More

    ತಲೈವಾ ರಜನಿಕಾಂತ್​ ನಟನೆಯ ‘ಜೈಲರ್​’ ಚಿತ್ರಕ್ಕೆ ಸಂಕಷ್ಟ!

    ತಮಿಳುನಾಡು: ಸೂಪರ್​ಸ್ಟಾರ್​​ ರಜನಿಕಾಂತ್​​ ಅಭಿನಯದ ಬಹುನಿರೀಕ್ಷಿತ ‘ಜೈಲರ್’​ ಚಿತ್ರಕ್ಕೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಚಿತ್ರದ ಶೀರ್ಷಿಕೆಯಲ್ಲಿ ಗೊಂದಲ ಉಂಟಾಗಿದ್ದು, ಎರಡು ಸಿನಿಮಾಗಳು ಒಂದೇ ಟೈಟಲ್ ಅನ್ನು ಹೊಂದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: CT Ravi Reacts On BJP-JDS Alliance | ಜೆಡಿಎಸ್​​- ಬಿಜೆಪಿ ಮೈತ್ರಿ: ಸಿ.ಟಿ. ರವಿ ಹೇಳಿದ್ದೇನು ಗೊತ್ತಾ?

    ರಜನಿಕಾಂತ್ ಅವರ ನಟನೆಯ ‘ಜೈಲರ್’​ ಚಿತ್ರವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಚಿತ್ರತಂಡ ಈಗಾಗಲೇ ಆಗಸ್ಟ್ 10, 2023 ರಂದು ಅದ್ಧೂರಿಯಾಗಿ ಬಿಡುಗಡೆಗೊಳಿಸಲಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಮಧ್ಯೆ ಇದೀಗ ಸಮಸ್ಯೆಯೊಂದು ಉದ್ಭವಗೊಂಡಿದ್ದು, ಮಲಯಾಳಂ ಚಿತ್ರತಂಡವೊಂದು ತಮ್ಮ ಚಿತ್ರಕ್ಕೂ ಕೂಡ ಜೈಲರ್​ ಎಂದು ಟೈಟಲ್ ಇಟ್ಟುಕೊಂಡಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಧ್ಯಾನ್ ಶ್ರೀನಿವಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಲಯಾಳಂ ಚಿತ್ರವೂ ಜೈಲರ್​ ಶೀರ್ಷಿಕೆಯನ್ನು ಹೊಂದಿದೆ. ಇತ್ತ ರಜನಿಕಾಂತ್​ ನಟನೆಯ ಸಿನಿಮಾಗೂ ಜೈಲರ್​ ಟೈಟಲ್​ ಅನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಮಲಯಾಳಂ ನಿರ್ಮಾಪಕರು ಕಳವಳ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಕೇರಳದಲ್ಲಾದರೂ ಅದನ್ನು ಬದಲಾಯಿಸಲು ಟಾಲಿವುಡ್​​ನ ಜೈಲರ್ ತಂಡಕ್ಕೆ ನಿರ್ಮಾಪಕರು ಮನವಿ ಮಾಡಿದ್ದಾರೆ,(ಏಜೆನ್ಸೀಸ್).

    ಜೂ. ಎನ್​​ಟಿಆರ್ ‘ದೇವರ’​​ ಚಿತ್ರದಲ್ಲಿ ಅಲ್ಲು ಅರ್ಜುನ್​ ಪುತ್ರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts