More

    ಸಂಘರ್ಷಗಳಿಂದ ತುಂಬಿರುವ ಜಗತ್ತು ಯಾರಿಗೂ ಪ್ರಯೋಜನವಾಗುವುದಿಲ್ಲ: ಪ್ರಧಾನಿ ಮೋದಿ ಶಾಂತಿ ಮಂತ್ರ

    ನವದೆಹಲಿ: ಪ್ರಪಂಚದ ಯಾವುದೇ ಭಾಗದಲ್ಲಿ ನಡೆಯುವ ಸಂಘರ್ಷಗಳು ಮತ್ತು ಘರ್ಷಣೆಗಳು ಪ್ರತಿಯೊಬ್ಬರ ಮೇಲೆಯೂ ಪರಿಣಾಮ ಬೀರುತ್ತದೆ ಹೊರತೂ ಅದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಜಗತ್ತು ಮಾನವ ಕೇಂದ್ರಿತ ವಿಧಾನದೊಂದಿಗೆ ಮುನ್ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

    ಒಂಬತ್ತನೇ ಜಿ-20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ (ಪಿ 20)ಯನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಇಸ್ರೇಲ್​-ಪ್ಯಾಲೆಸ್ತೀನ್​ ಸಂಘರ್ಷವನ್ನು ಉದ್ದೇಶಿಸಿ ಮಾತನಾಡಿದರು. ಘರ್ಷಣೆಗಳಿಂದ ತುಂಬಿರುವ ಪ್ರಪಂಚವು ಯಾರಿಗೂ ಪ್ರಯೋಜನವಾಗುವುದಿಲ್ಲ. ವಿಭಜಿತ ಜಗತ್ತು ನಮ್ಮ ಮುಂದಿರುವ ಸವಾಲುಗಳಿಗೆ ಯಾವುದೇ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ. ಇದು ಶಾಂತಿ ಮತ್ತು ಸಹೋದರತ್ವದ ಸಮಯ, ಒಟ್ಟಿಗೆ ಸಾಗುವ ಸಮಯ, ಒಟ್ಟಿಗೆ ಮುನ್ನಡೆಯುವ ಸಮಯ ಮತ್ತು ಇದು ಎಲ್ಲರ ಅಭಿವೃದ್ಧಿ ಮತ್ತು ಕಲ್ಯಾಣದ ಸಮಯ ಎಂದು ಪ್ರಧಾನಿ ಮೋದಿ ಹೇಳಿದರು.

    ಭಾರತವು ಹಲವು ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಸುಮಾರು 20 ವರ್ಷಗಳ ಹಿಂದೆ ನಮ್ಮ ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಉಗ್ರರು ದಾಳಿ ಮಾಡಿದ್ದರು. ಭಯೋತ್ಪಾದನೆ ಜಗತ್ತಿಗೆ ಎಷ್ಟು ದೊಡ್ಡ ಸವಾಲಾಗಿದೆ ಮತ್ತು ಅದು ಮಾನವೀಯತೆಗೆ ವಿರುದ್ಧವಾಗಿದೆ ಎಂಬುದನ್ನು ಜಗತ್ತು ಅರಿತುಕೊಳ್ಳುತ್ತಿದೆ. ವಿಶ್ವದ ಸಂಸತ್ತುಗಳು ಮತ್ತು ಅವರ ಪ್ರತಿನಿಧಿಗಳು ಭಯೋತ್ಪಾದನೆಯ ವಿರುದ್ಧದ ಹೇಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ಯೋಚಿಸಬೇಕಿದೆ ಎಂದು ಪ್ರಧಾನಿ ತಿಳಿಸಿದರು.

    ಇದನ್ನೂ ಓದಿ: 39ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಹೋರಾಟ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿಗೆ ಸಂಘಟನೆಗಳ ಬೆಂಬಲ

    ಇದೇ ಸಂದರ್ಭದಲ್ಲಿ ಚುನಾವಣೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಅತಿ ದೊಡ್ಡ ಹಬ್ಬವೆಂದು ಪರಿಗಣಿಸಲಾಗಿದೆ. ಸ್ವಾತಂತ್ರ್ಯದ ನಂತರ ಭಾರತವು 17 ಸಾರ್ವತ್ರಿಕ ಚುನಾವಣೆಗಳನ್ನು ಮತ್ತು 300ಕ್ಕೂ ಹೆಚ್ಚು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಭಾರತವು ಅತಿ ದೊಡ್ಡ ಚುನಾವಣೆಯನ್ನು ನಡೆಸುತ್ತಿದೆ ಮತ್ತು ಜನರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ನಡೆದ 2019ರ ಸಾರ್ವತ್ರಿಕ ಚುನಾವಣೆಗಳು ಇತಿಹಾಸದಲ್ಲೇ ಅತಿದೊಡ್ಡ ಚುನಾವಣಾಯಾಗಿದೆ. 600 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರು ಈ ಚುನಾವಣೆಯಲ್ಲಿ ಭಾಗವಹಿಸಿದ್ದರು. 2019ರ ಚುನಾವಣೆಯಲ್ಲಿ ದಾಖಲಾದ 70% ರಷ್ಟು ಮತದಾನವು ಭಾರತದ ಸಂಸದೀಯ ಆಚರಣೆಗಳ ಮೇಲಿನ ಜನರ ನಂಬಿಕೆಯನ್ನು ತೋರಿಸುತ್ತದೆ. 2019ರಲ್ಲಿ 600 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿದ್ದವು ಎಂದರು.

    ಭಾರತವು ಇಂದು ಚಂದ್ರನ ಮೇಲೆ ಇಳಿಯಿತು. ಭಾರತವು ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಇಂದು ನಾವು P20 ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ. ಈ ಶೃಂಗಸಭೆಯು ನಮ್ಮ ದೇಶದ ಜನರ ಶಕ್ತಿಯನ್ನು ಆಚರಿಸುವ ಮಾಧ್ಯಮವಾಗಿದೆ. ಭಾರತವೂ ಪ್ರಜಾಪ್ರಭುತ್ವದ ತಾಯಿ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೂ ಆಗಿದೆ ಎಂದರು. (ಏಜೆನ್ಸೀಸ್​)

    Navratri 2023: ನವರಾತ್ರಿ ಸಮಯದಲ್ಲಿ ಈ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದರೆ ಎಲ್ಲಾ ಆಸೆಗಳು ಈಡೇರುತ್ತವೆಯಂತೆ!

    ಭಾರತದ ಈ ಶಾಲೆಯಲ್ಲಿ ಪ್ಲ್ಯಾಸ್ಟಿಕ್​ ಬಾಟಲ್​ಗಳೇ ಶುಲ್ಕ! 1 ರೂ. ಖರ್ಚು ಮಾಡದೇ ಕಲಿಯುವ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts