More

    ಜೈನಮುನಿ ಹತ್ಯೆ ಖಂಡಿಸಿ ಮೂಡುಬಿದಿರೆಯಲ್ಲಿ ಪ್ರತಿಭಟನೆ

    ಮೂಡುಬಿದಿರೆ: ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದಿರುವುದನ್ನು ಮೂಡುಬಿದಿರೆ ಜೈನ ಸಮಾಜ ಖಂಡಿಸಿದೆ.

    ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿಗಳಿಗೆ ತಹಸಿಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

    ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಕುಮಾರ್ ಆನಡ್ಕ, ಜೈನಮಿಲನ್ ಅಧ್ಯಕ್ಷ ನೇಮಿರಾಜ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ರೋಟರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರವೀಣ್ ಚಂದ್ರ, ರಾಜ್ಯ ಜೈನ್ ಅಸೋಸಿಯೇಶನ್ ನಿರ್ದೇಶಕ ಪದ್ಮಪ್ರಸಾದ್ ಜೈನ್, ಪುರಸಭೆ ಸದಸ್ಯೆ ಶ್ವೇತಕುಮಾರಿ, ಉದ್ಯಮಿ ಪ್ರಭಾಚಂದ್ರ ಜೈನ್, ಪ್ರಮುಖರಾದ ಸುಭಾಶ್ಚಂದ್ರ ಚೌಟ, ಶೈಲೇಂದ್ರಕುಮಾರ್ ಮಿತ್ರಸೇನ್ ಮತ್ತಿತರರಿದ್ದರು.

    ಅಮಾಯಕ ಸಾಧು ಸಂತರಿಗೆ ರಕ್ಷಣೆಯಿಲ್ಲದಂತಾಗಿದೆ. ಎಲ್ಲ ಸಮುದಾಯದ ಸಾಧುಸಂತರು ಒಗ್ಗಟ್ಟಾಗಿ ಇಂತಹ ಹೇಯ ಕೃತ್ಯವನ್ನು ಖಂಡಿಸಬೇಕು. ಕ್ಷಮಿಸಲಾಗದ ಅಪರಾಧವೆಸಗಿದ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು.
    – ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮೂಡುಬಿದಿರೆ ಜೈನಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts