More

  ಕೊಹ್ಲಿ ಟೀಕಿಸುವ ಭರದಲ್ಲಿ ಅನುಷ್ಕಾ ಎಳೆತಂದು ಕೆಟ್ಟದಾಗಿ ಟ್ವೀಟ್​ ಮಾಡಿದ ಲೇಖಕಿಗೆ ಟ್ವಿಟ್ಟಿಗರ ಟೀಕಾಸ್ತ್ರ!

  ನವದೆಹಲಿ: ಹತ್ತು ವಿಕೆಟ್​ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಸಾಕಷ್ಟು ಚರ್ಚೆಯಾಯಿತು.

  ಮೂರನೇ ಕ್ರಮಾಂಕದಲ್ಲಿ ಆಡಬೇಕಿದ್ದ ಕೊಹ್ಲಿ, ಕೆ.ಎಲ್​.ರಾಹುಲ್​ರನ್ನು ಕಣಕ್ಕಿಳಿಸಿ ತಾನು ನಾಲ್ಕನೇ ಕ್ರಮಾಂಕದಲ್ಲಿ ಇಳಿದರು. ಕೇವಲ 16 ರನ್​ ಗಳಿಸಿ ಬಂದಷ್ಟೇ ವೇಗವಾಗಿ ಪೆವಲಿಯನ್​ ಸೇರಿದರು. ಇದು ಇಂಡಿಯಾ ಸೋಲಿಗೆ ಕಾರಣವಾಯಿತು ಎಂಬುದು ಅನೇಕರ ಅಭಿಪ್ರಾಯವಾಯಿತು. ಹಿರಿಯ ಕ್ರಿಕೆಟಿಗರು ಕೂಡ ಅಸಮಾಧಾನ ಹೊರಹಾಕಿದ್ದರು.

  ಇದೇ ವೇಳೆ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಪ್ರಖ್ಯಾತ ಲೇಖಕಿ ಭಾವನಾ ಅರೋರ ಅವರು ಆಕ್ಷೇಪಾರ್ಹ ಟ್ವೀಟ್​ ಮಾಡುವ ಮೂಲಕ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಟ್ರೋಲ್​ ದಾಳಕ್ಕೆ ಸಿಲುಕಿದ್ದಾರೆ.

  ನಿನ್ನೆ ಟ್ವೀಟ್​ ಮಾಡಿರುವ ಭಾವನಾ ಅರೋರ, ಆಸ್ಟ್ರೇಲಿಯಾದವರೊಂದಿಗೆ ಕೊಹ್ಲಿ ವಿವಿಧ ಪೊಸಿಷನ್​ ಪ್ರಯತ್ನಿಸುತ್ತಿರುವುದು ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರಿಗೆ ಸಂತಸ ತಂದಿಲ್ಲ. ಯಾಕೆಂದರೆ ಅನುಷ್ಕಾರೊಂದಿಗೆ ಪ್ರಯತ್ನಿಸದೇ ಆಸ್ಟ್ರೇಲಿಯಾದವರೊಂದಿಗೆ ಪ್ರಯತ್ನಿಸಿರುವುದು ಅನುಷ್ಕಾಗೆ ಕೊಹ್ಲಿ ಮೇಲೆ ಸಿಟ್ಟು ಬಂದಿದೆ ಎಂದು ವ್ಯಂಗ್ಯವಾಡಿದ್ದರು. ಇಲ್ಲಿ ಅರೋರ, ಸೆಕ್ಸ್​ ಪೊಷಿಸನ್​ ಬಗ್ಗೆ ಟ್ವೀಟ್​ ಮಾಡಿ ಪರೋಕ್ಷವಾಗಿ ಕೊಹ್ಲಿಯನ್ನು ಹಾಗೂ ಅನುಷ್ಕಾರನ್ನು ಕುಟುಕಿದ್ದರು.

  ಇದಾದ ಬೆನ್ನಲ್ಲೇ ಭಾವನಾ ಅರೋರ ಮಾಡಿರುವ ಟ್ವೀಟ್​ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಲೇಖಕಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆದುಕೊಂಡಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. ಹೀಗೆ ಭಾವನಾ ಅರೋರ ಅವರನ್ನು ಮನಬಂದಂತೆ ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts