More

    ಶಾಲೆಗಳನ್ನು ಪಾಳಿಗಳಲ್ಲಿ ನಡೆಸುವುದಕ್ಕೆ ವಿರೋಧವೇಕೆ?

    ಮೈಸೂರು: ಸ್ಥಗಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳ ಪುನಾರಂಭಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಇದಕ್ಕಾಗಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

    ಈ ನಡುವೆ, ಶಾಲೆಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಪಾಳಿಗಳಲ್ಲಿ ಶಾಲೆ ನಡೆಸುವಂತೆ ಸಲಹೆಗಳು ಶಿಕ್ಷಣ ಆಯುಕ್ತರು ನಡೆಸಿದ ವಿಡಿಯೋ ಸಂವಾದದಲ್ಲಿ ಕೇಳಿ ಬಂದಿದ್ದವು.

    ಇದಕ್ಕೀಗ ಪರ-ವಿರೋಧ ಚರ್ಚೆ ಜೋರಾಗಿಯೇ ಶುರುವಾಗಿದೆ. ಪಾಳಿ ಪ್ರಕಾರ ಶಾಲೆ ನಡೆಸಲು ಸಾಧ್ಯವೇ ಇಲ್ಲ ಎಂದು ಪ್ರಾಥಮಿಕ ಶಿಕ್ಷಣದ ಮಾಜಿ ಸಚಿವ, ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಇದನ್ನೂ ಓದಿ; ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​, ಕಡ್ಡಾಯವಾಗಲಿದೆ ಆರೋಗ್ಯ ಸೇತು ಆ್ಯಪ್​ 

    ಅದಕ್ಕೆ ಬೇಕಾದಷ್ಟು ಮಾನವ ಸಂಪನ್ಮೂಲ ನಮ್ಮಲ್ಲಿ ಇಲ್ಲ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ 5, 6 ಸಾವಿರ ರೂ. ಸಂಬಳ ಕೊಡುತ್ತಾರೆ. ಅವರಿಂದ 12 ತಾಸು ಕೆಲಸ ಮಾಡಿಸಲು ಸಾಧ್ಯವೇ? ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳು ವಿಶಾಲವಾಗಿವೆ. ಆದರೆ, ಶೇ.40 ಮಕ್ಕಳು ನಗರ ಪ್ರದೇಶದಲ್ಲಿ ಇದ್ದಾರೆ. ಹೀಗಾಗಿ ಶಾಲೆಗಳಲ್ಲಿ ಸಾಮಾಜಿಕ ಅಂತರವೂ ಅಸಾಧ್ಯ ಎಂದು ಅವರು ಹೇಳಿದ್ದಾರೆ.

    ಪಿಡಬ್ಲ್ಯೂಡಿ ಇಲಾಖೆ ಕಲ್ಲು, ಮಣ್ಣುಗಳ ಜತೆ ಕೆಲಸ ಮಾಡುತ್ತೆ.  ಆದರೆ, ಶಿಕ್ಷಣ ಇಲಾಖೆ ಜೀವ, ಜೀವನ, ಕುಟುಂಬ, ಮಾನವ ಸಂಪನ್ಮೂಲ, ದೇಶದ ಭವಿಷ್ಯದ ಜತೆ ಕೆಲಸ ಮಾಡುತ್ತೆ. ಶಿಕ್ಷಣ ಇಲಾಖೆ ಬೇರೆ ಇಲಾಖೆಗಳ ರೀತಿ ಅಲ್ಲ. ಆದ್ದರಿಂದ ಶಾಲೆ ಆರಂಭಿಸುವ ವಿಚಾರದಲ್ಲಿ ಆತುರ ಬೇಡ. ಆಗಸ್ಟ್‌ನಲ್ಲಿ ಶಾಲೆ ಶುರು ಮಾಡಿದರೂ ಪಠ್ಯಕ್ರಮ ಮುಗಿಸಬಹುದು. ಸರ್ಕಾರ ನನ್ನ ಸಲಹೆಯನ್ನು ಪರಿಗಣಿಸುತ್ತೆ ಅಂತ ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…! 

    ರಜೆ ಕಟ್ ಮಾಡಿ, ಶೈಕ್ಷಣಿಕ ವರ್ಷ ಸರಿದೂಗಿಸಿ: ದಸರಾ ರಜೆ ಇದೆ, 10 ದಿನ ಕ್ರಿಸ್‌ಮಸ್ ರಜೆ ನೀಡಲಾಗುತ್ತದೆ. ಸತ್ತವರ ಹೆಸರಿನಲ್ಲಿ ರಜೆ ಇವೆ, ಜಯಂತಿಗಳಿವೆ. ಅದೆಲ್ಲವನ್ನೂ ಕಟ್ ಮಾಡಿ ಶಾಲೆ ನಡೆಸಿ. ಜಯಂತಿ ಆಚರಣೆ ಮಾಡದೇ ಇದ್ದರೆ ಏನೂ ಆಗುವುದಿಲ್ಲ ವಿಶ್ವನಾಥ್ ಸಲಹೆ ನೀಡಿದ್ದಾರೆ.

    ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts