More

    ಜಲ್‌ಜೀವನ್ ಮಿಷನ್ ಕಾಮಗಾರಿ ಕಳಪೆ

    ಎನ್.ಆರ್.ಪುರ: ತಾಲೂಕಿನಾದ್ಯಂತ ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಎಲ್ಲ ಕಾಮಗಾರಿಗಳು ಕಳಪೆಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮೆಣಸೂರು ಗ್ರಾಪಂನಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

    ಗ್ರಾಮಸ್ಥ ಸೀಮೋನ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯ ಎಲ್ಲ ಕಾಮಗಾರಿ ಕಳಪೆಯಾಗಿದೆ. ಕೆಲವು ಗ್ರಾಮಗಳಲ್ಲಿ ಈ ಯೋಜನೆಯ ಪೈಪ್‌ಲೈನ್‌ಗೆ ಮಾಡಿರುವ ಕಂದಕಗಳನ್ನು ಮುಚ್ಚದೆ ಹಾಗೆ ಬಿಡಲಾಗಿದೆ. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ ನಿರ್ಮಿಸಿದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾದ ಒಂದೇ ವರ್ಷದಲ್ಲಿ ಸೋರುತ್ತಿವೆ ಎಂದು ಆರೋಪಿಸಿದರು.
    ಗ್ರಾಮಸ್ಥ ಚೆರಿಯಾ ಮಾತನಾಡಿ, ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು ಬೆಳೆದ ಬೆಳೆಗಳು ನಾಶವಾಗಿ ಸಂಕಷ್ಟ ಎದುರಾಗಿದೆ. ಆನೆಗಳಿಗೆ ಸೂಕ್ತ ಆಹಾರ ಒದಗಿಸಿದರೆ ನಾಡಿನ ಕಡೆ ಮುಖ ಮಾಡುತ್ತಿರಲಿಲ್ಲ ಎಂದು ದೂರಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್, ಆನೆಗಳಿಗೆ ಅರಣ್ಯ ಇಲಾಖೆಯಿಂದ ಆಹಾರ ನೀಡಲು ಸಾಧ್ಯವೇ, ಅರಣ್ಯ ಪ್ರದೇಶಗಳಲ್ಲಿ ಆನೆಗಳಿಗೆ ಬೇಕಾದ ಹಣ್ಣಿನ ಗಿಡಗಳನ್ನು ನೆಡಬಹುದು. ಈ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಬೇಕು. ಪಟ್ಟಣದ ಸಮೀಪವೇ ಆನೆಗಳ ಹಿಂಡು ಬಂದಿದ್ದು, ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಸಕಲೇಶಪುರ ಮಾದರಿಯಲ್ಲಿ ಆನೆಗಳು ನಾಡಿನ ಕಡೆ ದಾಟದಂತೆ ರೈಲ್ವೇ ಕಂಬಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
    ಅರಣ್ಯ ಪಾಲಕಿ ಅಕ್ಷತಾ ಮಾತನಾಡಿ, ಆನೆಗಳನ್ನು ಓಡಿಸಲು ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆನೆಗಳ ಹಾವಳಿ ತಡೆಗೆ ಬೇಕಾದ ಸೂಕ್ತ ಭದ್ರತೆ, ಎಲಿೆಂಟ್ ಟಾಸ್‌‌ಕೆೆರ್ಸ್ ತಂಡ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
    ಗ್ರಾಪಂ ಅಧ್ಯಕ್ಷ ಎನ್.ಡಿ.ಪ್ರಸಾದ್ ಮಾತನಾಡಿ, ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್‌ರೇ, ಇಸಿಜಿ ಯಂತ್ರ ಸದಾ ಕೆಟ್ಟಿರುತ್ತವೆ. ವೈದ್ಯರು ಖಾಸಗಿ ಆಸ್ಪತ್ರೆಗೆ ಎಕ್ಸ್-ರೇ, ಇಸಿಜಿಗೆ ಬರೆದು ಕೊಡುತ್ತಿದ್ದಾರೆ. ಇದರಿಂದ ಬಡರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಯಂತ್ರಗಳನ್ನು ಸುಸ್ಥಿಯಲ್ಲಿಡಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
    ಸದಸ್ಯ ಅಣ್ಣಪ್ಪ ಮಾತನಾಡಿ, ಸಕಾಲಕ್ಕೆ ಸರಿಯಾಗಿ ಮೀನುಗಾರಿಕೆ ಇಲಾಖೆಯವರು, ಭದ್ರಾ ಹಿನ್ನೀರಿಗೆ ಮೀನು ಮರಿಗಳನ್ನು ಬಿಡಬೇಕು. ಈ ಬಾರಿ 30 ಲಕ್ಷ ಮೀನು ಮರಿಗಳನ್ನು ಬಿಡಬೇಕು ಎಂದು ಒತ್ತಾಯಿಸಿದರು.
    ಗ್ರಾಪಂ ನೋಡೆಲ್ ಅಧಿಕಾರಿ ಪಶು ಇಲಾಖೆ ಸಹಾಯಕ ನಿರ್ದೇಶಕ ಶಿವ ಪ್ರಸಾದ್, ಉಪಾಧ್ಯಕ್ಷ ಎಂ.ಟಿ.ಪ್ರವೀಣ್, ಸದಸ್ಯರಾದ ಬಿನು, ಡಿ.ಆರ್.ಶ್ರೀನಾಥ್, ಶಿಲ್ಪಾ ಅನಿಲ್, ಯಾಸ್ಮೀನ್, ಉಮಾ ಗಂಗಾಧರ್, ಪಚ್ಚೆಯಮ್ಮ, ರಚಿತಾ ರಮೇಶ್, ಅಣ್ಣಪ್ಪ, ಬಿಂದು ಸತೀಶ್, ಪಿಡಿಒ ಸಂತೋಷ್ ಕುಮಾರ್, ಸಿಬ್ಬಂದಿ ಗಿರೀಶ್, ಶರತ್, ಅಜಯ್, ರಮ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts