More

    ಕೊಹ್ಲಿ ಮಾಡಿದ್ದು ನೂರಕ್ಕೆ ನೂರರಷ್ಟು ತಪ್ಪು! ಟೀಮ್​ ಇಂಡಿಯಾ ಮಾಜಿ ಆಟಗಾರನ ಸ್ಫೋಟಕ ಹೇಳಿಕೆ

    ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ಪಂದ್ಯದಲ್ಲಿ ನಡೆದ ಒಂದು ಘಟನೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಳೆಯ ವರದಾನದಿಂದಾಗಿ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಟೀಮ್​ ಇಂಡಿಯಾ ಕೊನೆಯ ಓವರ್​ನಲ್ಲಿ 5 ರನ್​ಗಳ ಅಂತರದಿಂದ ಜಯ ದಾಖಲಿಸಿತು. ಆದರೆ, ಅದೇ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ವಿರುದ್ಧ “ನಕಲಿ ಕ್ಷೇತ್ರ ರಕ್ಷಣೆ” ಆರೋಪ ಮಾಡಿದ್ದು, ಈ ವಿವಾದ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್​ ಪಂಡಿತ ಗಮನವನ್ನು ಸೆಳೆದಿದೆ.

    ಅಂಪೈರ್​ಗಳ ಎಡವಟ್ಟನ್ನು ಬಾಂಗ್ಲಾ ಆಟಗಾರರು ನಿರಂತವಾಗಿ ಟೀಕೆ ಮಾಡುತ್ತಿದ್ದಾರೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಆಕಾಶ್​ ಚೋಪ್ರಾ ಅವರು ಬಾಂಗ್ಲಾ ಆರೋಪವನ್ನು ಬೆಂಬಲಿಸಿದ್ದು, ಕೊಹ್ಲಿ ನಕಲಿ ಕ್ಷೇತ್ರ ರಕ್ಷಣೆ ಮಾಡುವ ಮೂಲಕ ತಪ್ಪನ್ನು ಎಸಗಿದ್ದಾರೆ. ಅವರ ನಕಲಿ ಕ್ಷೇತ್ರ ರಕ್ಷಣೆಯನ್ನು ಗುರುತಿಸುವಲ್ಲಿ ಅಂಪೈರ್​ಗಳು ವಿಫಲವಾದ ಕಾರಣ ಭಾರತಕ್ಕೆ ಅದು ವರದಾನವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಮೈದಾನದಲ್ಲಿ ಕೊಹ್ಲಿ ಮಾಡಿದ ನಕಲಿ ಕ್ಷೇತ್ರ ರಕ್ಷಣೆಯನ್ನು ಒಂದು ವೇಳೆ ಅಂಪೈರ್‌ಗಳು ಕಣ್ಣಾರೆ ಕಂಡಿದ್ದರೆ ಕೊಹ್ಲಿಯಿಂದಾಗಿ ಭಾರತಕ್ಕೆ ಪೆನಾಲ್ಟಿ ಬೀಳುತ್ತಿತ್ತು. ನೂರಕ್ಕೆ ನೂರರಷ್ಟು ಕೊಹ್ಲಿ ಮಾಡಿದ್ದು ನಕಲಿ ಕ್ಷೇತ್ರ ರಕ್ಷಣೆ. ಏಕೆಂದರೆ, ಕೊಹ್ಲಿ ಚೆಂಡನ್ನು ಎಸೆಯುವಂತೆ ನಟನೆ ಮಾಡಿದ್ದಾರೆ. ಒಂದು ವೇಳೆ ಅಂಪೈರ್​ಗಳು ನೋಡಿದ್ದರೆ, ಬಾಂಗ್ಲಾ ತಂಡಕ್ಕೆ 5 ರನ್​ಗಳ ಕೊಡುಗೆ ಸಿಗುತ್ತಿತ್ತು. ನಾವು ಗೆದ್ದಿದ್ದು ಸಹ ಐದು ರನ್​ಗಳಿಂದಲೇ. ನಾವು ಸೋಲಿನಿಂದ ಎಸ್ಕೇಪ್​ ಆಗಿದ್ದೇವೆ. ಮುಂದೆ ಈ ರೀತಿ ಯಾರು ಮಾಡದಂತೆ ಅಂಪೈರ್​ಗಳು ಎಚ್ಚರಿಕೆ ವಹಿಸಿ. ಬಾಂಗ್ಲಾ ಆರೋಪ ಮಾಡಿದ್ದು ಸರಿ. ಆದರೆ, ಯಾರೂ ಕೂಡ ಇದನ್ನು ಗಮನಿಸದೇ ಇದ್ದುದ್ದರಿಂದ ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಆಕಾಶ್​ ಚೋಪ್ರಾ ಹೇಳಿಕೊಂಡಿದ್ದಾರೆ.

    ಕೇವಲ 5 ಪೆನಾಲ್ಟಿ ರನ್​ ಮಾತ್ರ ಸಿಗುತ್ತಿರಲಿಲ್ಲ. ಆ ಬಾಲ್​ ಅನ್ನು ಡೆಡ್​ ಬಾಲ್​ ಎಂದು ಪರಿಗಣಿಸಲಾಗುತ್ತಿತ್ತು. ಮೊದಲೇ ಎರಡು ರನ್​ ಓಡಿದ್ದ ಬಾಂಗ್ಲಾ ತಂಡಕ್ಕೆ ಒಟ್ಟು 7 ರನ್​ ಸೇರ್ಪಡೆಯಾಗುತ್ತಿತ್ತು. ಪಂದ್ಯದಲ್ಲಿ ಅಂಪೈರ್​ಗಳ ವೈಫಲ್ಯದಿಂದ ಭಾರತಕ್ಕೆ ಲಾಭವಾಯಿತು. ಆದರೆ, ಭವಿಷ್ಯದಲ್ಲಿ ಇಂತಹ ನಿದರ್ಶನಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

    ಮೊದಲು ಧ್ವನಿ ಎತ್ತಿದ್ದೇ ನರುಲ್​
    ಕೊಹ್ಲಿ ನಕಲಿ ಕ್ಷೇತ್ರ ರಕ್ಷಣೆ ಮಾಡಿದ್ದರ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಬಾಂಗ್ಲಾ ಆಟಗಾರ ನರುಲ್​ ಹಸನ್​. ನಕಲಿ ಕ್ಷೇತ್ರ ರಕ್ಷಣೆಯನ್ನು ಅಂಪೈರ್​ಗಳು​ ಗಮನಿಸಲಿಲ್ಲ. ಇದರಿಂದ ನಮ್ಮ ತಂಡಕ್ಕೆ 5 ಪೆನಾಲ್ಟಿ ರನ್​ ಸಿಗುವ ಸಾಧ್ಯತೆ ಇತ್ತು. ಆದರೆ, ಅಂಪೈರ್​ಗಳು ಮಾಡಿದ ಎಡವಟ್ಟಿನಿಂದಾಗಿ ನಮ್ಮ ತಂಡಕ್ಕೆ ವಂಚನೆ ಆಗಿದೆ ಎಂದು ಅಪೈಂರ್​ಗಳಾದ ಕ್ರಿಸ್​ ಬ್ರೌನ್​ ಮತ್ತು ಮರೈಸ್ ಎರಾಸ್ಮಸ್ ವಿರುದ್ಧ ನರುಲ್​ ಆರೋಪ ಮಾಡಿದರು.

    ಅಂದಹಾಗೆ ನರುಲ್​ 7ನೇ ಓವರ್​ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಈ ಮಾತನ್ನು ಆಡಿದ್ದಾರೆ. ಬೌಂಡರಿ ಲೈನ್​ನಲ್ಲಿದ್ದ ಅರ್ಷದೀಪ್​ ಚೆಂಡನ್ನು ವಿಕೆಟ್​ ಕೀಪರ್​ ಬಳಿ ಎಸೆಯುತ್ತಾರೆ. ಈ ವೇಳೆ ಸ್ಲಿಪ್​ ವಿಭಾಗದಲ್ಲಿ ನಿಂತಿದ್ದ ಕೊಹ್ಲಿ ಚೆಂಡನ್ನು ಹಿಡಿದಿರುವಂತೆ ಮತ್ತು ನಾನ್​ ಸ್ಟ್ರೈಕರ್​ ವಿಭಾಗಕ್ಕೆ ಎಸೆಯುತ್ತಿರುವಂತೆ ನಟಿಸುತ್ತಾರೆ. ಆದರೆ, ಚೆಂಡು ವಿಕೆಟ್​ ಕೀಪರ್​ ಕೈಯಲ್ಲಿ ಇರುತ್ತದೆ. ಆ ಕ್ಷಣದಲ್ಲಿ ಬ್ಯಾಟ್ಸ್​ಮನ್​ಗಳಾದ ಲಿಟನ್​ ದಾಸ್​ ಮತ್ತು ನಿಜ್ಮುಲ್​ ಹೊಸೈನ್​ ಕೊಹ್ಲಿಯನ್ನು ಗಮನಿಸುವುದೇ ಇಲ್ಲ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಶೇರ್​ ಮಾಡಿರುವ ನರುಲ್​, ಅಂಪೈರ್​ಗಳು ಇದ್ದನ್ನು ಗಮನಿಸಿದ್ದರೆ ನಮಗೆ 5 ರನ್​ ಪೆನಾಲ್ಟಿ ಸಿಗುತ್ತಿತ್ತು ಎಂದಿದ್ದಾರೆ. ಇದು ನಕಲಿ ಕ್ಷೇತ್ರ ರಕ್ಷಣೆಯಾಗಿದ್ದು, ಅದನ್ನು ಗಮನಿಸಿದ ಅಂಪೈರ್​ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಐಸಿಸಿ ಆಟದ ನಿಯಮ 41.5 ಅನ್ಯಾಯದ ಆಟಕ್ಕೆ ಸಂಬಂಧಿಸಿದೆ. ಫೀಲ್ಡಿಂಗ್ ತಂಡವು ಉದ್ದೇಶಪೂರ್ವಕವಾಗಿ ವಂಚನೆ ಅಥವಾ ಬ್ಯಾಟ್ಸ್​ಮನ್​ಗೆ ಅಡಚಣೆ ಉಂಟು ಮಾಡುವುದನ್ನು ಈ ನಿಯಮ ನಿಷೇಧಿಸುತ್ತದೆ. ಒಂದು ವೇಳೆ ಇದು ಅಂಪೈರ್​ ಗಮನಕ್ಕೆ ಬಂದು ನಿಯಮ ಉಲ್ಲಂಘನೆ ಎಂದು ಗೊತ್ತಾದಲ್ಲಿ ಆ ಎಸೆತವನ್ನು ಡೆಡ್​ ಬಾಲ್​ ಎಂದು ಪರಿಗಣಿಸಿ, ಐದು ಪೆನಾಲ್ಟಿ ರನ್​ ಕೊಡಬಹುದು. ಆದರೆ, ಕೊಹ್ಲಿ ಪ್ರಕರಣದಲ್ಲಿ ಆ ರೀತಿ ನಡೆದಿಲ್ಲ. ಏಕೆಂದರೆ, ಕೊಹ್ಲಿ ಚೆಂಡನ್ನು ಎಸೆಯುವಂತೆ ನಟಿಸಿದಾಗ ಬ್ಯಾಟ್ಸ್​ಮನ್​ಗಳು ಕೊಹ್ಲಿಯನ್ನು ಗಮನಿಸಿಲ್ಲ ಮತ್ತು ಯಾವುದೇ ಅಡಚಣೆಗೆ ಒಳಗಾಗಿಯೇ ಇಲ್ಲ. ಹೀಗಾಗಿ ಆರೋಪಕ್ಕೆ ಬೆಲೆಯಿಲ್ಲ ಎಂದು ಹೇಳಲಾಗಿದೆ.

    ಮಳೆಯ ಕಾರಣದಿಂದಾಗಿ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಬಾಂಗ್ಲಾ ತಂಡಕ್ಕೆ 16 ಓವರ್​ಗಳಲ್ಲಿ 151 ರನ್​ ಗುರಿ ನೀಡಲಾಗಿತ್ತು. ಆದರೆ, ಅಂತಿಮವಾಗಿ 5 ರನ್​ ಅಂತರದಿಂದ ಬಾಂಗ್ಲಾ ತಂಡ ಸೋಲನ್ನು ಅನುಭವಿಸಿತು. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಸೋಲಿನ ಬೆನ್ನಲ್ಲೇ ವಿರಾಟ್​ ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಬಾಂಗ್ಲಾ ಆಟಗಾರ ನರುಲ್​ ಹಸನ್​!

    ಭಾರತ ಸೆಮಿಫೈನಲ್​ ಪ್ರವೇಶಿಸಿದ ಬೆನ್ನಲ್ಲೇ ICC ವಿರುದ್ಧ ಅಫ್ರಿದಿ ಗಂಭೀರ ಆರೋಪ: ಕೊಹ್ಲಿ ಮೇಲೆಯೇ ಕಣ್ಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts