More

    ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಮನೆ ಮೇಲೆ ಐಟಿ ದಾಳಿ; ಒಡಿಶಾದಲ್ಲಿ ಸಂಬಂಧಿಕರ ಹೆಸರಲ್ಲಿ ಭಾರಿ ಮದ್ಯದ ದಂಧೆ ಬಯಲು

    ಜಾರ್ಖಂಡ್: ಒಡಿಶಾದ ಹಲವು ಸ್ಥಳಗಳಲ್ಲಿ ಜಾರ್ಖಂಡ್ ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ನಾಯಕ ಧೀರಜ್ ಸಾಹು ಅವರ ಆಪ್ತರ ಮೇಲೆ ಬುಧವಾರ (ಡಿಸೆಂಬರ್ 6) ಆರಂಭವಾದ ಆದಾಯ ತೆರಿಗೆ ಇಲಾಖೆಯ ಕ್ರಮವು ಗುರುವಾರ (ಡಿಸೆಂಬರ್ 7) ಮುಂದುವರಿಯುತ್ತಿದೆ.  

    ಧೀರಜ್ ಸಾಹುಗೆ ಆಪ್ತರ ಅರ್ಧ ಡಜನ್‌ಗೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಯುತ್ತಿದ್ದು, ಇದರಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಸಂಬಲ್‌ಪುರ್, ರೂರ್ಕೆಲಾ, ಬೋಲಂಗಿರ್ ಮತ್ತು ಬೌಧ್ ಸೇರಿದಂತೆ ಒಡಿಶಾದ ಅರ್ಧ ಡಜನ್ ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.   

    ಸಂಬಲ್‌ಪುರದ ಕೆಲವು ಬ್ಯಾಂಕ್ ಖಾತೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಧೀರಜ್ ಸಾಹುಗೆ ಆಪ್ತರಾಗಿರುವ ಮದ್ಯದ ಉದ್ಯಮಿ ಡಬ್ಲ್ಯು ಸಾಹು ಅವರ ಆವರಣದಲ್ಲಿ ಬುಧವಾರದಿಂದ ದಾಳಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ನೋಟು ಎಣಿಕೆ ಯಂತ್ರದಿಂದ ರೂಪಾಯಿ ಎಣಿಕೆ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಇದುವರೆಗೆ 100 ಕೋಟಿ ರೂ.ಗೂ ಅಧಿಕ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾಗಿದೆ.
    ಐಟಿ ತಂಡವು ಬೌಧ್‌ನಲ್ಲಿರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ತಲುಪಿದೆ. ಯಾರನ್ನೂ ಒಳಗಿನಿಂದ ಹೊರಗೆ ಬರಲು ಬಿಡುತ್ತಿಲ್ಲ. ಹಾಗೆಯೇ ಒಳಗೆ ಹೋಗಲು ಯಾರಿಗೂ ಅವಕಾಶವಿಲ್ಲ. ಧೀರಜ್ ಸಾಹು ಅವರ ತಂದೆ ಶಿವಪ್ರಸಾದ್ ಸಾಹು ಅವರ ಹೆಸರಿನಲ್ಲಿ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನೋಂದಣಿಯಾಗಿದೆ ಎಂದು ಹೇಳಲಾಗುತ್ತಿದೆ. ಕಂಪನಿಯ ಮೇಲೆ ತೆರಿಗೆ ವಂಚನೆ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ.

    ಇನ್ನು ಒಡಿಶಾದಲ್ಲಿ ಧೀರಜ್ ಸಾಹು ಸಂಬಂಧಿಕರ ಹೆಸರಿನಲ್ಲಿ ದೊಡ್ಡ ಮದ್ಯದ ದಂಧೆ ನಡೆಯುತ್ತಿದ್ದು, ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ (BDPL) ಹೆಸರಿನ ದೊಡ್ಡ ಸಂಸ್ಥೆ ಇದೆ. ಆದಾಯ ತೆರಿಗೆ ಅಧಿಕಾರಿಗಳು ಈ ಸಂಸ್ಥೆಗೆ ಸಂಬಂಧಿಸಿದ ಬಲಂಗೀರ್, ರಾಯ್‌ಗಢ ಮತ್ತು ಸಂಬಲ್‌ಪುರ ಡಿಸ್ಟಿಲರಿ ಸ್ಥಾವರಗಳಿಗೂ ತಲುಪಿದ್ದರು. ಇದಲ್ಲದೆ, ತಂಡವು ರಾಂಚಿ ಮತ್ತು ಲೋಹರ್ದಗಾದಲ್ಲಿರುವ ಧೀರಜ್ ಸಾಹು ಅವರ ನಿವಾಸಗಳನ್ನು ಸಹ ತಲುಪಿತು. 

    ಸಂಬಂಧಿಕರ ಹೆಸರಿನಲ್ಲಿ ಹಲವು ಕಂಪನಿಗಳು
    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಾಹುಗೆ ಸಂಬಂಧಿಸಿದ ಬಾಟ್ಲಿಂಗ್ ಮತ್ತು ಡಿಸ್ಟಿಲರಿ ಪ್ಲಾಂಟ್‌ಗಳಿರುವ ಎಲ್ಲಾ ಸ್ಥಳಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿದ ದಾಖಲೆಗಳ ಹೊರತಾಗಿ, ದಾಳಿಯಲ್ಲಿ ಇನ್ನೇನು ಪತ್ತೆಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಡಿಶಾದಲ್ಲಿ ಧೀರಜ್ ಸಾಹು ಸಂಬಂಧಿಕರ ಹೆಸರಿನಲ್ಲಿ ಹಲವು ಕಂಪನಿಗಳಿವೆ. ಇವುಗಳಲ್ಲಿ ಬಲ್ದೇವ್ ಸಾಹು ಇನ್ಫ್ರಾ ಪ್ರೈವೇಟ್ ಲಿಮಿಟೆಡ್ (ಫ್ಲೈ ಆಶ್ ಬ್ರಿಕ್ಸ್), ಕ್ವಾಲಿಟಿ ಬಾಟ್ಲರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕಿಶೋರ್ ಪ್ರಸಾದ್ ವಿಜಯ್ ಪ್ರಸಾದ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಸೇರಿವೆ.

    ವಿದೇಶಿ ಮದ್ಯದ ಬಾಟಲಿಗಳನ್ನು ಕ್ವಾಲಿಟಿ ಬಾಟ್ಲರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಾಡಲಾಗುತ್ತಿದೆ. ಆದರೆ, ವಿದೇಶಿ ಮದ್ಯವನ್ನು ಕಿಶೋರ್ ಪ್ರಸಾದ್ ವಿಜಯ್ ಪ್ರಸಾದ್ ಬಿವರೇಜಸ್ ಪ್ರೈವೇಟ್ ಲಿಮಿಟೆಡ್ ನಿಂದ ಮಾರಾಟ ಮಾಡಲಾಗುತ್ತಿದೆ. 

    ಹೊಸ ವರ್ಷದಿಂದ ಬದಲಾಗಲಿದೆ ಸಿಮ್ ಕಾರ್ಡ್ ನಿಯಮಗಳು : ಇನ್ಮೇಲೆ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts