More

    ಮೀನುಗಾರಿಕೆ ನೀತಿ ಜಾರಿಗೆ ಮಾಡಬೇಕಿದೆ ಚಿಂತನೆ

    ಜಗಳೂರು: ಮೀನಿನ ಸಂತತಿ ಮುಂದಿನ ತಲೆಮಾರಿಗೂ ಉಳಿಯಬೇಕಾದರೆ ಸರ್ಕಾರ ಮೀನುಗಾರಿಕೆ ನೀತಿ ಜಾರಿಗೆ ತರಲು ಚಿಂತನೆ ಮಾಡಬೇಕಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

    ತಾಲೂಕಿನ ಸಂಗೇನಹಳ್ಳಿಯಲ್ಲಿ ಸೋಮವಾರ ಮೀನುಗಾರರಿಗೆ ಪ್ರಧಾನ ಮಂತ್ರಿ ಮತ್ಸ ್ಯ ಸಂಪದ ಯೋಜನೆಯಡಿ ಹಮ್ಮಿಕೊಂಡಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಇಲಾಖೆ ಯೋಜನೆಗಳ ಮಾಹಿತಿ ಕಾರ್ಯಾಗಾರ ಹಾಗೂ ಕೆರೆಗೆ ಮೀನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮೀನು ಆರೋಗ್ಯಕ್ಕೆ ಉತ್ತಮ ಆಹಾರ. ಅದನ್ನು ಸೇವಿಸಿದರೆ ಕೊಬ್ಬಿನಿಂದ ದೂರ ಉಳಿಯಬಹುದು. ಅಲ್ಲದೆ, ಬುದ್ಧಿ ಚುರುಕಾಗಲಿದೆ. ಹಾಗಾಗಿ, ಮೀನು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

    ಸಂಗೇನಹಳ್ಳಿ ಕೆರೆ ದೊಡ್ಡ. ಭದ್ರಾ ಮೇಲ್ದಂಡೆ ಯೋಜನೆಯಡಿ ಇದೇ ಕೆರೆಗೆ ಮೊದಲು ನೀರು ತುಂಬಿಸಿ ನಂತರ ಇತರೆ ಕೆರೆಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಕೆರೆ ಉಳಿವಿಗಾಗಿ ಎಲ್ಲರು ಕೈಜೋಡಿಸಬೇಕು. ಕೆರೆ ಜೀವಂತಿಕೆ ಕಾಪಾಡಿದರೆ ಅಂತರ್ಜಲ ವೃದ್ಧಿಗೊಂಡರೆ ಕೊಳವೆಬಾವಿಗಳು ಮರುಪುರಣಗೊಳ್ಳುತ್ತವೆ. ಕೆರೆಗಳ ಬಗ್ಗೆ ನಿರ್ಲಕ್ಷೃ ಬೇಡ, ಕಾಳಜಿ ಇರಲಿ ಎಂದು ಸಲಹೆ ನೀಡಿದರು.

    ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಅಣ್ಣಪ್ಪಸ್ವಾಮಿ ಮಾತನಾಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪಪಂ ಸದಸ್ಯರಾದ ರಮೇಶ್, ತಾನಾಜಿ ಗೋಸಾಯಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಣ್ಣಸೂರಯ್ಯ, ಕುರಿ ಜಯಣ್ಣ, ಪಪಂ ಮಾಜಿ ಅಧ್ಯಕ್ಷ ಜಯಣ್ಣ, ಗೋಪಿ, ಮಹಮದ್ ಗೌಸ್, ಶೇಖರಪ್ಪ, ಮಹಮದ್ ಅಲಿ, ಅನೂಪ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts