More

    ಕೋವಿಡ್​ 19 ಲಾಕ್​ಡೌನ್​ ಕೃಪೆ, ಜಾಲಂಧರ್​ನಿಂದಲೇ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದರ್ಶನ!

    ಜಾಲಂಧರ್​: ಕೋವಿಡ್​ 19 ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮಾ.24ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದೆ. ಇದು ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಜಾಲಂಧರ್​ನಂಥ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ. ಜಾಲಂಧರ್​ನಲ್ಲಂತೂ ಮರೆತೇ ಹೋಗಿದ್ದ ಪ್ರಕೃತಿಯ ಸೊಬಗನ್ನು ಹಲವು ದಶಕಗಳ ಬಳಿಕ ಕಣ್ತುಂಬಿಕೊಳ್ಳುವ ಅವಕಾಶ ಅಲ್ಲಿನ ಜನರಿಗೆ ಲಭಿಸಿದೆ.

    ಏನದು ಅವಕಾಶ? ಜಾಲಂಧರ್​ ನಗರ ಮಿತಿಮೀರಿ ಬೆಳೆದು, ವಾಯುಮಾಲಿನ್ಯ ಹೆಚ್ಚಾಗಿತ್ತು. ಇದರಿಂದಾಗಿ ದಶಕದ ಹಿಂದೆ ಸೊಬಗಿನ ನೋಟ ಒದಗಿಸುತ್ತಿದ್ದ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದೃಶ್ಯ ಕಾಣುವುದೇ ದುಸ್ತರವಾಗಿತ್ತು.

    ಆದರೆ ಈಗ ಲಾಕ್​ಡೌನ್​ನಿಂದಾಗಿ ವಾಹನಗಳ ಸಂಚಾರ ಕಡಿಮೆಯಾಗಿದೆ. ಕೈಗಾರಿಕೆಗಳು ಸ್ತಬ್ಧವಾಗಿವೆ. ಇದರಿಂದಾಗಿ ವಾಯುಮಾಲಿನ್ಯ ಕೂಡ ಕಡಿಮೆಯಾಗಿದ್ದು, ದಶಕಗಳ ನಂತರ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಗಳು ದರ್ಶನ ನೀಡಲಾರಂಭಿಸಿವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ತಮ್ಮ ಮನೆಗಳ ಮಾಡಿನ ಮೇಲೆ ದಿನವೂ ಬಂದು ನಿಲ್ಲುವುದು ಸಾಮಾನ್ಯವಾಗುತ್ತಿದೆ.

    ಈ ದೃಶ್ಯ ಇನ್ನು ಕೆಲವು ದಿನಗಳವರೆಗೆ ಮಾತ್ರ ಕಾಣಿಸಲಿದೆ. ಲಾಕ್​ಡೌನ್​ ಅಂತ್ಯಗೊಂಡ ನಂತರದಲ್ಲಿ ಮತ್ತೊಮ್ಮೆ ಈ ದೃಶ್ಯ ಕಣ್ಮರೆಯಾಗಲಿದೆ ಎಂಬುದು ಸ್ಥಳೀಯರ ಕೊರಗಾಗಿದೆ.

    ಲಾಕ್​ಡೌನ್​ ಯಾವಾಗ ಅಂತ್ಯವಾಗುತ್ತೆ…? 14ಕ್ಕೆ ಮುಗಿಯುತ್ತಾ, ವಿಸ್ತರಣೆ ಆಗುತ್ತಾ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts