More

    ಕಂದಾಯ ಪಾವತಿಗೆ ಜಾಗೃತಿ ಜಾಥಾ

    ಜಗಳೂರು : ಆಸ್ತಿ, ನೀರು, ಮಳಿಗೆ ಮತ್ತಿತರ ಕಂದಾಯ ಪಾವತಿಸುವಂತೆ, ದನಗಳನ್ನು ರಸ್ತೆಗೆ ಬಿಡದಂತೆ, ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಮಂಗಳವಾರ ಪಪಂ ವತಿಯಿಂದ ಜಾಥಾ ನಡೆಯಿತು.
    ಪಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್ ಮಾತನಾಡಿ, 2019-20ನೇ ಸಾಲಿನ ಆರ್ಥಿಕ ವರ್ಷವು ಮಾ.31ಕ್ಕೆ ಮುಗಿಯಲಿದೆ. ಸಾರ್ವಜನಿಕರು ಬಾಕಿ ಉಳಿಸಿಕೊಂಡಿರುವ ಆಸ್ತಿ, ನೀರು, ಮಳಿಗೆ, ಉದ್ದಿಮೆ ಪರವಾನಗಿ ಹಾಗೂ ಜಾಹೀರಾತಿನ ಶುಲ್ಕಗಳನ್ನು ನಿಗದಿತ ಅವಧಿಯೊಳಗೆ ಪಾವತಿಸಬೇಕು ಎಂದು ತಿಳಿಸಿದರು.
    ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಗಿಡಗಂಟೆಗಳು ಬೆಳೆದಿದ್ದು, ಮಾಲೀಕರು ಏಳು ದಿನದಲ್ಲಿ ಸ್ವಚ್ಛಗೊಳಿಸಬೇಕು. ತಪ್ಪಿದರೆ ಪಪಂನಿಂದಲೇ ತೆರವುಗೊಳಿಸಿ ಅದರ ವೆಚ್ಚವನ್ನು ಆಸ್ತಿ ಕಂದಾಯದಲ್ಲಿ ಸೇರಿಸಿ ವಸೂಲಿ ಮಾಡಲಾಗುವುದು ಎಂದರು.
    ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಂತೆ ಹಲವು ಬಾರಿ ಬಾರಿ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ ಅಂಗಡಿಗಳಲ್ಲಿ ಮಾರಾಟ, ಸಂಗ್ರಹ ಕಂಡು ಬಂದರೆ ಪರಿಸರ ಸಂರಕ್ಷಣೆ ಕಾಯ್ದೆ 1986 ಸೆಕ್ಷನ್ 5 ರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಪಪಂ ಕಂದಾಯ ನಿರೀಕ್ಷಕ ಸಂತೋಷ್, ಸಮುದಾಯ ಸಂಘಟಕ ಕರಿಯಪ್ಪ, ಬಿಲ್ ಕಲೆಕ್ಟರ್ ಪುನೀತ್, ಮೊಹಿದ್ದೀನ್, ಚಂದ್ರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts