ಖಾತೆಗೆ ನೇರವಾಗಿ ಜಮಾ ಮಾಡುತ್ತದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಅರಣ್ಯಾಧಿಕಾರಿ ಡಿ.ಎಲ್. ಕುಲಕರ್ಣಿ ತಿಳಿಸಿದ್ದಾರೆ.

    ರೈತರಿಗೆ, ಶಾಲೆ-ಕಾಲೇಜು, ಸಂಘ-ಸಂಸ್ಥೆಗಳಿಗೆ, ಗ್ರಾಪಂಗಳಿಗೆ ಪರಿಸರ ಪ್ರೇಮಿಗಳಿಗೆ ರಿಯಾಯಿತಿ ದರ ಹಾಗೂ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ಹಸಿರು ವೃದ್ಧಿಗೆ ಇಲಾಖೆ ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.

    ಅಧಿಕಾರಿ ಕಾಳಜಿ
    ಕರೊನಾ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಸಸಿಗಳನ್ನು ಬೆಳೆಸುವ ಕೂಲಿ ಕಾರ್ಮಿಕರು, ಸಿಬ್ಬಂದಿ ಬರದೆ ಇದ್ದ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಡಿ.ಎಲ್. ಕುಲಕರ್ಣಿ ಅವರು ತಮ್ಮ ಹುದ್ದೆಯ ಗಮ್ಮತ್ತನ್ನು ಲೆಕ್ಕಿಸದೆ ತಾವೇ ಸಸಿಗಳಿಗೆ ನೀರುಣಿಸಿ ಬೆಳೆಸುವ ಮೂಲಕ ಪರಿಸರಪ್ರೇಮ ಮೆರೆದಿದ್ದಾರೆ.


    ,



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts