More

    ಜಾಕ್​ವೆಲ್ ಕೆಲಸಕ್ಕೆ ಬ್ರೇಕ್

    ದಾಂಡೇಲಿ: ಹಳೇ ದಾಂಡೇಲಿಯ ಸರ್ಕಾರಿ ಪ್ರೌಢ ಶಾಲೆಯ ಪಕ್ಕದಲ್ಲಿ ಜಾಕ್​ವೆಲ್ ನಿರ್ಮಾಣ ಕಾಮಗಾರಿ ವೇಳೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದ್ದು ಇದರಿಂದ ಅಕ್ಕ-ಪಕ್ಕದ ಮನೆಗಳಿಗೆ ಹಾನಿಯುಂಟಾಗಿದೆ ಎಂದು ಆರೋಪಿಸಿ ಭಾನುವಾರ ಸಾರ್ವಜನಿಕರು ಪ್ರತಿಭಟಿಸಿದರು.

    ಸ್ಥಳಕ್ಕೆ ಆಗಮಿಸಿದ ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಆದಂ ದೇಸೂರ ಗುತ್ತಿಗೆ ಕಾಮಗಾರಿ ನಡೆಸುತ್ತಿರುವ ಇಂಜಿನಿಯರ್​ಗೆ

    ಕಾಮಗಾರಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳೊಂದಿಗೆ ಸೋಮವಾರ ಬೆಳಗ್ಗೆ ನಗರಸಭೆಗೆ ಬರುವಂತೆ ಸೂಚಿಸಿ ಅಲ್ಲಿಯವರೆಗೆ ಕಾಮಗಾರಿ ನಡೆಸದಂತೆ ತಾಕೀತು ಮಾಡಿದರು.

    ಆರೋಪಗಳೇನು?: ಕಾಳಿ ನದಿ ನೀರನ್ನು ಜಾಕ್​ವೆಲ್ ಮೂಲಕ ಒಯ್ದು ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಈ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ತೆಗೆದಿರುವ ನೂರಾರು ಲಾರಿ ಮಣ್ಣನ್ನು ನದಿಗೆ ಹಾಕಲಾಗಿದೆ. ಇನ್ನು ಕೆಲವು ತೆರೆದ ಚರಂಡಿಗೆ ಮಣ್ಣು ಸುರಿಯಲಾಗಿದೆ. ದಾಂಡೇಲಿ ಜನರಿಗೆ ಕುಡಿಯುವ ನೀರಿನ ಕೊರತೆ ಇರುವಾಗ ಅಳ್ನಾವರಕ್ಕೆ ನೀರು ಕೊಡುವುದು ಸರಿ ಅಲ್ಲವೆಂದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.

    ನಗರಸಭೆ ಸದಸ್ಯೆ ಸಪೂರಾ ಯರಗಟ್ಟಿ, ಹಳೇ ದಾಂಡೇಲಿ ಹಿರಿಯ ನಾಗರಿಕ ವಿಷ್ಣು ಕಾಮತ್, ರಾಜು ಕೋಡಕೊಣಿ, ಇಲಿಯಾಸ್ ಶೇಖ್, ಸಬಾಸ್ಟಿನ್ ಡಿಮೆಲ್ಲೊ, ಎಸ್.ಎಂ. ನಾಯ್ಕ, ಬಾಬಾ ಮುಲ್ಲ, ದಾಂಡೇಲಿ ತಾಲೂಕು ಸಮಗ್ರ ಹೋರಾಟ ಸಮಿತಿಯ ಅಕ್ರಂ ಖಾನ್, ರಾಘವೇಂದ್ರ ಗಡಪ್ಪನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts