More

    ಇದು ದೇಶದ್ರೋಹ… ಇದಕ್ಕೆ ಬೇರೆ ಪದಗಳೇ ಇಲ್ಲ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಅವರು ಭಾರತೀಯ ರಾಜ್ಯ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧವೇ ಇಸ್ರೇಲಿ ಬೇಹುಗಾರಿಕಾ ಸಾಫ್ಟ್​ವೇರ್ ಪೆಗಾಸಸ್​​​ ಬಳಸಿದ್ದಾರೆಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

    “ಪೆಗಾಸಸ್​ ಅನ್ನು ರಾಜಕೀಯವಾಗಿ ಬಳಸಿದ್ದಾರೆ. ಕರ್ನಾಟಕದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರದ ವಿರುದ್ಧ ಬಳಸಿದ್ದಾರೆ. ಸುಪ್ರೀಂ ಕೋರ್ಟ್ ವಿರುದ್ಧವೂ ಬಳಸಿದ್ದಾರೆ. ಈ ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳ ವಿರುದ್ಧವೂ ಬಳಸಿದ್ದಾರೆ. ಇದು ದೇಶದ್ರೋಹ. ಇದಕ್ಕೆ ಬೇರೆ ಪದಗಳೇ ಇಲ್ಲ ಎಂದು ಎಂದು ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

    ನನ್ನ ಫೋನ್​ ಕೂಡ ಕದ್ದಾಲಿಸಲಾಗಿದೆ. ಇದು ಕೇವಲ ರಾಹುಲ್​ ಗಾಂಧಿಯ ಗೌಪ್ಯತೆ ವಿಷಯವಲ್ಲ. ಪ್ರತಿಪಕ್ಷದ ಓರ್ವ ನಾಯಕನಾಗಿ ಜನರ ಪರವಾಗಿ ನನ್ನ ದನಿಯೇರಿಸುತ್ತೇನೆ. ಇದು ಜನರ ದನಿಯ ಮೇಲಿನ ದಾಳಿಯಾಗಿದೆ. ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ನರೇಂದ್ರ ಮೋದಿ ವಿರುದ್ಧ ಸುಪ್ರೀಂಕೋರ್ಟ್​ ತನಿಖೆ ನಡೆಸಬೇಕೆಂದು ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ.

    ರಾಹುಲ್​ ಗಾಂಧಿ ಆರೋಪಕ್ಕೆ ಬಿಜೆಪಿಯ ವಕ್ತಾರ ರಾಜವರ್ಧನ್​ ರಾಥೋಡ್​ ಪ್ರತಿಕ್ರಿಯಿಸಿದ್ದು, ಅವರ ಫೋನ್​ ಕದ್ದಾಲಿಸಲಾಗಿದೆ ಎಂದು ಯೋಚಿಸಿದರೆ, ಕಾಂಗ್ರೆಸ್​ ನಾಯಕ ತಮ್ಮ ಫೋನ್​ ಅನ್ನು ತನಿಖಾಸಂಸ್ಥೆಗೆ ಹಸ್ತಾಂತರಿಸಬಹುದು. ಐಪಿಸಿ ಸೆಕ್ಷನ್​ ಅಡಿಯಲ್ಲಿ ಸರಿಯಾದ ತನಿಖೆ ನಡೆಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.

    ಪೆಗಾಸಿಸ್​ ಸಾಫ್ಟ್​ವೇರ್​ ಅನ್ನು ಭಾರತೀಯರ ಮೇಲೆಯೇ ಬಳಸಲಾಗಿದೆ ಎಂಬ ಗಂಭೀರ ಆರೋಪವನ್ನು ಸರ್ಕಾರ ಅಲ್ಲಗೆಳೆದಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುಂಚಿನ ಆರೋಪಗಳು “ಭಾರತೀಯ ಪ್ರಜಾಪ್ರಭುತ್ವವನ್ನು ಕೆಡಿಸುವ” ಗುರಿಯನ್ನು ಹೊಂದಿವೆ ಎಂದಿದೆ. (ಏಜೆನ್ಸೀಸ್​)

     ಜುಲೈ 26ರಿಂದ 9-11ನೇ ತರಗತಿ ಓಪನ್​: ಆದೇಶ ಹೊರಡಿಸಿದ ಗುಜರಾತ್​ ಸಿಎಂ

    ಬಿಎಸ್​ವೈ-ಹೈಕಮಾಂಡ್ ನಡುವೆ 2 ವರ್ಷಕ್ಕೆ ಒಪ್ಪಂದ ಆಗಿತ್ತು… ಬಿಜೆಪಿ ಸಂಸದರಿಂದಲೇ ಹೊರಬಿತ್ತು ಸ್ಫೋಟಕ ಮಾಹಿತಿ

    ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್​ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts