More

    ಅರ್ಜೆಂಟೀನಾದಲ್ಲಿ ಧರಿಸಿದ್ದ ಬಟ್ಟೆಯನ್ನೇ ಭಾರತದಲ್ಲೂ ಧರಿಸಿದ್ದರು ಇವಾಂಕಾ ಟ್ರಂಪ್​: ಆ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ದಂಪತಿ ಮತ್ತು ಅವರ ಮಗಳು ಇವಾಂಕಾ ಟ್ರಂಪ್​ ನಿನ್ನೆ ಮತ್ತು ಇಂದು ಭಾರತದ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಇವಾಂಕಾ ಟ್ರಂಪ್​ ತೊಟ್ಟಿದ್ದ ಬಟ್ಟೆ ಹಲವು ನೆಟ್ಟಿಗರ ಕಣ್ಣಿಗೆ ಗುರಿಯಾಗಿದೆ.

    ನಿನ್ನೆ (ಫೆ.24) ಇವಾಂಕಾ ಟ್ರಂಪ್​ ಬಿಳಿ ಬಣ್ಣದ ಬಟ್ಟೆಯಲ್ಲಿ ಕೆಂಪು ಬಣ್ಣದ ಹೂಗಳಿರುವ ಉಡುಪನ್ನು ತೊಟ್ಟಿದ್ದರು. ಈ ಉಡುಪನ್ನ ಆಕೆ ಈ ಮೊದಲೇ ತೊಟ್ಟಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರುಗಳು ಒಮ್ಮೆ ತೊಟ್ಟ ಬಟ್ಟೆಯನ್ನು ಮತ್ತೆ ತೊಟ್ಟಿರುವ ಉದಾಹರಣೆಗಳು ತೀರಾ ಕಡಿಮೆ. ಅಂತಹದರಲ್ಲಿ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಅಧ್ಯಕ್ಷನ ಮಗಳು ತೊಟ್ಟ ಬಟ್ಟೆಯನ್ನೇ ಮತ್ತೆ ತೊಟ್ಟಿರುವ ಸಾಕಷ್ಟು ಸುದ್ದಿಯಾಗಿದೆ.

    ಇವಾಂಕಾ ನಿನ್ನೆ ತೊಟ್ಟ ಬಟ್ಟೆಯನ್ನು ಅರ್ಜೆಂಟೀನಾಕ್ಕೆ ಹೋದಾಗಲೂ ತೊಟ್ಟಿದ್ದರು. ಅಲ್ಲಿನ ಫೋಟೋಗಳನ್ನು ಸಹ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಇವಾಂಕ ತೊಟ್ಟಿದ್ದ ಬಟ್ಟೆಯ ಬೆಲೆ ಬರೋಬ್ಬರಿ 1.7 ಲಕ್ಷ ರೂಪಾಯಿ.

    ಈ ಹಿಂದೆ ಪ್ರಧಾನಿ ಮೋದಿಯೇ, “ಒಮ್ಮೆ ತೊಟ್ಟ ಬಟ್ಟೆಯನ್ನು ಮತ್ತೆ ತೊಡಬೇಡಿ” ಎಂದು ಹೇಳಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರ ಮಾತಿಗೆ ವಿರುದ್ಧವೆಂಬಂತೆ ದೇಶಕ್ಕೆ ಬಂದಿರುವ ಅತಿಥಿ ನಡೆದುಕೊಂಡಿದ್ದು, ಮೋದಿಯ ಆ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts