More

    ಯುವತಿ ಪರ ವಕೀಲರ ಸ್ಫೋಟಕ ಹೇಳಿಕೆ: ಪೊಲೀಸ್​ ಆಯುಕ್ತರ ಮುಂದೆ ಸಿಡಿ ಲೇಡಿ ಬರ್ತಾಳಂತೆ! ಆದರೆ…

    ಬೆಂಗಳೂರು: ಸಿಡಿ ಪ್ರಕರಣದ ಯುವತಿಗೆ ತಾನು ಸೇಫ್​ ಅನಿಸಿದರೆ ಆಕೆಯೇ ಮುಂದೆ ಬಂದು ಸ್ವತಃ ಹೇಳಿಕೆ ನೀಡಲು ಸಿದ್ಧವಾಗಿದ್ದಾಳೆಂದು ಯುವತಿ ಪರ ವಕೀಲರಾದ ಜಗದೀಶ್​ ಕೆ.ಎನ್.​ ಮಹದೇವ್​ ಹೇಳಿದರು.

    ಸಿಡಿ ಲೇಡಿಯ ಮೂರನೇ ವಿಡಿಯೋ ಬಿಗಡೆಯಾದ ಬೆನ್ನಲ್ಲೇ ಫೇಸ್​ಬುಕ್​ ಲೈವ್​ನಲ್ಲಿ ಪ್ರಕರಣ ಕುರಿತು ಜಗದೀಶ್​ ಮಾತನಾಡಿದರು. ನಮ್ಮನ್ನು ನಂಬಿ ಯುವತಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್​ ಆಯುಕ್ತರಿಗೆ ತಲುಪಿಸಲು ನಮ್ಮ ವಕೀಲರ ತಂಡ ತೆರಳುತ್ತಿದ್ದೇವೆ ಎಂದರು.

    ಇದನ್ನೂ ಓದಿರಿ: ಸಿಡಿ ಲೇಡಿಯ ಮೂರನೇ ವಿಡಿಯೋ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

    ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣವನ್ನು ಸರ್ಕಾರ ಎಸ್​ಐಟಿ ತನಿಖೆಗೆ ವಹಿಸಿದೆ. ಯುವತಿಯ ವಿಚಾರವನ್ನು ಸಹ ಎಸ್​ಐಟಿ ನೋಡಿಕೊಳ್ಳುತ್ತಿದೆ. ಸಿಡಿ ಯುವತಿಗೆ ಕಾನೂನು ರಕ್ಷಣೆ ಬೇಕಾದರೆ ನಾವು ನೀಡಲು ಸಿದ್ಧ ಎಂದು ಈ ಹಿಂದೆ ಘೋಷಣೆ ಮಾಡಿದ್ದೆವು. ಆಕೆಯು ಸಹ ನನಗೆ ರಕ್ಷಣೆ ಬೇಕೆಂದು ವಿಡಿಯೋ ಸಹ ಮಾಡಿದ್ದಾಳೆ. ಆಕೆ ಇಂದು ನಮಗೊಂದು ಲಿಖಿತ ದೂರಿನ ಪ್ರತಿಯನ್ನು ಕಳುಹಿಸಿದ್ದಾಳೆ ಎಂದರು.

    ನಮ್ಮನ್ನು ನಂಬಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್​ ಆಯುಕ್ತರಿಗೆ ತಲುಪಿಸಲು ನಮ್ಮ ವಕೀಲರ ತಂಡ ಮಧ್ಯಾಹ್ನ 2.30ಕ್ಕೆ ತೆರಳುತ್ತಿದ್ದೇವೆ. ಆಕೆ ಸದ್ಯ ಪ್ರಾಣ ಭೀತಿಯಲ್ಲಿರುವುದರಿಂದ ಪತ್ರ ಹೇಗೆ ಕಳುಹಿಸಿದಳು ಎಂಬ ಮೂಲವನ್ನು ಹೇಳಲು ಸಾಧ್ಯವಿಲ್ಲ ಎಂದರು.

    ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಯಾವ ಬೆಳವಣಿಗೆ ಆಗುತ್ತದೆ ಎಂಬುದನ್ನು ಸಹ ತಿಳಿಸುತ್ತೇವೆ. ಪೊಲೀಸ್​, ಎಸ್​ಐಟಿ ಮತ್ತು ಸಿಎಂ ಬಿಎಸ್​ವೈ ಸರ್ಕಾರ ಆಕೆಗೆ ನ್ಯಾಯ ಕೊಡುತ್ತದೆ ಎಂದು ಆಕೆಗೆ ಅನಿಸಿದರೆ ಖಂಡಿತವಾಗಿಯು ಪೊಲೀಸ್​ ಆಯುಕ್ತರ ಮುಂದೆ ಬಂದು ಸ್ವತಃ ಹೇಳಿಕೆ ಕೊಡಲು ಸಿದ್ಧವಾಗಿದ್ದಾಳೆ ಎಂದು ತಿಳಿಸಿದರು.

    ಇದನ್ನೂ ಓದಿರಿ: ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಮಗಳ ಜತೆ ಮಗನನ್ನು ಕೊಂದು ನೇಣಿಗೆ ಶರಣಾದ ದಂಪತಿ..!

    ದೇಶದಲ್ಲಿ ಬಲಿಷ್ಠನಿಗೆ ನ್ಯಾಯ ಸಿಗುತ್ತದೆ. ಆದರೆ, ಕನಿಷ್ಠನಿಗೆ ನ್ಯಾಯ ಸಿಗುವುದು ವಿರಳ. ಈ ರೀತಿ ನ್ಯಾಯ ಸಿಕ್ಕಾಗ ಮಾತ್ರ ಸಂವಿಧಾನ ಉಳಿಯವುದು ಎಂದು ಹೇಳಿ ಜಗದೀಶ್ ಫೇಸ್​ಬುಕ್​ ಲೈವ್​ ಮುಗಿಸಿದರು. ​

    ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದೂರು! 3ನೇ ವಿಡಿಯೋದಲ್ಲಿ ಸ್ಫೋಟಕ ತಿರುವು

    ಸಿಡಿ ಲೇಡಿಯ ಮೂರನೇ ವಿಡಿಯೋ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

    ಸಿಡಿ ಲೇಡಿಗೆ ಮಹತ್ವದ ಸಲಹೆ ಕೊಟ್ಟ ಸಿದ್ದರಾಮಯ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts