More

    ಟ್ರೋಲ್​ ಮಾಡುವವರಿಗೆ ಖಡಕ್​ ರಿಪ್ಲೈ ಕೊಟ್ಟ ಸಲ್ಮಾನ್ ಖಾನ್​​

    ನವದೆಹಲಿ: ತಮ್ಮ ಫಿಟ್​ನೆಸ್​, ಮ್ಯಾನರಿಸಂ ಹಾಗೂ ದೇಹಾರೋಗ್ಯದಿಂದಾಗಿ ಬಾಲಿವುಡ್​ನಲ್ಲಿ ಹೆಚ್ಚು ಖ್ಯಾತಿ ಗಳಿಸಿರುವ ನಟರ ಪೈಕಿ ಮೊದಲು ಕೇಳಿ ಬರುವ ಹೆಸರು ಸಲ್ಮಾನ್​ ಖಾನ್ ಅವರದ್ದು.

    ಇನ್ನು ರಂಜಾನ್​ ಪ್ರಯುಕ್ತ ತಮ್ಮ ನಟನೆಯ ಬಹು ನಿರೀಕ್ಷಿತ ಕಿಸೀ ಕಾ ಭಾಯ್​ ಕಿಸೀ ಕಾ ಜಾನ್ ಸಿನಿಮಾ ಬಿಡುಗಡೆಯಾಗುತ್ತಿದ್ದು. ಚಿತ್ರದ ಪ್ರಮೋಷನ್ ವೇಳೆ ಸಲ್ಮಾನ್​ ಮಾಡಿದ ಆ ಒಂದು ಕೆಲಸ ವಿರೋಧಿಗಳ ಬಾಯಿ ಮುಚ್ಚಿಸಿದೆ.

    ಟ್ರೋಲ್​ ಮಾಡಿದವರಿಗೆ ಖಡಕ್ ರಿಪ್ಲೈ

    ಚಿತ್ರ ತಂಡವು ದೆಹಲಿಯ ಮಾಲ್​ ಒಂದರಲ್ಲಿ ಟ್ರೇಲರ್​ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಈ ವೇಳೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಸಲ್ಮಾನ್​ ವಿಭಿನ್ನವಾಗಿ ಉ್ತತರಿಸಿದ್ದಾರೆ.

    ಇದನ್ನೂ ಓದಿ: VIDEO| RCB vs LSG; ರೋಚಕ ಪಂದ್ಯ ಮುಗಿದ ಬಳಿಕ ಗಂಭೀರ್​​ ಮಾಡಿದ್ದಾದರೂ ಏನು?

    ಸಲ್ಮಾನ್​ ಖಾನ್​ ಅವರ ಫಿಟ್ನೆಸ್​ ಹಾಗೂ ಅವರ ಎಬಿಎಸ್​ ಬಗ್ಗೆ ಟ್ರೋಲ್​​ ಮಾಡಲಾಗುತ್ತಿತ್ತು. ಚಿತ್ರದಲ್ಲಿ ತೋರಿಸುವುದು ವಿಎಫ್​ಎಕ್ಸ್​ ಮಾಡಿರುವುದು ಎಂದು ಹಲವು ಬಾರಿ ಟ್ರೋಲ್​ ಮಾಡಲಾಗಿತ್ತು.

    ಇನ್ನು ಈ ಕುರಿತು ಕೇಳಲಾದ ಪ್ರಶ್ನೆಗೆ ಸಲ್ಮಾನ್​ ತಮ್ಮ ಶರ್ಟ್​ ಅನ್ನು ತೆಗೆದು ಎಬಿಎಸ್​ ಪ್ರದರ್ಶನ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ’

    ಮೌನ ಮುರಿದ ಸಲ್ಮಾನ್​

    ಇನ್ನು ಈ ಕುರಿತು ಮಾತನಾಡಿದ ಸಲ್ಮಾನ್​ ಹಮಾರಾ ಹಮೇಶ ಚಾರ್​ ಔರ್​ ಚಾರ್​ ಸೇ ಛೇ ಕೋ ಕನವರ್ಟ್​ ಹೋತಾ ಹೈ ಎಂದು ಟ್ರೋಲ್​ ಮಾಡಿದವರಿಗೆ ತಿರುಗೇಟು ನೀಡಿದ್ಧಾರೆ.

    57ನೇ ವಯಸಿನಲ್ಲಿಯೂ ನಟ ತಮ್ಮ ಫಿಟ್ನೆಸ್​ ಕಾಪಾಡಿಕೊಂಡಿರುವುದನ್ನು ನೆಟ್ಟಿಗರು ಶ್ಲಾಘಿಸಿದ್ದು ಮೆಚ್ಚುಗೆಯ ಮಹಾಪೂರವನ್ನೆ ಹರಿಸಿದ್ದಅರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts