More

    ಆರೋಗ್ಯ ವೃದ್ಧಿಗೆ ಕ್ರೀಡೆ ಉತ್ತಮ ಸಾಧನ

    ಜಗಳೂರು: ಬದಲಾದ ಜೀವನ ಶೈಲಿಯಿಂದ ಅನಾರೋಗ್ಯ ಉಂಟಾಗುತ್ತಿದ್ದು, ಎಲ್ಲರೂ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಸದೃಢವಾಗಿರಬಹುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

    ಪಟ್ಟಣದ ಬೇಡರ ಕಣ್ಣಪ್ಪ ವಸತಿಯುತ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ 2023- 24ನೇ ಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ಮಾತನಾಡಿದರು.

    ಮಕ್ಕಳೇ ದೇಶದ ಆಸ್ತಿ. ಪ್ರಸ್ತುತ ಬದಲಾದ ಜೀವನ ಶೈಲಿಯಿಂದ ಚಿಕ್ಕ ವಯಸ್ಸಿನಲ್ಲೇ ಅನೇಕ ರೋಗಗಳು ಬಾಧಿಸುತ್ತವೆ. ಇದರಿಂದ ದೇಹ ಔಷಧಗಳಿಗೆ ಒಗ್ಗಿಕೊಂಡು ಪೂರ್ಣ ಆಯುಷ್ ಕಳೆದು ಹೋಗುವ ಮೊದಲೇ ಮರಣ ಹೊಂದುವಂತಹ ಪರಿಸ್ಥಿತಿಯ ನಡುವೆ ಬದುಕುತ್ತಿದ್ದೇವೆ ಎಂದರು.

    ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಕ್ರೀಡಾಪಟುಗಳು ಉತ್ತಮವಾಗಿ ಪ್ರದರ್ಶಿಸಿ ಗೆಲುವು ಪಡೆಯಬೇಕು ಎಂದು ಆಶಿಸಿದರು.

    ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ರೆಡ್ಡಿ, ಕ.ಸ.ನೌ.ಸಂಘದ ಅಧ್ಯಕ್ಷ ಬಿ.ಆರ್ ಚಂದ್ರಪ್ಪ, ಕಾರ್ಯದರ್ಶಿ ನಾಗರಾಜ್, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಪ್ರೌ.ಶಾ.ಶಿ. ಸಂಘದ ಕಾರ್ಯದರ್ಶಿ ಕಲ್ಲಿನಾಥ್, ಆನಂದ್, ನಿರ್ದೇಶಕರಾದ ಶಕುಂತಲಾ, ಪ್ಯಾರೀನಾ ಬೇಗಂ, ಪ.ಪಂ ರಮೇಶ್ ರೆಡ್ಡಿ, ಮಂಜುನಾಥ್, ವೀರೇಶ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್, ಲೋಕೇಶ್ ಎಚ್.ಎಂ. ಹೊಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts