More

    ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಐಸಿಸ್​ ಉಗ್ರಸಂಘಟನೆ ಯುಎಸ್​, ಯುಕೆ ಸೇನಾಪಡೆಗಳಿಗಿಂತ ಮುಂದಿದೆ: ಸೇನಾ ಮುಖ್ಯಸ್ಥ ಎಂ.ಎಂ.ನಾರವಾನೆ

    ನವದೆಹಲಿ: ಐಸಿಸ್​ ಉಗ್ರಸಂಘಟನೆ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿಪರೀತ ಮುಂದುವರಿದಿದೆ ಎಂದು ಸೇನಾ ಮುಖ್ಯಸ್ಥ ಎಂ.ಎಂ.ನಾರವಾನೆ ತಿಳಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಸೆಮಿನಾರ್​ವೊಂದರಲ್ಲಿ ‘ಭೂಯುದ್ಧದ ಗುಣಲಕ್ಷಣಗಳ ಬದಲಾವಣೆ ಮತ್ತು ಸೇನೆಯ ಮೇಲೆ ಅದರ ಪ್ರಭಾವ’ ಎಂಬ ವಿಷಯದ ಕುರಿತು ಮಾತನಾಡಿದ ನಾರವಾನೆ, ಇರಾನ್ ಹಾಗೂ ಸಿರಿಯಾಗಳಲ್ಲಿ ಐಸಿಸ್​ ಉಗ್ರಸಂಘಟನೆ ಇನ್ನೂ 17ನೇ ಶತಮಾನದ ಸಂಪ್ರದಾಯದಲ್ಲೇ ಮುಳುಗಿದೆ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದರಲ್ಲಿ 21 ನೇ ಶತಮಾನದ ಆಧುನಿಕತೆ ಮೈಗೂಡಿಸಿಕೊಂಡಿರುವ ಅಮೆರಿಕ, ಲಂಡನ್​ ಸೇನಾಪಡೆಗಳಿಂತ ಮುಂದುವರಿದಿದೆ ಎಂದು ತಿಳಿಸಿದರು.

    ಚೀನಾದ ಸೇನಾ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು, ಚೀನಾ ಈಗ ಕೆಲವು ದಶಕಗಳಿಂದ ಭಾರತದೊಂದಿಗೆ ಅಶಿಸ್ತಿನ ಹೋರಾಟ ತೋರುತ್ತಿಲ್ಲ. ಆದರೂ ಅದು ತನ್ನ ಮಿಲಿಟರಿ ಸಾಮರ್ಥ್ಯವನ್ನು ನಿಯಮಿತವಾಗಿ ತೋರಿಸುತ್ತಿದೆ. ಆಧುನಿಕ, ಪ್ರಮುಖ ತಂತ್ರಜ್ಞಾನ ಅಳವಡಿಸಿಕೊಂಡಿರುವ ಸೇನೆಗಳಲ್ಲಿ ಚೀನಾ ಕೂಡ ಅತ್ಯಂತ ಸಮರ್ಥವಾಗಿದೆ ಎಂಬುದು ನಿರ್ವಿವಾದ ಎಂದು ಹೇಳಿದರು.

    ಭಾರತೀಯ ಸೇನೆಗಳೂ ಕೂಡ ಎಲ್ಲದಕ್ಕೂ ಸಜ್ಜಾಗಿವೆ. ನಮ್ಮ ತಂಟೆಗೆ ಬರುವವರಿಗೆ ಕ್ರಿಯಾತ್ಮಕವಾಗಿ, ಚುರುಕಾಗಿ ಪ್ರತಿಕ್ರಿಯೆ ನೀಡುತ್ತಿದ್ದೇವೆ. ನಮ್ಮ ಪಶ್ಚಿಮ ಮತ್ತು ಉತ್ತರದ ಗಡಿಭಾಗಗಳಲ್ಲಿ ನಮ್ಮ ಸೇನಾ ಸಾಮರ್ಥ್ಯವನ್ನು ಪರಿಷ್ಕರಿಸುತ್ತಿದ್ದೇವೆ. ನಾವು ಚಲನಾಶೀಲ ಮತ್ತು ನಿರ್ಲಿಪ್ತತೆ ಎರಡೂ ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ಕೊರೊನಾ ವೈರಸ್ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts