More

    ಕೃಷಿ ಉತ್ಪನ್ನ ನೇರ ಮಾರಾಟದಿಂದ ಮಧ್ಯವರ್ತಿಗಳ ಹಾವಳಿಗೆ ತಡೆ ಸಾಧ್ಯ

    ಜಗಳೂರು: ಕೃಷಿಕರು ಬೆಳೆಗಳನ್ನು ನೇರವಾಗಿ ರೈತ ಉತ್ಪಾದಕ ಕಂಪನಿಗಳಿಗೆ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ದಾವಣಗೆರೆ ಕೆವಿಕೆ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಹೇಳಿದರು.

    ಅಮೃತ ತರಳಬಾಳು ರೈತ ಉತ್ಪಾದಕ ಕಂಪನಿ, ತಾಲೂಕು ಕೃಷಿ ಇಲಾಖೆ ಹಾಗೂ ಕೆವಿಕೆ ಸಹಯೋಗದಲ್ಲಿ ತಾಲೂಕಿನ ಬಿದರಕೆರೆಯಲ್ಲಿ ಈಚೆಗೆ ಆಯೋಜಿಸಿದ್ದ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

    ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಭೂಮಿ ನಂಬಿ ಬಂಡವಾಳ ಹೂಡುವ ರೈತರ ಸ್ಥಿತಿ ಶೋಚನೀಯವಾಗಿದೆ. ಬೆಳೆದು ನಿಂತ ಪೈರು ಕೀಟ, ರೋಗ ಬಾಧೆಗಳಿಂದ ನಷ್ಟವಾದರೆ, ಇನ್ನೊಂದೆಡೆ ಉತ್ತಮ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಆದ್ದರಿಂದ ಬಿತ್ತನೆ ಮಾಡುವ ಮುನ್ನ ತಜ್ಞರ ಸಲಹೆ ಪಡೆದು ಕಾಲಕಾಲಕ್ಕೆ ಔಷಧೋಪಚಾರ ಮಾಡುವುದರಿಂದ ರೋಗಗಳನ್ನು ಹತೋಟಿಗೆ ತರಬಹುದು ಎಂದು ಸಲಹೆ ನೀಡಿದರು.

    ಜಿಲ್ಲಾ ಕೃಷಿ ಉಪನಿರ್ದೇಶಕ ಆರ್.ತಿಪ್ಪೇಸ್ವಾಮಿ , ತೋಟಗಾರಿಕಾ ತಜ್ಞ ಎಂ.ಜಿ.ಬಸವನಗೌಡ ಮಾತನಾಡಿ, ವೈವಿಧ್ಯಮಯ ಬೆಳೆಗಳಿಗೆ ಹೆಸರುವಾಸಿಯಾದ ಜಗಳೂರಿನಲ್ಲಿ ಅಡಕೆ ನಾಟಿ ಹೆಚ್ಚಾಗುತ್ತಿದೆ ಎಂದರು. ಮಣ್ಣು ವಿಷಯ ತಜ್ಞ ಸಣ್ಣಗೌಡರ್, ಸೋಮನಗೌಡ, ಉಮಾಪತಿ, ಕೃಷ್ಣಮೂರ್ತಿ, ಬಸವನಗೌಡ, ಎಚ್. ಜಿ.ನಾಗರಾಜ್, ಕವಿತಾ ಸ್ವಾಮಿ, ನಿಬಗೂರು ರೇವಣಸಿದ್ದಪ್ಪ, ಮನೋಜ್ ಕುಮಾರ್, ಕಿರಣ್ ಕುಮಾರ್, ಆದರ್ಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts