More

    ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹಬ್ಬದ ನಿನಾದ

    ಹುಬ್ಬಳ್ಳಿ: ಹೋಳಿ ಹುಣ್ಣಿಮೆ ನಿಮಿತ್ತ ನಗರದಲ್ಲಿ ಜಗ್ಗಲಗಿ ಹಬ್ಬ ಆಯೋಜಿಸಿದ್ದು, ಭಾಗವಹಿಸಿದ್ದ ಬಹಳಷ್ಟು ಕಲಾ ತಂಡಗಳ 350 ಜಗ್ಗಲಗಿಗಳಿಂದ ವಾಣಿಜ್ಯ ನಗರಿಯಲ್ಲಿ ಗುರುವಾರ ನಿನಾದ ಹೊರಡಿತು.
    ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಭೋಗೇನಾಗರಕೊಪ್ಪ, ಪಾಳೆ, ತಾರಿಹಾಳ, ಶಿವಳ್ಳಿ, ಕಲಘಟಗಿ, ಮರೆವಾಡ, ಅಮ್ಮಿನಬಾವಿ ಸೇರಿ ಜಿಲ್ಲೆಯ ವಿವಿಧೆಡೆಗಳಿಂದ ಕಲಾ ತಂಡಗಳು ಆಗಮಿಸಿದ್ದವು.
    ಬೇಡರ ವೇಷ, ಕೋಲಾಟ, ಗೊಂಬೆ ಕುಣಿತ ಮೆರವಣಿಗೆಗೆ ಅಕರ್ಷಣೆ ತಂದವು. ತಮಟೆ ವಾದ್ಯ, ತಾಷಾ ತಂಡ ಹಾಗೂ ಮಹಿಳಾ ಜಗ್ಗಲಗಿ ತಂಡಗಳು ಭಾಗವಹಿಸಿದ್ದವು.
    ನಗರದ ಮೂರು ಸಾವಿರ ಮಠದ ಆವರಣದಿಂದ ಹೊರಟ ಮೆರವಣಿಗೆಯು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ದುರ್ಗದಬೈಲ್ ವೃತ್ತ, ಜವಳಿ ಸಾಲ, ತುಳಜಾಭವಾನಿ ವೃತ್ತ, ದಾಜಿಬಾನಪೇಟೆ ಮಾರ್ಗವಾಗಿ ಮರಳಿ ಶ್ರೀಮಠ ತಲುಪಿತು. ಸುಮಾರು ಒಂದೂವರೆ ಕಿ.ಮೀ. ವರೆಗೆ ಜಗ್ಗಲಗಿ ತಂಡಗಳು ಸಂಚರಿಸಿದವು. ಪರಿಣಾಮ ಹುಬ್ಬಳ್ಳಿ ತುಂಬೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts