More

    ಅಂಚೆಕಚೇರಿ ಮುತ್ತಿಗೆಗೆ ಯತ್ನಿಸಿದವರನ್ನು ಬಂಧಿಸಿದ ಪೊಲೀಸರು

    ಮಂಡ್ಯ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಹಲವು ಸಂಘಟನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಜೈಲ್ ಭರೋ ಚಳವಳಿ ನಡೆಸಿ ಪೊಲೀಸರಿಂದ ಬಂಧನಕ್ಕೊಳಗಾದರು.
    ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾರ್ಯರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಕಾರ್ಪೋರೇಟ್ ಕಂಪನಿಗಳೇ ಭಾರತ ಬಿಟ್ಟ ತೊಲಗಿ ಎಂದು ಆಗ್ರಹಿಸಿದರು. ಬಹುರಾಷ್ಟ್ರೀಯ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿವೆ. ಇಂತಹ ಲೂಟಿಕೋರ ದೈತ್ಯ ಕಾರ್ಪೋರೇಟ್ ಕಂಪನಿಗಳು ದೇಶದ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ತಮ್ಮ ವಶಕ್ಕೆ ಪಡೆದಿವೆ. ಇನ್ನೂ ಹತ್ತಾರು ಕಂಪನಿಗಳು ದೇಶದ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ತಮ್ಮ ವಶಕ್ಕೆ ಪಡೆದಿವೆ ಇನ್ನೂ ಹತ್ತಾರು ಸಾರ್ವಜನಿಕ ವಲಯಗಳನ್ನು ಸ್ವಾಹ ಮಾಡಲು ಹೊರಟಿವೆ. ದೇಶವನ್ನು ರಕ್ಷಿಸಬೇಕಾದ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾದ ಕಾನೂನುಗಳನ್ನು ರಚಿಸಿ, ಕಂಪನಿಗಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ಆರೋಪಿಸಿದರು.
    ನಿವೇಶನ ರಹಿತರಿಗೆ ನಿವೇಶನ, ಹಕ್ಕುಪತ್ರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷದಲ್ಲಿ 200 ದಿನದ ಕೆಲಸ ಹಾಗೂ 600 ರೂ. ಕೂಲಿ ನೀಡಬೇಕು. ಅಲ್ಲಿಯವರೆಗೆ ನೂರು ರೂಪಾಯಿ ಸೇರಿಸಿ ಕೂಲಿ ನೀಡಬೇಕು. ಮಳೆಯಿಂದ ಹಾನಿಯಾಗಿರುವ ಎಲ್ಲರಿಗೂ ಸೂಕ್ತ ಪರಿಹಾರ ಮತ್ತು ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಸಂಘಟನೆಗಳ ಎಂ.ಎಂ.ಶಿವಕುಮಾರ್, ಸಿ.ಕುಮಾರಿ, ಚಂದ್ರಶೇಖರ್, ಪುಟ್ಟಮಾದು, ಬಿ.ಹನುಮೇಶ್, ರಾಜು, ಟಿ.ಎಲ್.ಕೃಷ್ಣೇಗೌಡ, ಎನ್.ಎಲ್.ಭರತ್‌ರಾಜ್, ಟಿ.ಯಶ್ವಂತ್, ಸುನೀತಾ ಸೇರಿದಂತೆ ಹಲವರನ್ನು ಬಂಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts