More

    ಗಡುವು ನೀಡಿದ್ದ ಶೆಟ್ಟರ್ ಬಳಿಗೆ ಇನ್ನೂ ಬರಲಿಲ್ಲ ಆ ಮೂವರು!

    ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಈ ಸಲ ಟಿಕೆಟ್ ನಿರೀಕ್ಷೆಯಲಿದ್ದೂ ಸಿಗದ ಮಾಜಿ ಸಿಎಂ ಜಗದೀಶ ಶೆಟ್ಟರ್, ಆ ಕುರಿತಂತೆ ನಿನ್ನೆಯೇ ಗಡುವು ನೀಡಿದ್ದರು. ಶನಿವಾರ ಬೆಳಗ್ಗೆ 11ರ ಒಳಗೆ ಮೂರನೇ ಪಟ್ಟಿ ಬಿಡದಿದ್ದರೆ ನಾನು ಕಾರ್ಯಕರ್ತರ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.

    ಆದರೆ ಇಂದು ಬೆಳಗ್ಗೆ 11ರ ಬಳಿಕವೂ ಇನ್ನೂ ಬಿಜೆಪಿಯ ನಾಯಕರ ನಿಲುವಿಗಾಗಿ ಕಾದಿರುವ ಅವರ ನಿರ್ಧಾರದ ಬಗ್ಗೆ ಕುತೂಹಲ ಉಂಟಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧರ್ಮೇಂದ್ರ ಪ್ರಧಾನ್ ಅವರು ತಮ್ಮಲ್ಲಿಗೆ ಬರಲಿದ್ದು, ಅವರ ನಿಲುವು ತಿಳಿಸಿದ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಶೆಟ್ಟರ್ ಹೇಳಿದ್ದರು.

    ಇದನ್ನೂ ಓದಿ: ಸಿದ್ದರಾಮಯ್ಯಗೆ ವಾಯುಯಾನ ಕಂಟಕ?; ನಿನ್ನೆ ವಿಮಾನ, ಇಂದು ಹೆಲಿಕಾಪ್ಟರ್​ ಪ್ರಯಾಣದಲ್ಲಿ ಸಮಸ್ಯೆ!

    ಆದರೆ ರಾತ್ರಿ 8.30ರ ಸುಮಾರಿಗೆ ಈ ಮೂವರು ನಾಯಕರು ತಮ್ಮ ಮನೆಗೆ ಬರಲಿದ್ದಾರೆ ಎಂದು ಶೆಟ್ಟರ್ ಹೇಳಿದ್ದು, ಗಂಟೆ 9 ಕಳೆದರೂ ಇನ್ನೂ ಆ ಮೂವರ ಆಗಮನವಾಗಿಲ್ಲ. ಕೇಂದ್ರ ನಾಯಕರಿಗೆ ತಮ್ಮ ಮನೆಗೆ ಬನ್ನಿ ಎಂದು ಶೆಟ್ಟರ್ ಆಹ್ವಾನಿಸಿದ್ದರೆ, ನಾಯಕರು ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್​ಗೆ ಬಂದು ಭೇಟಿ ಆಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಮನವೊಲಿಕೆ ಕುರಿತು ಹೋಟೆಲ್​ನಲ್ಲಿ ಮೂವರು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದು, ಆ ಬಳಿಕ ಅವರು ಮತ್ತು ಶೆಟ್ಟರ್ ಭೇಟಿ ನಡೆಯಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಶೆಟ್ಟರ್ ವಿಚಾರವಾಗಿ ಮುಂದಿನ ಬೆಳವಣಿಗೆ ಏನಾಗಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳು ಹಾಗೂ ಬಿಜೆಪಿ ವಲಯದಲ್ಲಿ ಹೆಚ್ಚಾಗಿದೆ.

    ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts