More

    ಒಂದೇ ದಿನದಲ್ಲಿ ಇಟಲಿಯಲ್ಲಿ 368 ಮಂದಿಯನ್ನು ಬಲಿ ಪಡೆದುಕೊಂಡ ಡೆಡ್ಲಿ ಕರೊನಾ

    ರೋಮ್​: ಜಾಗತಿಕವಾಗಿ ಆರು ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡು ಸಾವಿನ ರಣಕೇಕೆ ಹಾಕುತ್ತಿರುವ ಮಾರಕ ಕರೊನಾ ವೈರಸ್​ ಇಟಲಿಯಲ್ಲಿ ಒಂದೇ ದಿನ 368 ಮಂದಿಯನ್ನು ತನ್ನ ಮೃತ್ಯುಕೂಪಕ್ಕೆ ಕೆಡವಿಕೊಂಡಿದೆ.

    ಅಧಿಕೃತ ಮಾಹಿತಿ ಪ್ರಕಾರ ಭಾನುವಾರ ಒಂದೇ ದಿನ ಇಟಲಿಯಲ್ಲಿ 368 ಮಂದಿ ಡೆಡ್ಲಿ ಕರೊನಾಗೆ ಹತರಾಗಿದ್ದಾರೆ. ಇದುವರೆಗೂ ದಿನವೊಂದರಲ್ಲಿ ಸಾವಿಗೀಡಾದವರ ಅಧಿಕ ಸಂಖ್ಯೆ ಇದಾಗಿದೆ. ಚೀನಾ ಹೊರತುಪಡಿಸಿ, ಕರೊನಾ ಹೆಚ್ಚು ಪರಿಣಾಮ ಬೀರಿದ ಎರಡನೇ ರಾಷ್ಟ್ರ ಇಟಲಿಯಾಗಿದ್ದು, ಈವರೆಗೂ ಒಟ್ಟು 1809 ಮಂದಿ ಇಹಲೋಕ ತ್ಯಜಿಸಿದ್ದಾರೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆಯು 24,747ಕ್ಕೇ ಏರಿದೆ. ಈ ಎಲ್ಲ ಮಾಹಿತಿಯನ್ನು ಇಟಲಿಯ ನಾಗರಿಕ ರಕ್ಷಣಾ ಸೇವಾ ಇಲಾಖೆ ಬಿಡುಗಡೆ ಮಾಡಿದೆ.

    ಮಿಲಾನ್​ ಸುತ್ತಲಿನ ಉತ್ತರ ಲೊಂಬಾರ್ಡಿ ವಲಯವು ಯೂರೋಪ್​ ಖಂಡದ ಕರೊನಾ ಕಂಟಕ ಕೇಂದ್ರ ಪ್ರದೇಶವಾಗಿದೆ. ಇಟಲಿಯ 1809 ಮಂದಿ ಸಾವಿನಲ್ಲಿ ಶೆ. 67 ಅಂದರೆ 1218 ಮಂದಿ ಈ ವಲಯದಲ್ಲೇ ಮೃತಪಟ್ಟಿದ್ದಾರೆ.

    ಆಗ್ನೇಯ ಪಗ್ಲಿಯಾ ಪ್ರದೇಶದಲ್ಲೂ ಭಾನುವಾರ ಸಾವಿನ ಸಂಖ್ಯೆ 8 ರಿಂದ 16ಕ್ಕೇ ಏರಿದೆ. ಇಟಲಿ ರಾಜಧಾನಿ ರೋಮ್ ಒಳಗೊಂಡ ಲಜಿಯೋ ವಲಯದಲ್ಲಿ ಸಾವಿನ ಸಂಖ್ಯೆ 16ಕ್ಕೇ ಏರಿದ್ದು, ಸೋಂಕಿತರ ಸಂಖ್ಯೆ 436ಕ್ಕೇ ಏರಿದೆ. (ಏಜೆನ್ಸೀಸ್​)

    ಕರೊನಾ ವದಂತಿಗಳದ್ದೇ ಕಾರುಬಾರು; ಇದಕ್ಕೆಲ್ಲ ಕಿವಿಗೊಡಲೇಬೇಡಿ

    ಕರೊನಾ ಸಾವು ಆರು ಸಾವಿರ; ಭಾರತದಲ್ಲಿ 109ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts