More

    ಶಿಕ್ಷಣ ಹುಲಿಯ ಹಾಲು ಇದ್ದಂತೆ

    ಜಗಳೂರು : ಶಿಕ್ಷಣ ಎನ್ನುವುದು ಹುಲಿಯ ಹಾಲು ಇದ್ದಂತೆ. ಇದನ್ನು ಪಡೆದವರು ಗರ್ಜಿಸಬೇಕು. ಸಮಾಜದಲ್ಲಿನ ಅನ್ಯಾಯದ ವಿರುದ್ಧ ಧ್ವನಿಯಾಗಬೇಕೇ ಹೊರತು ಕುರಿಯಂತೆ ತಲೆ ತಗ್ಗಿಸಬಾರದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.
     ಪಟ್ಟಣದ ಪ್ರೇರಣಾ ಸಮಾಜ ಸೇವಾ (ಚರ್ಚ್) ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ ಹಮ್ಮಿಕೊಂಡಿದ್ದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಸಮಾಜದಲ್ಲಿ ವ್ಯಕ್ತಿ ಉನ್ನತವಾಗಿ ಬೆಳೆಯಬೇಕಾದರೆ ಅಕ್ಷರದ ಜ್ಞಾನ ಅವಶ್ಯಕ. ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣದಿಂದ ವಂಚಿತವಾಗಿದ್ದರೆ, ಭಾರತಕ್ಕೆ ಸದೃಢ ಸಂವಿಧಾನ ಸಿಗುತ್ತಿರಲಿಲ್ಲ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ತುಳಿತಕ್ಕೊಳಗಾದ ಸಮುದಾಯಗಳು ಮುಖ್ಯವಾಹಿನಿಗೆ ಬರುತ್ತಿರಲಿಲ್ಲ ಎಂದು ಹೇಳಿದರು.
     ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿದರು. ಅಂಬೇಡ್ಕರ್ ಕೂಡ ಅವರ ದಾರಿಯಲ್ಲಿ ನಡೆದು ಜೀವನದುದ್ದಕ್ಕೂ ಅಪಮಾನ, ನಿಂದನೆಗಳನ್ನು ಅನುಭವಿಸಿದರೂ ಛಲ ಬಿಡದೇ ದೇಶದ ಪ್ರತಿಯೊಬ್ಬರಿಗೆ ಸಮಾನತೆ ತಂದುಕೊಟ್ಟರು. ಅಂತಹ ಮಹಾತ್ಮ ಹುಟ್ಟಿದ ನಾಡಿನಲ್ಲಿ ನಾವಿರುವುದು ನಮ್ಮ ಸೌಭಾಗ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts