More

    ಕುಡಿಯುವ ನೀರು ಸರಬರಾಜಿಗೆ ಅಡ್ಡಿ ಮಾಡುವುದು ಸರಿಯಲ್ಲ

    ದಾಂಡೇಲಿ: ಕಾಳಿ ನದಿ ನೀರನ್ನು ಹಳಿಯಾಳ ತಾಲೂಕಿನ 14 ಹಳ್ಳಿಗಳು, ಅಳ್ನಾವರ ಪಟ್ಟಣಕ್ಕೆ ಪೂರೈಸಲು 2017ರಲ್ಲಿ ಸರ್ಕಾರ ಒಪ್ಪಿಗೆ ನೀಡಿದೆ. ಕುಡಿಯುವ ನೀರು ಸರಬರಾಜಿಗೆ ಅಡ್ಡಿ ಮಾಡುವುದು ಸರಿಯಲ್ಲ. ನಿರಶನ ಹಿಂಪಡೆಯಿರಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿಕೊಂಡರು.

    ಕಾಳಿ ನದಿ ನೀರನ್ನು ಅಳ್ನಾವರಕ್ಕೆ ಸರಬರಾಜು ಮಾಡುವುದನ್ನು ವಿರೋಧಿಸಿ ದಾಂಡೇಲಿಯಲ್ಲಿ ಕೈಗೊಂಡ ನಿರಶನ 14ನೇ ದಿನಕ್ಕೆ ಕಾಲಿಟ್ಟಿದೆ. ನಿರಶನ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಅವರು ಪ್ರತಿಭಟನಾಕಾರರ ಜತೆಗೆ ಮಾತನಾಡಿದರು.

    ಈ ಯೋಜನೆಯಿಂದ ದಾಂಡೇಲಿ ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಇಲ್ಲಿನ ಜನರ ಹಿತ ಕಾಪಾಡಲು ಸದಾ ಶ್ರಮಿಸಲು ಸಿದ್ಧ ಎಂದರು.

    ದಾಂಡೇಲಿ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷೆ ಸಂಜಯ ನಂದ್ಯಾಳಕರ, ನಗರಸಭೆ ಕಾಂಗ್ರೆಸ್ ಸದಸ್ಯರು, ಸಿಪಿಐ ಪ್ರಭು ಗಂಗನಹಳ್ಳ, ಕಾಂಗ್ರೆಸ್ ಜಿಲ್ಲಾ ವಕ್ತಾರ ಆರ್.ಪಿ. ನಾಯ್ಕ, ತಹಸೀಲ್ದಾರ್ ಶೈಲೇಶ ಪರಮಾನಂದ, ದಾಂಡೇಲಿ ನಗರಸಭೆ ಪೌರಾಯುಕ್ತ ಗಣಪತಿ ಶಾಸ್ತ್ರಿ, ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂಖಾನ್, ಸಮಿತಿ ಸದಸ್ಯರು, ಇತರರಿದ್ದರು.

    ಸಂಧಾನ ಸೂತ್ರ ರೂಪಿಸಲಿ: ಶಾಸಕರು ಭೇಟಿ ನೀಡಿ ತೆರಳಿದ ನಂತರ ಪ್ರತಿಭಟನಾಕಾರರು ಸಭೆ ನಡೆಸಿದರು. ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಾಸಕರು ತಮ್ಮ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸಂಧಾನ ಸೂತ್ರ ತಿಳಿಸಿದರೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಕುರಿತು ಯೋಚಿಸಲಾಗುವುದು ಎಂಬ ತೀರ್ವನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts