More

    ಭಾರತದ ಮೇಲೆ ಅಟ್ಯಾಕ್​ಗೆ ಪಾಕ್​ನಿಂದ ದಿನಾಂಕ ಫಿಕ್ಸ್​​! ಸಿಕ್ಕಿದೆ ಸ್ಫೋಟಕ ಮಾಹಿತಿ

    ನವದೆಹಲಿ: ಕರೊನಾ ವೈರಸ್​ನಿಂದ ದಿನೇ ದಿನೇ ಸಾಯುತ್ತಿರುವ ಸಹಸ್ರಾರ ಪ್ರಜೆಗಳ ಪ್ರಾಣವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನ, ಅದೇ ಇನ್ನೊಂದೆಡೆ ಭಾರತದ ಮೇಲೆ ದಾಳಿ ನಡೆಸುವ ಸಂಬಂಧ ತನ್ನ ಕುತಂತ್ರ ಬುದ್ಧಿಯನ್ನು ಮಾತ್ರ ಬಿಡುತ್ತಿಲ್ಲ.

    ಇದೀಗ ಸ್ಫೋಟಕ ಮಾಹಿತಿಯೊಂದನ್ನು ಭಾರತದ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದ್ದು, ಅದೇನೆಂದರೆ ಬರುವ ಮೇ 11ರಂದು ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ! ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ. ಆತ್ಮಹತ್ಯಾ ಸ್ಫೋಟದ ಮೂಲಕ (ಜೈಶ್ ಫಿಡಾಯೀನ್) ಮೇ 11 ರಂದು ಕಣಿವೆಯಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂದು ಅದು ಹೇಳಿದೆ.

    ಇದನ್ನೂ ಓದಿ: ಶವ ಸುಡಲಾರೆವು, ಹೂಳುವೆವು: ಅವಕಾಶ ಕೋರಿ ಸುಪ್ರೀಂಗೆ ಮುಸ್ಲಿಂ ಸಂಘ

    ಕದನ ವಿರಾಮ ಉಲ್ಲಂಘನೆ ಸೇರಿದಂತೆ ಅನೇಕ ಅಕ್ರಮಗಳ ಮೂಲಕ ಭಾರತೀಯ ಸೇನೆಯ ಮೇಲೆ ದಾಳಿ ಹಾಕುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತೀಯ ಯೋಧರು ಕಾಶ್ಮೀರ ಕಣಿವೆಯಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ. ಇದು ಪಾಕಿಸ್ತಾನದ ಭಯೋತ್ಪಾದಕರಿಗೆ ನುಂಗಲಾಗದ ತುತ್ತಾಗಿದೆ. ಮಾತ್ರವಲ್ಲದೇ, ತಾನೇ ಬುದ್ಧಿವಂತ ಎಂದು ಬೀಗುತ್ತಿರುವ ಉಗ್ರರಿಂದ ಪಾಠ ಕಲಿಸಿರುವ ಭಾರತೀಯ ಸೇನೆ ಏಪ್ರಿಲ್​ ತಿಂಗಳಿನಲ್ಲಿಯೇ 28 ಮಂದಿಯನ್ನು ಹೊಡೆದುರುಳಿದೆ. ಈ ಹಿನ್ನೆಲೆಯಲ್ಲಿ ನಿಷೇಧಿತ ನಿಷೇಧಿತ ಭಯೋತ್ಪಾದಕ ಗುಂಪೀಗ ಆತ್ಮಹತ್ಯಾ ದಾಳಿಗೆ ಮುಂದಾಗಿದೆ ಎಂದು ಗುಪ್ತಚರ ಸಂಸ್ಥೆಗೆ ತಿಳಿದುಬಂದಿದೆ.

    ಗುಪ್ತಚರ ಸಂಸ್ಥೆಗಳ ಪ್ರಕಾರ, ಜೈಶ್ ಮುಫ್ತಿ ಉನ್ನತ ಕಮಾಂಡರ್ ಅಬ್ದುಲ್ ರವೂಫ್ ಅಸ್ಗರ್​ ಮತ್ತು ಪಾಕಿಸ್ತಾನದ ಐಎಸ್‌ಐನ ಹಿರಿಯ ಅಧಿಕಾರಿಗಳ ನಡುವೆ ಸಭೆ ನಡೆದಿದೆ. ಈ ಸಭೆಯಲ್ಲಿ ಆತ್ಮಹತ್ಯಾ ದಾಳಿಯ ಸಿದ್ಧತೆಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ದಾಳಿ ನಡೆಸಲು 25-30 ಜೈಶ್ ಭಯೋತ್ಪಾದಕರ ಗುಂಪು ಭಾರತದೊಳಗೆ ನುಸುಳಲು ಹೊಂಚು ಹಾಕುತ್ತಿದೆ.

    ಇದನ್ನೂ ಓದಿ: ಜನರು ಹೇಳಿದ್ರಂತೂ ಕೇಳಲ್ಲ, ನಮ್ಮನ್ನಾದ್ರೂ ನೋಡಿ ಕಲಿತೀರಾ ಅಂತಿವೆ ಈ ಕೋತಿಗಳು!

    ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡೇಂಜರ್‌ಪೊರಾ ಪ್ರದೇಶದಲ್ಲಿ ಶನಿವಾರ (ಮೇ 2) ಭದ್ರತಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಭಯೋತ್ಪಾದಕರು ತಹಾಬ್ ಚೌಕ್‌ನಲ್ಲಿ ನಿಯೋಜಿಸಲಾದ ಪೊಲೀಸ್ ಮತ್ತು ಸಿಆರ್‌ಪಿಎಫ್ ತಂಡವನ್ನು ಗುರಿಯಾಗಿಸಲು ಪ್ರಯತ್ನಿಸಿದ್ದರು. ಅದು ಗುರಿ ತಪ್ಪಿ ರಸ್ತೆಬದಿಯಲ್ಲಿ ಸ್ಪೋಟಿಸಿದೆ. ಅವರಿಗೆ ತಿರುಗೇಟು ನೀಡುವ ಮೂಲಕ ಭಾರತದ ಯೋಧರು ಪ್ರತಿದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts