More

    ಜಮ್ಮು-ಕಾಶ್ಮೀರದ ಕೋರ್ಟ್​ಗಳ 33 ನಾನ್​-ಗಜೆಟೆಡ್ ಹುದ್ದೆಗಳನ್ನು ದೇಶವಾಸಿಗಳಿಗೆ ಮುಕ್ತಗೊಳಿಸಿದ್ದ ಆದೇಶ ಹಿಂಪಡೆದ ಹೈಕೋರ್ಟ್​

    ಜಮ್ಮು: ಜಮ್ಮು-ಕಾಶ್ಮೀರ ಮತ್ತು ಲಡಾಕ್​ನ ವಿವಿಧ ಜಿಲ್ಲಾ ಕೋರ್ಟ್​ಗಳಲ್ಲಿ ಖಾಲಿ ಇದ್ದ 33 ನಾನ್​-ಗಜೆಟೆಡ್ ಹುದ್ದೆಗಳನ್ನು ದೇಶವಾಸಿಗಳಿಗೆ ಮುಕ್ತಗೊಳಿಸಿ ಹೊರಡಿಸಿದ್ದ ನೇಮಕಾತಿ ಆದೇಶವನ್ನು ಹೈಕೋರ್ಟ್​ ಹಿಂಪಡೆದಿದೆ.

    ಕಳೆದ ವರ್ಷ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ, ವಿಶೇಷ ಸ್ಥಾನಮಾನ ಹಿಂಪಡೆದಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಜಮ್ಮು-ಕಾಶ್ಮೀರದ ಹೈಕೋರ್ಟ್ ಡಿ.26ರಂದು ಪ್ರಕಟಿಸಿದ್ದ ಈ ಜಾಹೀರಾತು ದೇಶದಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿತ್ತು.

    ಆದರೆ, ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ಈ ಜಾಹೀರಾತನ್ನು ಕೋರ್ಟ್ ಹಿಂಪಡೆದುಕೊಂಡಿದೆ. ಇದಕ್ಕೆ ಯಾವುದೇ ಕಾರಣವನ್ನು ಅದು ಕೊಟ್ಟಿಲ್ಲ. ಆದಾಗ್ಯೂ, ಈ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

    ಮೂವತ್ತಮೂರು ಖಾಲಿ ಹುದ್ದೆಗಳ ಪೈಕಿ ಸೀನಿಯರ್, ಜೂನಿಯರ್ ಸ್ಕೇಲ್​ನ ಸ್ಟೆನೋಗ್ರಾಫರ್​, ಟೈಪಿಸ್ಟ್​, ಕಂಪೋಸಿಟರ್​, ಇಲೆಕ್ಟ್ರಿಷಿಯನ್​, ಡ್ರೈವರ್ ಹುದ್ದೆಗಳಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts