More

    ಜಕಣಾಚಾರಿ ನಾಡಿನ ಅಮರಶಿಲ್ಪಿ

    ಹುಕ್ಕೇರಿ: ಬೇಲೂರು ಹಳೇಬೀಡಿನ ವಾಸ್ತುಶಿಲ್ಪವನ್ನು ನೋಡಿದವರು ತಕ್ಷಣ ನೆನಪಿಸಿಕೊಳ್ಳುವುದು ಅಮರಶಿಲ್ಪಿ ಜಕಣಾಚಾರಿಯನ್ನು ಎಂದು ತಹಸೀಲ್ದಾರ್ ಅಶೋಕ ಗುರಾಣಿ ಹೇಳಿದರು.

    ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಶುಕ್ರವಾರ ಅಮರಶಿಲ್ಪಿ ಜಕಣಾಚಾರಿಯ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂತಹ ಶ್ರೇಷ್ಠ ಶಿಲ್ಪಿಯ ಸ್ಮರಣಾರ್ಥ ಸರ್ಕಾರ ಜಕಣಾಚಾರಿ ಪ್ರಶಸ್ತಿ ನೀಡುತ್ತಿದೆ ಎಂದರು. ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಗಜಾನನ ಬಡಿಗೇರ ಮತ್ತು ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಬಡಿಗೇರ ಅವರು ಮಾತನಾಡಿ, ಶಿಲ್ಪಕಲೆಯ ಮಹಾನ್ ಸಾಧಕನಾಗಿ ಗುರುತಿಸಲ್ಪಟ್ಟ ಜಕಣಾಚಾರಿ ಅವರ ಕಲೆ ನಮ್ಮ ನಾಡಿನ ಹೆಸರನ್ನು ಬೆಳಗಿಸಿದೆ ಎಂದರು. ಎನ್.ಎಸ್.ಬಡಿಗೇರ, ಗಣಪತಿ ಬಡಿಗೇರ, ಮಹಾದೇವ ಬಡಿಗೇರ, ಕೆ.ಎ.ಬಡಿಗೇರ, ಶಿರಸ್ತೆದಾರ ಎನ್.ಆರ್. ಪಾಟೀಲ ಮತ್ತಿತರರಿದ್ದರು. ಕೆ.ಬಿ.ಬಡಿಗೇರ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts