ಛಲ ಬಿಡದೇ ಗುರಿ ತಲುಪಿ

blank
blank

ಜಗಳೂರು: ವಿದ್ಯಾರ್ಥಿಗಳಿಗೆ ಕನಸು ಕಟ್ಟಿಕೊಡಬೇಕಾದರೆ ಆಧಾರಸಹಿತ ಉದಾಹರಣೆ ನೀಡಬೇಕು. ನಮ್ಮ ಅನುಭವವನ್ನು ವಿದ್ಯಾರ್ಥಿಗಳ ಮುಂದಿಟ್ಟು ಕನಸು ಕಟ್ಟಿಕೊಡುವ ಪ್ರಯತ್ನವಾಗಬೇಕೆಂದು ಜಿಲ್ಲಾಧಿಕಾರಿ ಎಂ.ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹೊಸಕೆರೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ಹಮ್ಮಿಕೊಂಡ ಶೈಕ್ಷಣಿಕ ಸಂವಾದದಲ್ಲಿ ಮಾತನಾಡಿದರು.

1989 ರಲ್ಲಿ ಕಂಡ ಕನಸು ನನಸಾಗಲು ನನಗೆ ಹತ್ತು ವರ್ಷ ಬೇಕಾಯಿತು. ಜೀವನದಲ್ಲಿ ಒಂದು ಕನಸು, ಗುರಿ ಇಟ್ಟುಕೊಂಡಿರುತ್ತೇವೆ. ಯಾವುದೇ ಕೆಲಸದಲ್ಲಿ ನೂರಕ್ಕೆ ನೂರರಷ್ಟು ಕೆಲಸ ಮಾಡಿದರೆ ಇಡೀ ಜಗತ್ತೇ ನಿಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು ಎಂದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಜಿಪಂ ಸಿಇಒ ಪದ್ಮಾ ಬಸಂತಪ್ಪ ಮಾತನಾಡಿ, ಭವಿಷ್ಯದ ಬಗ್ಗೆ ಕನಸ್ಸಿನ ಭಾವನೆ ಇರಬೇಕು. ಪ್ರತಿಯೊಬ್ಬರೂ ಯಾವುದಾದರೂ ಗುರಿ ಇಟ್ಟುಕೊಂಡು ಓದಬೇಕೆಂದು ಹೇಳಿದರು.

ವಿಶೇಷ ಭೂಸ್ವಾಧೀನ ಅಧಿಕಾರಿ ರೇಷ್ಮಾ ಹಾನಗಲ್ ಮಾತನಾಡಿ, ಗುರಿ ಮುಟ್ಟುವವರೆಗೂ ನಿರಂತರ ಪ್ರಯತ್ನ ನಡೆಸಬೇಕು. ದೇಶಕ್ಕೆ ಕೈಲಾದ ಅಳಿಲು ಸೇವೆ ಮಾಡಬೇಕು ಎಂದರು.

ದಾವಣಗೆರೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರು ಮಾತನಾಡಿ, ಗುರಿ ಸ್ಪಷ್ಟವಾಗಿಟ್ಟುಕೊಂಡು, ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಂಡು, ಕೆಟ್ಟದ್ದನ್ನು ಬಿಟ್ಟು, ಒಳ್ಳೆಯದನ್ನು ಸ್ವೀಕರಿಸಿ, ಗುರಿ ಮುಟ್ಟಬೇಕು ಎಂದು ಸಲಹೆ ನೀಡಿದರು.

ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ವಿಜಯ್‌ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಜಿಲ್ಲಾಧಿಕಾರಿ ಗಂಗಪ್ಪ , ಆಹಾರ ಉಪ ನಿರೀಕ್ಷಕ ಮಂಟೆಸ್ವಾಮಿ ಮಾತನಾಡಿದರು.

Share This Article

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…

ದೇಹದಲ್ಲಿ ಈ ವಿಚಿತ್ರ ಸೂಚನೆಗಳು ಕಾಣಿಸಿದ್ರೆ ಸಕ್ಕರೆ ಕಾಯಿಲೆ ಇದೆ ಎಂದರ್ಥ! | Diabetes

Diabetes: ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ವ್ಯಾಯಾಮದ ಕೊರತೆ ಇತ್ಯಾದಿಗಳಿಂದಾಗಿ, ಚಿಕ್ಕ…