More

    ಬಿಜೆಪಿ ಪಕ್ಷದ ಹಿರಿಯರ ನಿರ್ಣಯ

    ಜಮಖಂಡಿ: ಬಿ.ಎಸ್. ಸಿಂಧೂರ ಅವರನ್ನು ಜಿಲ್ಲಾ ಮುಖಂಡರು ಹಾಗೂ ಡಿಸಿಎಂ ಅವರ ಗಮನಕ್ಕೆ ತಂದು ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ. ಅವರ ಉಚ್ಚಾಟನೆ ನಿಯಮಾನುಸಾರವಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಎಂ.ಬಿ. ನ್ಯಾಮಗೌಡ ತಿಳಿಸಿದರು.

    ಜಮಖಂಡಿ ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ತರಹ ಜಾತಿ ವ್ಯವಸ್ಥೆ ಇಲ್ಲ, ಎಲ್ಲ ಸಮಾಜದವರಿಗೂ ಸಮಾನ ಅವಕಾಶ ನೀಡಲಾಗಿದೆ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಹೇಳಿದಂತೆ ಇಲ್ಲಿ ಏನೂ ನಡೆಯುವುದಿಲ್ಲ. ಎಲ್ಲವೂ ಪಕ್ಷದ ಹಿರಿಯರ ನಿರ್ಣಯವಾಗಿರುತ್ತದೆ. ಲಿಂಗಾಯತ ಸಮುದಾಯದ ಮುಖಂಡರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಬಿ.ಎಸ್. ಸಿಂಧೂರ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಗರದ ರಮಾ ನಿವಾಸದಲ್ಲಿ ಶುಕ್ರವಾರ ಸುದಿಗೋಷ್ಠಿಯಲ್ಲಿ ತಿಳಿಸಿದರು.

    ಬಿಡಿಸಿಸಿ ಚುನಾವಣೆ ಆಯ್ಕೆ ಕೋರ್ ಕಮಿಟಿಯಿಂದ ನಾಲ್ಕಾರು ಭಾರಿ ಸಭೆ ನಡೆಸಿದ ವೇಳೆ ಕಮಿಟಿ ಆಯ್ಕೆ ಮಾಡುವವರನ್ನು ಗೆಲ್ಲಿಸಿ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಮೊದಲೇ ತಿಳಿವಳಿಕೆ ನೀಡಲಾಗಿತ್ತು. ಬಿ.ಎಸ್. ಸಿಂಧೂರ ಅವರು ಪಕ್ಷದ ಮುಖಂಡರ ಮುಂದೆ ಒಪ್ಪಿಗೆ ಸೂಚಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಏಗಪ್ಪ ಸವದಿ ಮಾತನಾಡಿ, ಬಿ.ಎಸ್. ಸಿಂಧೂರ ಅವರು ನಮ್ಮ ಜತೆಗೆ ಇದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ನಮಗೆ ಬರಬೇಕಿದ್ದ 5 ಮತಗಳನ್ನು ಲಕ್ಷಾಂತರ ಹಣಕ್ಕೆ ಡೀಲ್ ಮಾಡಿಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

    ಸಿಂಧೂರ ಅವರು ಪಕ್ಷಕ್ಕೆ 9.24 ಎಕರೆ ಜಮೀನು ನೀಡುತ್ತೇನೆ ಎಂದಿದ್ದಾರೆ. ಆದರೆ ಅವರು ಸರಿಯಾಗಿ ಮತ ಚಲಾಯಿಸಿದ್ದರೆ ಈ ಮಾತು ಆಡುವ ಪ್ರಶ್ನೆಯೇ ಬರುತ್ತಿರಲಿಲ್ಲ. ಬಿಡಿಸಿಸಿಯಲ್ಲಿ ಮರು ಮತ ಎಣಿಕೆ ಮಾಡುವುದಕ್ಕೆ ಬರುವುದಿಲ್ಲ. ಅವರು ಮರು ಮತ ಎಣಿಕೆ ಮಾಡಿಸಿ ಐದು ಮತಗಳು ಎಲ್ಲಿಗೆ ಹೋಗಿವೆ ಎಂಬುದರ ಬಗ್ಗೆ ಸಾಬೀತು ಪಡಿಸಿದರೆ ಅವರು ನೀಡುವುದಕ್ಕೆ ಮುಂದಾಗಿರುವ ಜಮೀನಿನ ಎರಡು ಪಟ್ಟು ಹೆಚ್ಚಿಗೆ ಅವರಿಗೆ ಪಕ್ಷದಿಂದ ಜಮೀನು ಕೊಡಿಸಲಾಗುವುದು ಎಂದು ಸವಾಲು ಹಾಕಿದರು.

    ಅವರ ಮೇಲೆ ನಂಬಿಕೆ ಇಟ್ಟು ನಾವು ಕಾರ್ಯ ಮಾಡುತಿದ್ದೇವು. ಆದರೆ ನಮ್ಮಲ್ಲಿನ ಮಾಹಿತಿಯನ್ನು ಅವರು ಸೋರಿಕೆ ಮಾಡಿದ್ದು ಅವರು ಯಾರ‌್ಯಾರ ಜತೆ ಮಾತನಾಡಿದ್ದಾರೆ ಎಂದು ಫೋನ್ ರಿಕಾರ್ಡ್‌ಲಿಸ್ಟ್‌ನಲ್ಲಿ ಎಲ್ಲವೂ ಬಯಲಾಗುತ್ತದೆ ಎಂದರು.

    ಪಕ್ಷದ 18 ಜನರು ಆಣೆ ಪ್ರಮಾಣ ಮಾಡಿದ್ದು ನಮ್ಮ ಹತ್ತಿರದಿಂದಲೂ ತಮಗೆ ಬೇಕಾದನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ 5 ಜನರು ಲಕ್ಷಾಂತರ ರೂ. ಗಳಿಗೆ ಮತ ಮಾರಿಕೊಂಡಿದ್ದಾರೆ. ಅವರನ್ನು ಗುರುತಿಸುವ ಕಾರ್ಯ ನಡೆದಿದ್ದು ಮುಂದಿನ ದಿನಗಳಲ್ಲಿ ಪಕ್ಷದಿಂದ ಕ್ರಮ ಜರುಗಿಸಲಾಗುವುದು ಎಂದರು.

    ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿ, ಕ್ಷೇತ್ರದ ಬಿಜೆಪಿಯಲ್ಲಿ ಲಿಂಗಾಯತರನ್ನು ರಾಜಕೀಯವಾಗಿ ತುಳಿಯುವ ಕಾರ್ಯ ನಡೆದಿಲ್ಲ. ಪಕ್ಷದ ಎಲ್ಲ ಪ್ರಮುಖ ಸ್ಥಾನಗಳಿಗೆ ಲಿಂಗಾಯತ ಸೇರಿ ಎಲ್ಲ ಸಮಾಜಕ್ಕೆ ಸಮಾನ ಸ್ಥಾನಮಾನ ನೀಡಲಾಗಿದೆ ಎಂದರು.

    ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಯಮನೂರ ಮೂಲಂಗಿ ಮಾತನಾಡಿ, ಪಕ್ಷ ನೀಡಿದ ನೋಟಿಸ್‌ಗೆ ಸಮಂಜಸ ಉತ್ತರ ನೀಡದೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಜತೆ ಸಂಪರ್ಕದಲ್ಲಿ ಇರುವುದರಿಂದ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದರು.

    ಸಿದ್ದಪ್ಪ ಬಿಳ್ಳೂರ, ಕುಶಾಲ ವಾಗ್ಮೋರೆ, ಗಣೇಶ ಶಿರಗಣ್ಣವರ, ರಮೇಶ ಆಲಬಾಳ, ಮಲ್ಲು ದಾನಗೌಡರ, ಪ್ರದೀಪ ನಂದೆಪ್ಪನವರ, ವಿನಾಯಕ ಗವಳಿ, ಸಿದ್ದು ನ್ಯಾಮಗೌಡ, ಸಂಗು ದಳವಾಯಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts