ಗ್ಲಾಸ್ಗೋವ್: ಬ್ರಿಟನ್ನ ಕ್ಲೈಮೇಟ್ ಸಮ್ಮಿಟ್ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಒಂದೇ ಸೂರ್ಯ, ಒಂದೇ ಜಗತ್ತು, ಒಂದೇ ಗ್ರಿಡ್ ಯೋಜನೆಯನ್ನು ಪುನರುಚ್ಚರಿಸಿದ್ದಾರೆ.
ಮಾತ್ರವಲ್ಲ, ಕ್ಲೈಮೇಟ್ ಚೇಂಜ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸೌರಶಕ್ತಿ ಶುದ್ಧ ಹಾಗೂ ಸುಸ್ಥಿರ ಮೂಲ. ಆದರೆ ಇದು ಹಗಲು ಹೊತ್ತಿನಲ್ಲಿ ಮಾತ್ರ ಲಭ್ಯವಿರುವುದುದು ಮತ್ತು ವಾತಾವರಣಕ್ಕೆ ಅನುಗುಣವಾಗಿ ಇರುವುದು ಸ್ವಲ್ಪ ಸವಾಲಿನ ಅಂಶ ಎಂಬ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರೆಂಟ್ ಶಾಕ್ಗೆ ಮತ್ತೊಬ್ಬ ಬಾಲಕ ಬಲಿ; ನಿನ್ನೆ ಆಟ ಆಡಲು ಹೋಗಿದ್ದ ಬಾಲಕ ಇಂದು ಶವವಾಗಿ ಪತ್ತೆ
ಸೌರಶಕ್ತಿಯ ಸಮರ್ಪಕ ಹಾಗೂ ಸಮರ್ಥ ಬಳಕೆಗಾಗಿ ಅದನ್ನು ಸರಿಯಾಗಿ ನಿರ್ಧರಿಸಿ ಉಪಯೋಗಿಸಿಕೊಳ್ಳುವುದು ಅತಿ ಅಗತ್ಯ. ಜಗತ್ತಿನ ಎಲ್ಲ ಭಾಗದ ಸೌರಶಕ್ತಿಯನ್ನು ಅಂದಾಜಿಸಿ ಸೂಚಿಸುವ ನಿಟ್ಟಿನಲ್ಲಿ ಇಸ್ರೋ ಒಂದು ಸೋಲಾರ್ ಕ್ಯಾಲ್ಕುಲೇಟರ್ ಅಪ್ಲಿಕೇಷನ್ವೊಂದನ್ನು ರೂಪಿಸಿ ಜಗತ್ತಿಗೆ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್ಫೋನ್ ಸ್ವಿಚ್ಡ್ ಆಫ್ ಮಾಡಿ ಪರಾರಿ