More

    ಬರ, ನೆರೆ ತಡೆಗೆ ಜಲ ಸಂಜೀವಿನಿ; ಜಿಯೋ ಸ್ಪೆಶಲ್ ತಂತ್ರಜ್ಞಾನ ಆಧರಿಸಿ ಕ್ರಿಯಾ ಯೋಜನೆ ತಯಾರಿ; ಜಿಪಂ ಸಿಇಒ ಅಕ್ಷಯ

    ಹಾವೇರಿ: ನೀರಿನ ಸಂರಕ್ಷಣೆ ಜತೆಗೆ ನೆರೆ ಹಾವಳಿ ತಡೆಗಾಗಿ ಜಿಯೋ ಸ್ಪೇಷಿಯಲ್ ತಂತ್ರಜ್ಞಾನ ಆಧರಿಸಿ ಜಲ ಸಂಜೀವಿನಿ ಯೋಜನೆಯಡಿ ಮೂರು ವರ್ಷಗಳ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಮೇಲಸ್ಥರಿಂದ ಕೆಳ ಸ್ಥರದವರೆಗಿನ ನೀರಾವರಿ ಕಾಮಗಾರಿಗಳಿಗೆ ಆದ್ಯತೆ ನೀಡಿ ನೀರು ಸಂರಕ್ಷಣೆಯೊಂದಿಗೆ ಜಲಾನಯನ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಜಲ ಸಂಜೀವಿನಿ ಕಾರ್ಯಕ್ರಮ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ. ಜಲ ಸಂಜೀವಿನಿ ಕಾರ್ಯಕ್ರವು ಮೂರು ವರ್ಷಗಳ ಕ್ರಿಯಾ ಯೋಜನೆ ಒಳಗೊಂಡಿದೆ. ಮೇಲಸ್ಥರದಿಂದ ಕೆಳಸ್ಥರಗಳ ವರೆಗೆ ಬರುವ ಎಲ್ಲ ನೀರಾವರಿ ಕಾಮಗಾರಿಗಳಿಗೆ ಆಧ್ಯತೆ ನೀಡಲಾಗಿದೆ. ಜಿ.ಐ.ಎಸ್. ತಂತ್ರಜ್ಞಾನದ ಆಧಾರಿತ ಮೇಲೆ ಮೂರು ವರ್ಷಗಳ ಕ್ರಿಯಾ ಯೋಜನೆಯಲ್ಲಿ ನೀರು ಸಂರಕ್ಷಣೆಯೊಂದಿಗೆ ಜಲಾನಯನ ಪ್ರದೇಶವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ.
    ನೈರ್ಗಿಕ ಸಂಪನ್ಮೂಲ ಸಂರಕ್ಷಣಾ ಕಾಮಗಾರಿಗಳನ್ನು ಶೇ.65ರಷ್ಟು ಕಾಯ್ದಿರಿಸುವುದು, ಅರಣ್ಯ ಪ್ರದೇಶದ ಕಾಮಗಾರಿಗಳನ್ನು ಶೇ.20ಕ್ಕಿಂತ ಕಡಿಮೆ ಇಲ್ಲದೆ ಕಾಯ್ದಿರಿಸುವುದು, ಗ್ರಾಮೀಣ ರಸ್ತೆಗಳಿಗಾಗಿ ಶೇ.10ರಷ್ಟು ಕಾಯ್ದಿರಿಸುವುದು, ವೈಯಕ್ತಿಕ ಕಾಮಗಾರಿಗಳನ್ನು ಸಹ ಗಮನದಲ್ಲಿಟ್ಟುಕೊಂಡು ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಇತರೆ ಇಲಾಖೆಗಳ ಮೂಲಕ ಒಗ್ಗುಡಿಸುವಿಕೆ ಅಡಿ ಕಾಮಗಾರಿಗಳನ್ನು ಸಹ ಕೈಗೊಳ್ಳುವುದು ಎಂದು ಅಕ್ಷಯ ಶ್ರೀಧರ ತಿಳಿಸಿದ್ದಾರೆ. ಬಾಕ್ಸ್
    ನದಿ ದಂಡೆಯಲ್ಲಿ ಬಿದಿರು ಬೆಳೆ
    ನೆರೆಹಾವಳಿ ತಡೆಗಟ್ಟಲು 121 ಕೀ.ಮೀ ಪ್ರದೇಶದಲ್ಲಿ ಬಿದಿರು ಬೆಳೆಯನ್ನು ತುಂಗಭದ್ರಾ ಮತ್ತು ವರದಾ ನದಿಗಳ ದಡದಲ್ಲಿ ಸಸಿಗಳನ್ನು ನಾಟಿ ಮಾಡುವುದು. ಜಿಲ್ಲೆಯ 8 ತಾಲೂಕುಗಳ ಪೈಕಿ 82 ಗೋಮಾಳಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು. ಜೀವನೋಪಾಯದ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಮಾನವಕುಲದ ಒಟ್ಟಾರೆ ಯೋಗಕ್ಷೇಮಕ್ಕೆ ಗೋಮಾಳದ ಭೂಮಿಯನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಜಿಪಂ ಸಿಇಒ ಅಕ್ಷಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts