More

    ದ್ವಿಚಕ್ರವಾಹನ ಸವಾರರೇ ಎಚ್ಚರ: ಈ ಹೆಲ್ಮೆಟ್​​ ಅನ್ನೇ ಧರಿಸಬೇಕು, ಇಲ್ಲದಿದ್ದರೆ ಕಟ್ಟಬೇಕಾಗುತ್ತೆ 2000 ರೂ.ದಂಡ!

    ನವದೆಹಲಿ: ದ್ವಿಚಕ್ರವಾಹನ ಸವಾರರು ಹೆಲ್ಮೆಟ್​​ ಧರಿಸದಿದ್ದರೆ ದಂಡ ಪಾವತಿಸಬೇಕಿತ್ತು. ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದ್ದು, ಸರ್ಕಾರ ಹೇಳಿರುವ ಮಾರ್ಕ್​​ ಇರುವ ಹೆಲ್ಮೆಟ್ಟನ್ನೇ ಧರಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.

    ಈವೆರಗೂ ಹೆಲ್ಮೆಟ್​ ಧರಿಸದವರಿಗೆ ದಂಡ ವಿಧಿಸಲಾಗುತ್ತಿತ್ತು. ಈಗ ಹೆಲ್ಮೆಟ್​ ಧರಿಸಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅರೆ… ಏನಿದು ಹೆಲ್ಮೆಟ್​ ಧರಿಸದರೂ ಯಾಕೆ ದಂಡ ಪಾವತಿಸಬೇಕು ಎನ್ನುವವರಿಗೆ ಇಲ್ಲಿದೆ ಉತ್ತರ.

    ಹೌದು…. ಮೋಟಾರ್​ ವೆಹಿಕಲ್​ ಕಾಯಿದೆ ಅನ್ವಯ ದ್ವಿ-ಚಕ್ರ ವಾಹನ ಚಲಾಯಿಸುವವರು ಕಡ್ಡಾಯವಾಗಿ ಹೆಲ್ಮೆಟ್​​ ಧರಿಸುವುದು ಹಿಂದಿನ ನಿಯಮವಾಗಿತ್ತು. ಈಗ ಹೆಲ್ಮೆಟ್​​ ಜತೆಗೆ ಐಎಸ್​​ಐ ಮಾರ್ಕ್​​ ಹೊಂದಿರುವುದು ಕೂಡ ಕಡ್ಡಾಯವಾಗಿದೆ.

    ಒಂದು ವೇಳೆ ಐಎಸ್​​ಐ ಮಾರ್ಕ್​ ಇಲ್ಲದಿದ್ದರೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನು ಈ ಹೆಲ್ಮೆಟ್​​ ಮಾನದಂಡಗಳಿಗನುಗುಣವಾಗಿ ಪೂರ್ತಿ ತಲೆಯನ್ನು ಮುಚ್ಚಿರಬೇಕು. ಇದಕ್ಕೂ 1000 ರೂ. ದಂಡ ಎರಡು ಸೇರಿ ಒಟ್ಟು 2 ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ.

    2021 ಜೂನ್​ 1 ರಿಂದ ಐಎಸ್​ಐ ಮಾರ್ಕ್​ ಇಲ್ಲದ ಹೆಲ್ಮೆಟ್​ ಬಳಕೆಯನ್ನು ನಿಷೇಧಿಸಲಾಗಿದೆ. ಒಟ್ಟಾರೆ ದ್ವಿ ಚಕ್ರ ವಾಹನ ಬಳಕೆದಾರರು ಐಎಸ್​ಐ ಮಾರ್ಕ್​ ಇರುವ ಹೆಲ್ಮೆಟ್​​ನ್ನೇ ಧರಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts