More

    ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಮಾಜಿ ಟಿಎಂಸಿ !

    ಕೊಲ್ಕತಾ : ನಂದೀಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ತೃಣಮೂಲ ಕಾಂಗ್ರೆಸ್​(ಟಿಎಂಸಿ) ನಂತರ ಅತಿ ಹೆಚ್ಚು ಸೀಟುಗಳನ್ನು ಗೆದ್ದಿರುವ ಬಜೆಪಿಯ ನೂತನ ಶಾಸಕರ ಸಭೆಯಲ್ಲಿ ಇಂದು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ನಡೆಯಿತು.

    ಕಾಂಗ್ರೆಸ್​ನ ವಿದ್ಯಾರ್ಥಿ ವಿಭಾಗವಾದ ಛಾತ್ರ ಪರಿಷದ್​ನೊಂದಿಗೆ ರಾಜಕೀಯ ಪ್ರವೇಶಿಸಿದ ಅಧಿಕಾರಿ ಅವರು, 1999 ರಲ್ಲಿ ಟಿಎಂಸಿ ಸೇರಿದ್ದರು. ಎರಡು ದಶಕಕ್ಕೂ ಹೆಚ್ಚು ಕಾಲ ಟಿಎಂಸಿಯಲ್ಲಿದ್ದು ಮಮತಾ ಬ್ಯಾನರ್ಜಿ ಅವರ ನಂಬಿಕಸ್ಥರಾಗಿ ಬೆಳೆದಿದ್ದ ಅವರು, 2020 ರ ಡಿಸೆಂಬರ್​​ನಲ್ಲಿ ಬಿಜೆಪಿ ಸೇರಿಕೊಂಡರು.

    ಇದನ್ನೂ ಓದಿ: ಅಸ್ಸಾಂನ 15ನೇ ಸಿಎಂ ಆದ ಹಿಮಂತ ಬಿಸ್ವ ಸರ್ಮ

    ಬಂಗಾಳದಲ್ಲಿ ಟಿಎಂಸಿಗೆ ಭಾರೀ ಬಹುಮತ ಬಂದು, ರಾಜ್ಯದಲ್ಲಿ ಬಿಜೆಪಿ ತನ್ನ ಛಾಪನ್ನು ಒತ್ತುವಲ್ಲಿ ವಿಫಲವಾಯಿತು. ಆದರೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾತ್ರ ನಂದೀಗ್ರಾಮ ಕ್ಷೇತ್ರದಲ್ಲಿ 1,900 ಮತಗಳ ಅಂತರದಿಂದ ಸುವೇಂದು ಅಧಿಕಾರಿ ವಿರುದ್ಧ ಪರಾಜಯ ಹೊಂದಿದರು. (ಏಜೆನ್ಸೀಸ್)

    ಲಸಿಕೆ ಪಡೆದ ಕ್ರಿಕೆಟಿಗರು : ನೀವೂ ಬೇಗ ತೊಗೊಳ್ಳಿ ಎಂದ ಕೊಹ್ಲಿ, ಶರ್ಮ

    ಬೊಮ್ಮಾಯಿ ದೆಹಲಿ ಭೇಟಿ : ಅಮಿತ್​ ಷಾರೊಂದಿಗಿನ ಚರ್ಚೆ ವಿವರ ಬಿಚ್ಚಿಟ್ಟ ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts