More

    ಇಸ್ರೋದಿಂದ 36 ಒನ್​ವೆಬ್ ಉಪಗ್ರಹ ಉಡಾವಣೆ ಯಶಸ್ವಿ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಮಾ.26) ಬೆಳಗ್ಗೆ 36 ಒನ್‌ವೆಬ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಭಾರತದ ಅತ್ಯಂತ ಭಾರದ ಉಡಾವಣಾ ನೌಕೆ ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್​ವಿಎಂ-3) ಈ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್-ಎಲ್​ಇಒ) ಕೊಂಡೊಯ್ಯಿತು.

    ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಉಡಾವಣೆಯೊಂದಿಗೆ, ಭೂಮಿಯ ಸುತ್ತ 648 ಉಪಗ್ರಹಗಳ ಗುಚ್ಛವನ್ನು ಹಾರಿಸುವ ಯುಕೆ ಕಂಪನಿಯ ಮಿಷನ್ ಪೂರ್ಣಗೊಂಡಿದೆ.

    ಇದನ್ನೂ ಓದಿ: ಸಾವಿನ ಅಂಚಿನಲ್ಲಿದ್ದ ಯುವಕನ ರಕ್ಷಣೆ: ಕಾನ್​ಸ್ಟೆಬಲ್ ಸಮಯಪ್ರಜ್ಞೆಗೆ ಸಲ್ಯೂಟ್​ ಹೊಡೆಯಲೇಬೇಕು

    ಉಪಗ್ರಹಗಳನ್ನು ವಿಮಾನಗಳಂತೆ ತಲಾ 12ರ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳು ಭೂಮಿಯಿಂದ 1,200 ಕಿಲೋಮೀಟರ್ ಎತ್ತರದಲ್ಲಿ ಕಾರ್ಯಾಚರಿಸಲಿವೆ. ಈ ವಿಮಾನಗಳನ್ನು ತಲಾ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಬಿಡಲಾಗುತ್ತದೆ. ಒಂದಕ್ಕೊಂದು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು ಅದರ ಉದ್ದೇಶವಾಗಿದೆ.

    ಬ್ರಾಡ್​ಬ್ಯಾಂಡ್ ಸಂಪರ್ಕ
    ಒನ್​ವೆಬ್ ಗುಚ್ಛವು ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಒಂದು ಜಾಲವಾಗಿದೆ. ಜಗತ್ತಿನಾದ್ಯಂತ ಬ್ರಾಡ್​ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಯುಕೆ ಕಂಪನಿಯು ಉಪಗ್ರಹಗಳ ಎಲ್​ಇಒ ಗುಚ್ಛ ಅನುಷ್ಠಾನದ ಹೊಣೆ ಹೊತ್ತಿದೆ. (ಏಜೆನ್ಸೀಸ್​)

    ನಂಗೇನು ನಾಚಿಕೆ ಇಲ್ಲ! ಮೋದಿ ಕುರಿತ ಹಳೇ ಟ್ವೀಟ್ ವೈರಲ್​, ಸಮರ್ಥನೆ ನೀಡಿದ ಖುಷ್ಬೂ ಸುಂದರ್

    ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

    ಜುಲೈನಲ್ಲಿ ಧನುಷ್​ ಜತೆ ಮದುವೆ! ನಟಿ ಮೀನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts