More

    ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಪ್ರಕರಣ; ಬೋಗಸ್​ ದಂಧೆ ಬಯಲಿಗೆಳೆದ IT ಇಲಾಖೆ

    ನವದೆಹಲಿ: ಆದಾಯ ತೆರಿಗೆ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಮಾರ್ಚ್​ 31ರಂದು ಕೆಲವು ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿ 1,000 ಕೋಟಿ ರೂ. ಹಣವನ್ನು ಅಕ್ರಮ ಎಂದು ಕಂಡು ಬಂದ ಹಿನ್ನಲೆಯಲ್ಲಿ ವಶಪಡಿಸಿಕೊಂಡಿತ್ತು.

    ಈ ಕುರಿತು ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ CBDT ಒಟ್ಟು 16 ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಮಾಡಲಾಗಿದ್ದು ಇವುಗಳು ಗ್ರಾಹಕರನ್ನು ತೆರಿಗೆ ಕಟ್ಟದಂತೆ ಅವರ ಹಣವನ್ನು ರೂಟಿಂಗ್​ನಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ದಾಳಿ ಮಾಡಲಾಗಿತ್ತು. ದಾಳಿಯ ವೇಳೆ 33 ಕೋಟಿ ರೂಪಾಯಿ ಹಣ ಹಾಗೂ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

    KYC ಅನುಸರಿಸಿಲ್ಲ

    CBDT ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಈ ಬ್ಯಾಂಕುಗಳು ಅಸ್ತಿತ್ವದಲ್ಲಿರದ ಕಂಪನಿಗಳ ಚೆಕ್​ಗಳನ್ನು ಡಿಸ್ಕೌಂಟ್​ ಮಾಡಿದೆ. ಇದರಲ್ಲಿ ಕಂಟ್ರ್ಯಾಕ್ಟರ್​, ರಿಯಲ್​ ಎಸ್ಟೇಟ್​ ಕಂಪನಿಗಳು ಸೇರಿದಂತೆ ಇತರರ ಚೆಕ್​ಗಳು ಸಹ ಒಳಗೊಂಡಿವೆ ಎಂದು ತಿಳಿಸಿದೆ.

    ಈ ಸಹಕಾರಿ ಬ್ಯಾಂಕುಗಳು ಚೆಕ್​ ಡಿಸ್ಕೌಂಟ್​ ಮಾಡುವ ವೇಳೆ KYCಯ ಯಾವುದೇ ಮಾನದಂಡಗಳನ್ನು ಅನುಸರಿಸಿಲ್ಲ ಎಂದು CBDT ಆರೋಪಿಸಿದೆ.

    ಇದನ್ನೂ ಓದಿ: ಎಚ್ಚರಿಕೆ ಹೊರತಾಗಿಯೂ ತಮ್ಮದೇ ಸರ್ಕಾರದ ವಿರುದ್ಧ ಉಪವಾಸ ಕುಳಿತ ಸಚಿನ್​ ಪೈಲಟ್​; ಶಿಸ್ತು ಕ್ರಮ ಸಾಧ್ಯತೆ

    ಡಿಸ್ಕೌಂಟ್​ ನಂತರ ನೇರ ಖಾತೆಗೆ

    ಚೆಕ್​ ಡಿಸ್ಕೌಂಟ್​ ಮಾಡಿದ ನಂತರ ಆ ಹಣವನ್ನು ನೇರ ಸಹಕಾರಿ ಬ್ಯಾಂಕುಗಳ ಖಾತೆಗೆ ಜಮಾವಣೆ ಮಾಡಲಾಗುತ್ತಿತ್ತು. ಇದರಲ್ಲಿ ಕೆಲವು ಸರ್ಕಾರಿ ಬ್ಯಾಂಕುಗಳ ಹಣವನ್ನು ಬಿಡಿಸಿ ಚೆಕ್​ ನೀಡಿದ ವ್ಯಕ್ತಿಗಳಿಗೆ ನೀಡುತ್ತಿತ್ತು ಮತ್ತು ಇದಕ್ಕೆ ಸೂಕ್ತ ಕಾರಣವನ್ನು ತಿಳಿಸಿರಲಿಲ್ಲ.

    ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಪ್ರಕರಣ; ಬೋಗಸ್​ ದಂಧೆ ಬಯಲಿಗೆಳೆದ IT ಇಲಾಖೆ

    ಹೆಚ್ಚಿನ ಮೊತ್ತದ ಚೆಕಗ್​ಗಳನ್ನು ಡಿಸ್ಕೌಂಟ್​ ಮಾಡಿಸುವ ಹಿಂದಿನ ಉದ್ದೇಶ ಏನೆಂದರೆ ಹೆಚ್ಚಿನ ಹಣವನ್ನು ಖಾತೆಯಿಂದ ತೆಗೆದುಕೊಳ್ಳುವ ಮೂಲಕ ನಕಲಿ ಕಂಪನಿಗಳು ಬೋಗಸ್​ ವೆಚ್ಚವನ್ನು ತೋರಿಸಲು ಧಾರಿ ಮಾಡಿಕೊಡುತ್ತಿದ್ದವು.

    ಸಹಕಾರಿ ಬ್ಯಾಂಕುಗಳ ಹೆಸರಿನಲ್ಲಿ ಧೋಖಾ

    ತೆರಿಗೆಯನ್ನು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಹಕಾರಿ ಬ್ಯಾಂಕುಗಳನ್ನು ಒಂದು ವಾಹಿನಿಯಾಗಿ ಬಳಸಿಕೊಳ್ಳಲಾಗಿದೆ. ಈ ಕಂಪನಿಗಳು ಆದಾಯ ತೆರಿಗೆ ನಿಯಮಗಳನ್ನು ಪಾಲಿಸದಿರುವುದು ಸ್ಪಷ್ಟವಾಗಿ ಗೋಚರಿಸಿವೆ.

    ಈ ರೀತಿ ಸುಮಾರು 1,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನ ಬೋಗಸ್​ ಎಂದು ತೋರಿಸಲಾಗಿದೆ ಎಂದು CBDT ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಠೇವಣಿ ಹಣ ಬಳಕೆ

    ಈ ಸಹಕಾರಿ ಬ್ಯಾಂಕುಗಳು ಗ್ರಾಹಕರು ಇರಿಸಿದ್ದ ಠೇವಣಿ ಹಣವನ್ನು FDR ತೆರೆಯಲು ಅವಕಾಶ ಮಾಡಿಕೊಟ್ಟಿದೆ ಮತ್ತು ಅದೇ ಹಣವನ್ನು ಬಳಸಿಕೊಂಡು ಸಾಲ ಮಂಜೂರು ಮಾಡಿದೆ. ತನಿಖೆ ವೇಳೆ ಈ ಬ್ಯಾಂಕುಗಳು ಸುಮಾರು 15 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಾಲವನ್ನಾಗಿ ನೀಡಿದೆ ಎಂದು ಕಂಡು ಬಂದಿದೆ.

    ಈ ರೀತಿ ಲೆಕ್ಕಕೆ ಸಿಗದ ಹಣವನ್ನು ಬ್ಯಾಂಕುಗಳು ರಿಯಲ್​ ಎಸ್ಟೇಟ್​ ಸೇರಿದಂತೆ ಬೇರೆ ಬೇರೆ ಕಡೆ ತೊಡಗಿಸಿದೆ. ಈ ಹಣಗಳನ್ನು ಬೇರೆ ಬೇರೆ ಮೂಲಗಳನ್ನು ತೋರಿಸುವ ಮೂಲಕ ಬ್ಯಾಂಕುಗಳ ಖಾತೆಗೆ ಹಿಂತಿರುಗಿಸಲಾಗಿದೆ.

    ಬ್ಯಾಂಕಿಗೆ ಸಂಬಂಧಪಟ್ಟ ವ್ಯಕ್ತಿಗಳು ಈ ಹಣವನ್ನು ಯಾವುದೇ ನಿಯಮಗಳನ್ನು ಪಾಲಿಸದೆ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ ಎಂದು CBDT ತನ್ನ ಪತಿಕ್ರಾ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts