More

    ಜೈನ ಸಮುದಾಯದ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿ

    ಬೆಳಗಾವಿ: ಜೈನ ಸಮುದಾಯವು ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಹಂಚಿಹೋಗಿದೆ. ಈ ಎರಡು ದಿಕ್ಕುಗಳನ್ನು ಒಗ್ಗೂಡಿಸುವ ಸಂಗಮ ಕ್ಷೇತ್ರವೆಂದರೆ ಅದು ಬೆಳಗಾವಿ. ಈ ಎರಡೂ ದಿಕ್ಕುಗಳು ಒಂದಾದಲ್ಲಿ ಜೈನ ಸಮುದಾಯ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದ್ದಾರೆ.

    ಇಲ್ಲಿನ ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ನಲ್ಲಿ ಹಮ್ಮಿಕೊಂಡಿದ್ದ ಶಾಂತಿಸಾಗರ ಸ್ಮಾರಕ, ಗ್ರಂಥಾಲಯ, ಧಾರ್ಮಿಕ ಕೇಂದ್ರ, ಪಾಠಶಾಲೆ ಮತ್ತು ಆಚಾರ್ಯ ಶಾಂತಿಸಾಗರ ಮುನಿಗಳ ಜೀವನ ಚರಿತ್ರೆ ಸಾರುವ ಚಿತ್ರಲೋಕವನ್ನು ಶುಕ್ರವಾರ ಉದ್ಘಾಟಿಸಿ, ಅವರು ಮಾತನಾಡಿದರು.

    ಜೈನ ಸಮುದಾಯದ ವತಿಯಿಂದ ಬೆಳಗಾವಿಯಲ್ಲಿ ಎಲ್ಲ ಸೌಲಭ್ಯಗಳುಳ್ಳ ಆಸ್ಪತ್ರೆ ನಿರ್ಮಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಕೇಳಿಬರುತ್ತಿದೆ. ಹಾಗಾಗಿ, ಆಸ್ಪತ್ರೆ ನಿರ್ಮಾಣಕ್ಕೆ ಉತ್ತರ ಭಾರತೀಯ ಜೈನ ಸಮುದಾಯ ಮುಂದಾಗಬೇಕು ಎಂದು ಕೋರಿದರು. ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ ಚಾರ್ತುಮಾಸ ಆಚರಿಸಿಕೊಂಡಿರುವ ಆಚಾರ್ಯ ವರ್ಧಮಾನ ಸಾಗರ ಮುನಿಗಳ ದರ್ಶನ ಮತ್ತು ಅವರ ಧರ್ಮೋಪದೇಶದಿಂದ ಬೆಳಗಾವಿ ನಗರ ಪಾವನವಾಗಿದೆ. ಅವರ ಆಶೀರ್ವಾದಕ್ಕೆ ನಾವೆಲ್ಲರೂ ಶ್ರೀಗಳಿಗೆ ಚಿರಋಣಿಯಾಗಿದ್ದೇವೆ ಎಂದರು.

    ಆಚಾರ್ಯ ವರ್ಧಮಾನ ಸಾಗರ ಮುನಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ್ ಪಾಟೀಲ, ಎನ್.ಆರ್.ಪೂರ ಜೈನಮಠದ ಲಕ್ಷ್ಮೀಸೇನ ಭಟ್ಟಾರಕರು, ಉಪಾಧ್ಯಕ್ಷ ಬಾಲಚಂದ್ರ ಪಾಟೀಲ, ದತ್ತಾ ಢೋರ್ಲೆ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಅಶೋಕ ಪಟ್ನಿ, ರಾಜೇಂದ್ರ ಕಟಾರಿಯಾ, ವಿಜಯಪುರ ಜಿ.ಡಿ.ಆರ್.ಶಹಾ, ರಾಜಸ್ಥಾನದ ವಿವೇಕಜೀ ಕಾಲಾ, ಮುಂಬೈನ ಜಮನಾಲಾಲ ಹಪಾವತ, ಸುಭಾಷ ಜೈನ, ಸಂಜಯ ಝವೇರಿ, ರಾಜೇಶ ಜೈನ, ವಿನೋದ ಬಾಲಕಿವಾಲ, ಅನಿಲ ಸೇಠಿ, ಬಾಪಚಂದಜೀ ಜೂಡಾವಾಲಾ, ಮಾಣಿಕಬಾಗ್ ದಿಗಂಬರ ಜೈನ್ ಬೋರ್ಡಿಂಗ್ ಅಧ್ಯಕ್ಷ ಕೀರ್ತಿಕುಮಾರ ಕಾಗವಾಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts