More

    ಸುರಕ್ಷಾ ಕವಚ ಬಳಸಿ ಆರೋಗ್ಯ ರಕ್ಷಿಸಿಕೊಳ್ಳಿ

    ಜಗಳೂರು: ಪೌರಕಾರ್ಮಿಕರು ಸರ್ಕಾರ ನೀಡುವ ಸುರಕ್ಷಾ ಕವಚಗಳನ್ನು ಬಳಸಿ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

    ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಸಮವಸ್ತ್ರ, ಸಾಧನಾ ಸಲಕರಣೆ ಮತ್ತು ಸುರಕ್ಷಾ ದಿರಿಸು ವಿತರಣೆ, ಘನತ್ಯಾಜ್ಯ ವಿಲೇವಾರಿ ಮೂರು ವಾಹನಗಳ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

    ಸರ್ಕಾರ ಪೌರಕಾರ್ಮಿಕರ ಹಿತಕ್ಕಾಗಿ ಅನೇಕ ಸೌಲಭ್ಯ ನೀಡಿದೆ. ಬೆಳಗ್ಗೆ ಪಟ್ಟಣ ಶುಚಿಗೊಳಿಸುವ ವೇಳೆ ಕಡ್ಡಾಯವಾಗಿ ಕೈ ಮತ್ತು ಕಾಲುಗಳು, ಮುಖಕ್ಕೆ ಸುರಕ್ಷಾ ಧಿರಿಸುಗಳನ್ನು ಹಾಕಿಕೊಳ್ಳಬೇಕು. ಯಾರಾದರೂ ನಿರ್ಲಕ್ಷಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ. ಪೈಪ್‌ಲೈನ್ ಮೂಲಕ ಪಟ್ಟಣದ ಕೆರೆಗೆ ನೀರು ತುಂಬಿಸಿ ಕುಡಿವ ನೀರಿನ ಅಭಾವ ನೀಗಿಸಲು ಕ್ರಮಕೈಗೊಳ್ಳಲಾಗುವುದು. ಇನ್ನೊಂದು ವರ್ಷದಲ್ಲಿ ಪಟ್ಟಣದ ಚಿತ್ರಣವೇ ಬದಲಾಗಲಿದೆ ಎಂದರು.

    ಆತಂಕ ಬೇಡ: ಕರೊನಾ ವೈರಸ್ ಬಗ್ಗೆ ಯಾರು ಭಯಪಡುವ ಅಗತ್ಯವಿಲ್ಲ. ಎಲ್ಲರೂ ವೈಯಕ್ತಿಕ ಶುಚಿತ್ವಕ್ಕೆ ಒತ್ತು ಕೊಡಬೇಕು. ನಿತ್ಯ ಕಾಯಿಸಿ ಆರಿಸಿ ನೀರು, ಶುದ್ಧ ಮತ್ತು ಬಿಸಿ ಆಹಾರ ಸೇವನೆ ಮಾಡಬೇಕು. ಯಾರಿಗಾದರು ನಿರಂತರ ಕೆಮ್ಮು, ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿದೆ. ರೋಗ ನಿಯಂತ್ರಣಕ್ಕೆ ಸರ್ಕಾರ ಬದ್ಧವಿದ್ದು, ಶೀಘ್ರವೇ ಅಗತ್ಯ ಚುಚ್ಚು ಮದ್ದು, ಔಷಧ ಪೂರಕೆ ಮಾಡಲಿದೆ ಎಂದರು.

    ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್ ಮಾತನಾಡಿ, ಒಟ್ಟು 29 ಪೌರಕಾರ್ಮಿಕರಿಗೆ ಆರೋಗ್ಯ ರಕ್ಷಾ ಕಿಟ್ ವಿತರಿಸಲಾಗಿದೆ. ಹಸಿ ಮತ್ತು ಒಣ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಮೂರು ಟಾಟಾ ಏಸ್ ವಾಹನ ಖರೀದಿಸಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

    ಅಧಿಕಾರದ ಮುನ್ಸೂಚನೆ ತಿಳಿಸಿದ ಶಾಸಕ: ಅಧಿಕಾರವಿಲ್ಲದೆ ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲಿ ಕೂತಿದ್ದ ಪಪಂ ಸದಸ್ಯರನ್ನು ಕುರಿತು ಮಾತನಾಡಿದ ಶಾಸಕ ಎಸ್‌ವಿಆರ್, ಸಿದ್ಧರಾಗಿ, ಮುಂದಿನ ದಿನದಲ್ಲಿ ಪಪಂ ಅಧಿಕಾರ ಗದ್ದುಗೆ ನಮ್ಮದೇ ಎಂದು ಹೇಳುವ ಮೂಲಕ ನಿದ್ರೆ ಮಂಪರಲ್ಲಿದ್ದ ಸದಸ್ಯರನ್ನು ಎಚ್ಚರಿಸಿದರು.

    ಪಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ರಮೇಶ್ ರೆಡ್ಡಿ, ರವಿಕುಮಾರ್, ದೇವರಾಜ್, ಮುಖಂಡ ಗೌರಿಪುರ ಶಿವಣ್ಣ, ಇಂಜಿನಿಯರ್ ತಿಪ್ಪೇಸ್ವಾಮಿ, ಸದಸ್ಯರಾದ ಆರ್. ತಿಪ್ಪೇಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಪ್ರಾಂಶುಪಾಲ ಕಲ್ಲೇಶ್ ಗೌಡ, ಆರೋಗ್ಯ ನಿರೀಕ್ಷಕ ಕಿಪಾಯತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts